ಪ್ರಮುಖ ವರದಿಗಳು

ಜಯಲಲಿತಾರ ಸಮಾಧಿ ಒಳಗಿಂದ ಕೇಳಿ ಬರುತ್ತಿದೆ ಟಿಕ್‌.. ಟಿಕ್‌… ಶಬ್ದ!

Pinterest LinkedIn Tumblr

ja

ಚೆನ್ನೈ: ಟಿಕ್‌… ಟಿಕ್‌… ಅಗೋಚರ ಶಬ್ದ! ಕಿವಿಕೊಟ್ಟರೆ ಸಮಾಧಿ ಒಳಗಿಂದ ಗಡಿಯಾರದ ಶಬ್ದ ಕೇಳಿಬರುತ್ತಿದೆಯಂತೆ. ಇದೇ ಕಾರಣಕ್ಕೆ ತಮಿಳುನಾಡಿನ ಹಿಂದಿನ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಹೂಳಿದ ಮರೀನಾ ಬೀಚ್‌ನ ಸಮಾಧಿ ಈಗ ಕುತೂಹಲದ ಕೇಂದ್ರ ಬಿಂದು!

ಹೌದು.. ಈ ವಿಚಿತ್ರ ನೋಡಲು ಇದೀಗ ಮರೀನಾ ಬೀಚ್‌ ಬಳಿ ಇರುವ ಸಮಾಧಿ ಸುತ್ತ ಜನರ ದಂಡು! ಜಯಲಲಿತಾ ಅವರ ಶರೀರದ ಜತೆ ಅವರ ವಾಚನ್ನೂ ಸೇರಿದಂತೆ ಸಮಾಧಿ ಮಾಡಲಾಗಿದೆ ಎಂಬ ವದಂತಿಗಳಿವೆ. ಇದೇ ಕಾರಣಕ್ಕೆ ಸಮಾಧಿ ಒಳಗಿಂದ ಈಗ ಟಿಕ್‌.. ಟಿಕ್‌.. ಗಡಿಯಾರದ ಶಬ್ದ ಕೇಳುತ್ತಿದೆ ಎಂಬ ಅಂತೆಕಂತೆಗಳು ಮೊಳಕೆ ಒಡೆದಿವೆ. ಪರಿಣಾಮ, ಸಮಾಧಿಗೆ ಕಿವಿಕೊಟ್ಟು ಗಡಿಯಾರದ ಶಬ್ದ ಕೇಳಬೇಕು ಎಂದು ಅಭಿಮಾನಿಗಳು ಅಲ್ಲಿಗೆ ತೆರಳುತ್ತಿದ್ದಾರೆ ಎನ್ನಲಾಗಿದೆ.

ಇದೇ ರೀತಿ ಜಯಾ ಅವರ ಗುರು ಎಂಜಿಆರ್‌ ಅವರ ಶವವನ್ನೂ ಅವರ ವಾಚಿನ ಸಮೇತ ಹೂಳಲಾಗಿತ್ತು. ಅಲ್ಲೂ ಕೂಡ ಈಗಲೂ ವಾಚಿನ ಶಬ್ದ ಕೇಳುತ್ತಿದೆ ಎಂದು ಅಭಿಮಾನಿಗಳು ಸಮಾಧಿಗೆ ಕಿವಿಗೊಟ್ಟು ಕೇಳುತ್ತಾರಂತೆ!

(ಉದಯವಾಣಿ)

Comments are closed.