ಕರ್ನಾಟಕ

ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಐಟಿ ಬಿಸಿ…ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ

Pinterest LinkedIn Tumblr

reddy

ಬಳ್ಳಾರಿ: ಮಗಳ ಮದುವೆಯನ್ನು ಅದ್ಧೂರಿಯಾಗಿ ಮುಗಿಸಿ ಎಲ್ಲರ ಹುಬ್ಬೇರಿಸಿದ್ದ ಜನಾರ್ಧನ ರೆಡ್ಡಿಗೆ ಆದಾಯ ತೆರಿಗೆ ಅಧಿಕಾರಿಗಳು ಶಾಕ್ ನೀಡಿದ್ದಾರೆ.

ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಎರಡೂ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಇಂದು ದಿಢೀರ್ ದಾಳಿ ನ‌ಡೆಸಿ, ರೆಡ್ಡಿ ಒಡೆತನದ ಓಎಂಸಿ ಹಾಗೂ ಎ‌ಎಂಸಿ ಕಚೇರಿಗಳ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಎರಡೂ ಕಚೇರಿಗಳ ಮೇಲೆ 7 ಮಂದಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಸಿರಗುಪ್ಪ ರಸ್ತೆಯಲ್ಲಿರುವ ರೆಡ್ಡಿ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸುವ ಸಾಧ್ಯತೆಗಳು ಇವೆ ಎಂದು ತಿಳಿದು ಬಂದಿದೆ.

ಜನಾರ್ಧನ ರೆಡ್ಡಿ ಅವರು ಇತ್ತೀಚೆಗೆ ತಮ್ಮ ಮಗಳು ಬ್ರಹ್ಮಿಣಿ ಮದುವೆಯನ್ನು ಬೆಂಗಳೂರು ಅರಮನೆ ಮೈದಾನದ ಆವರಣದಲ್ಲಿ 500 ಕೋಟಿ ರೂ. ಖರ್ಚು ಮಾಡಿ ಅಚ್ಚರಿ ಮೂಡಿಸಿದ್ದರು ಎಂದು ಆರ್‌ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಎನ್ನುವವರು ದೂರು ದಾಖಲಿಸಿದ್ದರು.

Comments are closed.