ಮನೋರಂಜನೆ

ಉಂಗುರ ಬದಲಾಯಿಸಿಕೊಂಡ ಚಿರು-ಮೇಘನಾ

Pinterest LinkedIn Tumblr


ನಟಿ ಮೇಘನಾ ರಾಜ್‌ ನಿವಾಸದಲ್ಲಿ ಚಿರು-ಮೇಘನಾ ನಿಶ್ಚಿತಾರ್ಥ ನೆರವೇರಿತು. ಈ ಮೂಲಕ ಚಂದನವನದ ಎರಡು ಸಿನಿ ಕುಟುಂಬಗಳು ಒಂದಾದವು. ಇದರೊಂದಿಗೆ ಸ್ಯಾಂಡಲ್‌‌ವುಡ್‌‌‌ ಮತ್ತೊಂದು ತಾರಾ ಜೋಡಿಯ ಮದುವೆ ಸಂಭ್ರಮಕ್ಕೆ ಸಜ್ಜಾಗುತ್ತಿದೆ.

ಹೌದು, ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್‌ ನಿಶ್ಚಿತಾರ್ಥ ಕಾರ್ಯಕ್ರಮ ರವಿವಾರ ಬೆಂಗಳೂರಿನ ಮೇಘನಾ ರಾಜ್‌ ಮನೆಯಲ್ಲಿ ನಡೆಯಿತು. ಮಧ್ಯಾಹ್ನ ಜೆ.ಪಿ.ನಗರದಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಎರಡು ಕುಟುಂಬದ ಸದಸ್ಯರಾದ ಸುಂದರ್‌ ರಾಜ್‌, ಪ್ರಮೀಳಾ ಜೋಷಾಯಿ, ನಟ ಅರ್ಜುನ್‌ ಸರ್ಜಾ, ಪತ್ನಿ ಆಶಾರಾಣಿ ಹಾಗೂ ಪುತ್ರಿ ಐಶ್ವರ್ಯ ಮತ್ತು ಧ್ರುವ ಸರ್ಜಾ ಭಾಗವಹಿಸಿದ್ದರು. ಸಾಂಪ್ರದಾಯಿಕವಾಗಿ ತಾಂಬೂಲ ಮತ್ತು ಸೀರೆ ನೀಡುವ ಶಾಸ್ತ್ರದ ಮೂಲಕ ನಿಶ್ಚಿತಾರ್ಥ ನೆರವೇರಿತು.

ನಿಶ್ಚಿತಾರ್ಥದ ಭಾಗವಾಗಿ ರವಿವಾರ ಸಂಜೆ ಬೆಂಗಳೂರಿನ ಲೀಲಾ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಉಭಯ ಕುಟುಂಬಗಳು ಚಿತ್ರರಂಗದ ಹಿನ್ನೆಲೆ ಹೊಂದಿರುವುದರಿಂದ ಸಿನಿಮಾ ರಂಗದ ಗಣ್ಯರು ಸಂಜೆಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಮೂಲಗಳ ಪ್ರಕಾರ ಕಿಚ್ಚ ಸುದೀಪ್‌, ರೆಬೆಲ್ ಸ್ಟಾರ್ ಅಂಬರೀಶ್, ನವರಸ ನಾಯಕ ಜಗ್ಗೇಶ್, ರಕ್ಷಿತ್ ಶೆಟ್ಟಿ, ಯಶ್ ದಂಪತಿ, ದೇವರಾಜ್, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್, ನಾಗಾಭರಣ ಸೇರಿದಂತೆ ಮಲಯಾಳಂ ಚಿತ್ರರಂಗದವರೂ ಆಗಮಿಸುವ ಸಾಧ್ಯತೆಯಿದೆ. ಇನ್ನು ಚಿರು ಮತ್ತು ಮೇಘನಾ ಕುಟುಂಬದ ಆಪ್ತರು ಮತ್ತು ಗೆಳೆಯರಿಗೆ ಮಾತ್ರ ಈ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆಯಂತೆ.

Comments are closed.