ಪ್ರಮುಖ ವರದಿಗಳು

ನೋಟು ಬ್ಯಾನ್; ತಮ್ಮ ವೈಯಕ್ತಿಕ ಅನುಭವದ ನಿಲುವನ್ನು ತಿಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ ಪ್ರಧಾನಿ ನರೇಂದ್ರ ಮೋದಿ

Pinterest LinkedIn Tumblr

modi

ನವದೆಹಲಿ: 500 ಮತ್ತು 1000 ರೂ ನೋಟುಗಳನ್ನು ಹಿಂಪಡೆದಿರುವ ಕೇಂದ್ರ ಸರ್ಕಾರದ ನಡೆಯನ್ನು ರೇಟ್ ಮಾಡಿ ತಮ್ಮ ವೈಯಕ್ತಿಕ ಅನುಭವದ ನಿಲುವನ್ನು ತಿಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

“ನೋಟುಗಳನ್ನು ಹಿಂಪಡೆದಿರುವ ನಿರ್ಧಾರದ ಬಗ್ಗೆ ನಿಮ್ಮ ವೈಯಕ್ತಿಕ ಅನುಭವದ ಅಭಿಪ್ರಾಯಗಳು ನನಗೆ ತಿಳಿಯಬೇಕಿದೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಎನ್ ಎಂ (ನರೇಂದ್ರ ಮೋದಿ) ಮೊಬೈಲ್ ಆಪ್ ನ ಕೊಂಡಿಯನ್ನು ಹಂಚಿಕೊಂಡಿರುವ ಪ್ರಧಾನಿ “ಎನ್ ಎಂ ಆಪ್ ನಲ್ಲಿರುವ ಸಮೀಕ್ಷೆಯಲ್ಲಿ ಭಾಗಿಯಾಗಿ” ಎಂದಿದ್ದಾರೆ.

ಕಪ್ಪು ಹಣ, ನಕಲಿ ನೋಟುಗಳನ್ನು ನಿಯಂತ್ರಿಸಲು ನವೆಂಬರ್ ೮ ರಂದು ತೆಗೆದುಕೊಂಡಿರುವ ಈ ನಿರ್ಧಾರ ದೇಶದಲ್ಲಿ ಅವ್ಯವಸ್ಥೆ ಸೃಷ್ಟಿಸಿ ಬಡ ಮತ್ತು ಗ್ರಾಮೀಣ ಜನರಿಗೆ ಅಪಾರ ತೊಂದರೆ ಸೃಷ್ಟಿಸಿದೆ ಎಂದು ವಿರೋಧ ಪಕ್ಷಗಳು ವಿರೋಧಿಸಿದ್ದವು.

ಇದು ದೇಶದೆಲ್ಲೆಡೆ ಅವ್ಯವಸ್ಥೆಯನ್ನು ಸೃಷ್ಟಿಸಿದ್ದು, ಜನರು ನೋಟುಗಳನ್ನು ಬದಲಿಸಿಕೊಳ್ಳಲು ಬ್ಯಾಂಕ್ ಮತ್ತು ಎಟಿಎಂ ಗಳ ಎದುರು ಸಾಲುಗಟ್ಟಿದ್ದು, ಸಣ್ಣ ವ್ಯವಹಾರಗಳಿಗೂ ಅಪಾರ ನಷ್ಟವಾಗಿದೆ.

Comments are closed.