ಅಂತರಾಷ್ಟ್ರೀಯ

ಪಾಕಿಸ್ತಾನ: 19 ಮಂದಿಯನ್ನು ಗುಂಡಿಕ್ಕಿ ಕೊಂದ ಬಂದೂಕುದಾರಿ

Pinterest LinkedIn Tumblr


ಖ್ವೆಟ್ಟಾ: ಯುರೋಪ್ ಗೆ ಪ್ರಯಾಣ ಬೆಳೆಸಲು ಯೋಜಿಸಿದ್ದ 19 ಮಂದಿಯನ್ನು ಬಂದೂಕುದಾರಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನೈಋತ್ಯ ಪಾಕಿಸ್ತಾನದಲ್ಲಿ ನಡೆದಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.

ಕಣಿವೆ ಗ್ರಾಮದಲ್ಲಿ 18ರಿಂದ 30 ವರ್ಷದೊಳಗಿನ 19 ಮಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಮೃತರೆಲ್ಲರೂ ಪಂಜಾಬ್ ಪ್ರಾಂತ್ಯದವರಾಗಿದ್ದು, ಕಾರ್ಮಿಕರಾಗಿ ಕೆಲಸ ಮಾಡುವುದಕ್ಕಾಗಿ ಯುರೋಪ್ ತೆರಳು ಸಿದ್ಧತೆ ನಡೆಸಿದ್ದರು ಎಂಬುದು ಅವರ ಪ್ರಯಾಣ ದಾಖಲೆಗಳಿಂದ ತಿಳಿದು ಬಂದಿರುವುದಾಗಿ ತರ್ಬತ್ ಜಿಲ್ಲೆಯ ಆಡಳಿತಾಧಿಕಾರಿ ದರ್ಮೂನ್ ಬವಾನಿ ಅವರು ಹೇಳಿದ್ದಾರೆ.

ಹತ್ಯೆಯಾದ 19 ಮಂದಿಯ ಮೃತ ದೇಹಗಳು ಇಂದು ಪತ್ತೆಯಾಗಿದ್ದು, ಇದುವರೆಗೂ ಯಾವುದೇ ಉಗ್ರ ಸಂಘಟನೆ ದಾಳಿ ಹೊಣೆ ಹೊತ್ತುಕೊಂಡಿಲ್ಲ. ಕಳೆದ ಹಲವು ದಿನಗಳಿಂದ ಈ ಪ್ರದೇಶದಲ್ಲಿ ಬಲೂಚ್ ಪ್ರತ್ಯೇಕವಾದಿಗಳು ಮತ್ತು ಇಸ್ಲಾಮಿಕ್ ಸ್ಟೆಟ್ ಉಗ್ರರು ಕಾರ್ಯಾಚರಣೆ ನಡೆಸುತ್ತಿದ್ದು, ಅವರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

Comments are closed.