ಬಿಹಾರ: 18 ವರ್ಷದ ಯುವತಿಯೊಂದಿಗೆ ಪ್ರೀತಿಯ ನಾಟಕವಾಡಿದ ಕಾಮುಕ ಯುವಕನೋರ್ವ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಿಸಿಕೊಂಡು, ನಂತರ ತನ್ನ ಗೆಳೆಯರಿಗೆ ದೈಹಿಕ ಸಂಪರ್ಕಕ್ಕಾಗಿ ಹಸ್ತಾಂತರಿಸಿರುವ ಘಟನೆ ಬಿಹಾರದ ಸಪುಲ್‌ದಲ್ಲಿ ನಡೆದಿದೆ.
ಸಂತ್ರಸ್ತ ಯುವತಿ ಸಪುಲ್‌ದ ರಾಕೇಶ್ ಯಾದವ್ ಎಂಬ ಯುವಕನನ್ನು ಕೆಲ ದಿನಗಳಿಂದ ಪ್ರೀತಿಸುತ್ತಿದ್ದಳು. ಕೆಲಸದ ನಿಮಿತ್ತ ಯುವತಿ ಮುರುಳಿಗಂಜ್ ಪ್ರದೇಶಕ್ಕೆ ತೆರಳಿದ್ದ ವೇಳೆ ಹಿಂಬಾಲಿಸಿರುವ ರಾಕೇಶ್ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದಾನೆ. ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ನಂತರ ತನ್ನ ಇಬ್ಬರು ಗೆಳೆಯರಿಗೆ ಆಕೆಯನ್ನು ಒಪ್ಪಿಸಿದ್ದಾನೆ. ಅವರು ಯುವತಿ ಮೇಲೆ ಅತ್ಯಾಚಾರವೆಸಗಿದ್ದಾರೆ.
ಅತ್ಯಾಚಾರವೆಸಗಿದ ನಂತರ ಯುವತಿಗೆ ಮದೇಪುರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಮೂರು ದಿನಗಳ ಕಾಲ ಚಿಕಿತ್ಸೆ ಕೊಡಿಸಿದ್ದಾರೆ. ತದನಂತರ ಆಕೆಗೆ ಬಸ್ ಸ್ಟ್ಯಾಂಡ್‌ವೊಂದರಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಮನೆಗೆ ಹಿಂದುರುಗಿದ ಯುವತಿ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲು ಮಾಡಿದ್ದು, ಕಾಮುಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Comments are closed.