ಪ್ರಮುಖ ವರದಿಗಳು

ವಾಟ್ಸಪ್ ನಲ್ಲಿ ವಿಡಿಯೋ ಕಾಲಿಂಗ್ ಬಳಸುವ ಮುನ್ನ ಈ ವರದಿಯನ್ನು ಕಡ್ಡಾಯವಾಗಿ ಓದಿ….

Pinterest LinkedIn Tumblr

whatsapp

ಮುಂಬೈ : ವಾಟ್ಸಪ್ ತನ್ನ ವಿಡಿಯೋ ಕಾಲಿಂಗ್ ಆವೃತ್ತಿಯನ್ನು ಪರಿಶೀಲನೆಯ ಹಂತದಲ್ಲಿ ಇಟ್ಟಿದ್ದು, ಅದನ್ನು ತನ್ನ ಬಳಕೆದಾರರಿಗೆ ಮುಕ್ತಗೊಳಿಸಿಲ್ಲ, ಆದರೆ ಬಿಟಾ ವರ್ಷನ್ ಬಳಸಲು ಸಿದ್ಧರಿರುವವರಿಗೆ ಮಾತ್ರ ಅಪ್ ಡೇಟ್ ನೀಡುತ್ತಿದೆ.

ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಹ್ಯಾಕರ್ ಗಳು ವಾಟ್ಸಪ್ ನಲ್ಲಿ ಮೇಸೆಜ್ ಮೂಲಕ ವಾಟ್ಸಪ್ ವಿಡಿಯೋ ಕಾಲಿಂಗ್ ಅನ್ನು ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಎಂಬ ಸಂದೇಶವನ್ನು ಹರಡುತ್ತಿದ್ದಾರೆ.

ನೀವೇನಾದರು ವಿಡಿಯೋ ಕಾಲಿಂಗ್ ಆಸೆಗೆ ಬಿದ್ದು ಆ ಮೇಸೆಜ್ ಓಪನ್ ಮಾಡಿ, ಅಲ್ಲಿ ಕೇಳಿರುವ ನಿಮ್ಮ ವಿವರಗಳನ್ನು ನೀಡದರೆ ನಿಮ್ಮ ಮೊಬೈಲ್ ಹ್ಯಾಕ್ ಆಗುವುದು ಖಂಡಿತ. ನಂತರ ನಿಮ್ಮ ಫೋನಿನಲ್ಲಿರುವ ಎಲ್ಲಾ ಮಾಹಿತಿಗಳು ಹ್ಯಾಕರ್ಸ ಪಾಲಗಲಿದೆ.

ವಾಟ್ಸಪ್ ಯಾವುದಾರು ಅಪ್ಡೇಟ್ ಬಿಟ್ಟರೆ ಅದನ್ನು ಯಾವುದೇ ರೀತಿಯಲ್ಲೂ ಮೇಸೆಜ್ ಮೂಲಕ ಕಳಿಸುವುದಿಲ್ಲ, ಬದಲಿಗೆ ಗೂಗಲ್ ಪ್ಲೇಸ್ಟೋರಿನಲ್ಲಿ ಮಾತ್ರ ಇರುತ್ತದೆ ಹಾಗಾಗಿ ಬಳಕೆದಾರು ಈ ರೀತಿಯ ಮೋಸದ ಜಾಲಕ್ಕೆ ಸಿಲುಕದೆ ಎಚ್ಚರ ವಹಿಸಿ.

Comments are closed.