ಬೆಂಗಳೂರು: ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದು ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಫ್ಯಾಷನ್ ಡಿಸೈನರ್ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ಬ್ಯಾಟರಾಯನಪುರದ ಪಾಪರೆಡ್ಡಿ ಪಾಳ್ಯದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಪಾಪರೆಡ್ಡಿ ಪಾಳ್ಯದ ಅಮೂಲ್ಯ (21) ಮೃತಪಟ್ಟವರು. ರಾತ್ರಿ 7.45ರ ವೇಳೆ ಮನೆಗೆ ಹೋಗುವಾಗ ಹೋಂಡಾ ಆಕ್ಟೀವಾ ಸ್ಕೂಟರ್‌ನಲ್ಲಿ ರವಿ ಜಿಮ್ ಕಡೆಯಿಂದ ಅಮೂಲ್ಯಾ ಅವರು ಬರುತ್ತಿದ್ದಾಗ ಎದುರಿನಿಂದ ಡಸ್ಟರ್ ಕಾರು ಡಿಕ್ಕಿ ಹೊಡೆದಿದೆ.
ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅಮೂಲ್ಯಾಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 9ರ ವೇಳೆ ಮೃತಪಟ್ಟಿದ್ದಾರೆ.
ಅಮೂಲ್ಯಾ ಅವರು ಐಎಎಫ್ ಕಾಲೇಜಿನಲ್ಲಿ ಫ್ಯಾಷನಿಂಗ್ ಡಿಸೈನರ್ ವಿದ್ಯಾರ್ಥಿನಿಯಾಗಿದ್ದರು. ಪ್ರಕರಣ ದಾಖಲಿಸಿರುವ ಬ್ಯಾಟರಾಯನುಪುರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Comments are closed.