ಕರ್ನಾಟಕ

ದಾಳಿ ನಡೆಸಲು ಹೋಗಿದ್ದ ಐಟಿ ಅಧಿಕಾರಿಗಳ ಮೇಲೆ ನಾಯಿ ಛೂ ಬಿಟ್ಟ ವೃದ್ಧೆ

Pinterest LinkedIn Tumblr

dog

ಬೆಂಗಳೂರು: ಕಪ್ಪುಕುಳುಗಳ ಬೆನ್ನು ಬಿದ್ದ ಐಟಿ ಅಧಿಕಾರಿಗಳಿಗೆ ಕಂಡು ಕೇಳರಿಯದಂಥಾ ಅನುಭವವಾಗಿದೆ. ದಾಳಿ ನಡೆಸಲು ಹೋಗಿದ್ದ ಐಟಿ ಅಧಿಕಾರಿಗಳ ಮೇಲೆ ವೃದ್ಧೆಯೊಬ್ಬರು ನಾಯಿ ಛೂ ಬಿಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಭ್ರಷ್ಟರು ತಮ್ಮ ಹಣವನ್ನು ಪತ್ತೆಯಾಗದಂತೆ ಮುಚ್ಚಿಸುವುದು ಸಾಮಾನ್ಯ ಆದರೆ ಇಲ್ಲೊಬ್ಬ ಮಹಿಳೆ ಕಪ್ಪುಹಣಕ್ಕೆ ನಾಯಿಗಳನ್ನು ಕಾವಲಿಟ್ಟಿರುವುದನ್ನು ಕಂಡ ಆದಾಯ ತೆರಿಗೆ ಅಧಿಕಾರಿಗಳು ಕಂಗಾಲಾಗಿದ್ದರು. ಅಂತೂ ಇಂತೂ ಪೊಲೀಸರು ಹಾಗೂ ಸ್ಥಳೀಯರ ಸಹಾಯದೊಂದಿಗೆ ಮನೆಯನ್ನು ಜಪ್ತಿ ಮಾಡಿ ಕೋಟ್ಯಾಂತರ ಮೊತ್ತವನ್ನು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ಯಶವಂತಪುರದ ತುಮಕೂರು ಮುಖ್ಯರಸ್ತೆಯಲ್ಲಿರುವ ಆರ್ಎನ್ಎಸ್ ಶಾಂತಿನಿವಾಸ ಅಪಾರ್ಟ್ ಮೆಂಟ್ ಮೇಲೆ ಡಿ.13ರಂದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ 2.89 ಕೋಟಿ ರುಪಾಯಿ ಹಣವನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ 2.25 ಕೋಟಿ ರುಪಾಯಿ 2000 ಮುಖಬೆಲೆಯ ನೋಟುಗಳಾಗಿವೆ.

ಅಪಾರ್ಟ್ ಮೆಂಟ್ ನ ಎ ಬ್ಲಾಕ್ ನ 5ನೇ ಅಂತಸ್ತಿನಲ್ಲಿರುವ ಫ್ಲಾಟ್ ಸಂಖ್ಯೆ 508ರಲ್ಲಿ ಲೆಕ್ಕವಿಡದ ಹಣ ಇದೆ ಎಂಬ ಮಾಹಿತಿ ಆಧರಿಸಿ ಫ್ಲಾಟ್ ಗೆ ಹೋದಾಗ ಡಾ. ಶಕೀಲಾ ಶೆಟ್ಟಿ ಎಂಬ ವೃದ್ಧೆ ಎರಡು ನಾಯಿಗಳೊಂದಿಗೆ ಮನೆಯಲ್ಲಿರುತ್ತಾರೆ. ಮೊದಲಿಗೆ ಮನೆಗೆ ಕಾವಲಿದ್ದ ನಾಯಿಗಳನ್ನು ಕಟ್ಟಿಹಾಕಲು ಒಪ್ಪದಿದ್ದ ವೃದ್ಧೆ ನಂತರ ಪೊಲೀಸರು ಬಂದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಮನೆ ಒಳಗೆ ಬಿಟ್ಟುಕೊಂಡರು.

Comments are closed.