ಕರ್ನಾಟಕ

ಸುದೀಪ್ ಬಗ್ಗೆ ರಾಮ್ ಗೋಪಾಲ ವರ್ಮಾ ಹೊಗಳಿದ್ದೇನು…? ವಿಷ್ಣುವರ್ಧನ್‌-ರಜನಿಕಾಂತ್ ಬಗ್ಗೆ ಮಾಡಿದ ಅವಮಾನ ಏನು…? ಇಲ್ಲಿದೆ…

Pinterest LinkedIn Tumblr

vish

ಮುಂಬೈ: ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮ್ ಸುದೀಪ್‌ ಅಭಿನಯದ “ಕೋಟಿಗೊಬ್ಬ 2′ ಚಿತ್ರವನ್ನು ಹೊಗಳುವ ಭರದಲ್ಲಿ ಹಿರಿಯ ನಟರಾದ ಡಾ. ವಿಷ್ಣುವರ್ಧನ್‌ ಮತ್ತು ರಜನೀ ಕಾಂತ್ ಅವರನ್ನು ಅವಮಾನ ಪಡಿಸಿದ್ದಾರೆ.

ನಟನೆಯಲ್ಲಿ ಸುದೀಪ್‌ ರಷ್ಟು ಪ್ರಬುದ್ಧತೆ ಡಾ.ವಿಷ್ಣುವರ್ಧನ್‌ ಅವರಿಗಿಲ್ಲ ಎಂದು ವರ್ಮಾ ಮಾಡಿರುವ ಟ್ವೀಟ್ ಆಕ್ರೋಶಕ್ಕೆ ಕಾರಣವಾಗಿದೆ.

ಕೋಟಿಗೊಬ್ಬ 2 ಚಿತ್ರ ನೋಡಿದೆ. ನಿಜವಾಗಿ ಸುದೀಪ್‌ ಅವರು ಹೆಸರನ್ನು ಬದಲಿಸಿ, ಕಿಚ್ಚ ಸುದೀಪ್‌ನಿಂದ ರಜನಿ ಸುದೀಪ್‌ ಎಂದಿಡಬೇಕು’ ಎಂದಿದ್ದಾರೆ. ಅಲ್ಲದೇ “ರಜನಿ ಅವರಾದರೆ ಒಂದೇ ರೀತಿಯ ಅಭಿನಯಗಳಲ್ಲಿ ಮಿಂಚುತ್ತಾರೆ. ಆದರೆ ನೀವು ವಿವಿಧ ರೀತಿಯ ಪಾತ್ರಗಳಲ್ಲಿ ಸೈ ಎನಿಸಿಕೊಂಡಿದ್ದೀರಿ. “ಈಗ’, “ಕೋಟಿಗೊಬ್ಬ 2′ ಇದಕ್ಕೆ ಉದಾಹರಣೆ ಎಂದು ಹೇಳಿದ್ದಾರೆ.

ಸುದೀಪ್ ಅಭಿನಯವನ್ನು ವಿಷ್ಣುವರ್ಧನ್‌ ಅವರ ನಟನೆಯೊಂದಿಗೆ ಹೋಲಿಸಿ ನೋಡಿದರೇ ವಿಷ್ಣು ಅವರ ನಟನೆ ಪ್ರಬುದ್ಧವಾಗಿಲ್ಲ. ಇದನ್ನು ಅವರ ಅಭಿಮಾನಿಗಳು ಒಪ್ಪದೇ ಇರಬಹುದು ಎಂದು ಹೇಳಿದ್ದಾರೆ. ಅಲ್ಲದೇ, “ಸುದೀಪ್‌ ಅವರೇ ನೀವು ರೊಬೋಟ್‌ ಚಿತ್ರದಲ್ಲಿ ಕನಸಲ್ಲೂ ನಟಿಸಬಹುದು. ಆದರೆ ರಜನಿಕಾಂತ್‌ ಗೆ ಕನಸಿನಲ್ಲೂ “ಈಗ’ದಲ್ಲಿ ನಟಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

Comments are closed.