ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ – ಕೆಸಿಎಫ್ ದುಬೈ ಸಮಿತಿ ಆಶ್ರಯದಲ್ಲಿ ಭವ್ಯ ಭಾರತದ 70ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸ್ನೇಹ ಸಂಗಮ ಕಾರ್ಯಕ್ರಮವು ಇದೇ ತಿಂಗಳ 19 ರಂದು ಬರ್ ದುಬೈ ಅಲ್ ಫಹಿದಿ ಮೆಟ್ರೋ ಸ್ಟೇಷನ್ ಸಮೀಪದ ಮುಸಲ್ಲ ಟವರ್ ನಲ್ಲಿ ಸಂಜೆ 7.30 ಕ್ಕೆ ನಡೆಯಲಿದ್ದು ಪ್ರಸ್ತುತ ಕಾರ್ಯಕ್ರಮದಲ್ಲಿ ಧಾರ್ಮಿಕ, ಸಾಮಾಜಿಕ, ಶೆಕ್ಷಣಿಕ ನಾಯಕರು ಭಾಗವಹಿಸಲಿದ್ದಾರೆ.
ಕೆಸಿಎಫ್ ದುಬೈ ಸಮಿತಿ ಅಧ್ಯಕ್ಷರಾದ ಬಹು ಮಹಬೂಬ್ ಸಖಾಫಿ ಕಿನ್ಯ ರವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಹಾಜಿ ಶೈಖ್ ಬಾವ ಮಂಗಳೂರು ಉದ್ಘಾಟನೆ ನಿರ್ವಹಿಸಲಿದ್ದಾರೆ. ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಬಹು ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ, ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಹಾಜಿ ನಾಪೋಕ್ಲು, ಕರ್ನಾಟಕ ಸಂಘ ಅಬುಧಾಬಿ ಅಧ್ಯಕ್ಷರಾದ ಶ್ರೀ ಸರ್ವತ್ತೊಮ ಶೆಟ್ಟಿ ಮತ್ತು ಉದ್ಯಮಿಗಳಾದ ಶ್ರೀ ಫ್ರಾಂಕ್ ಫೆರ್ನಾಂಡಿಸ್ ಸ್ವಾತಂತ್ರೋತ್ಸವ ಸಂದೇಶ ಭಾಷಣ ಮಾಡಲಿದ್ದಾರೆ.
ಪ್ರಸ್ತುತ ಸಮಾರಂಭದಲ್ಲಿ ತ್ಯಾಜ್ಯ ವಸ್ತುಗಳನ್ನು ಉಪಯೋಗಿಸಿ 37 ಹಡಗುಗಳನ್ನು ನಿರ್ಮಿಸಿ ಸಾಧನೆಗೈದ ಅನಿವಾಸಿ ಕನ್ನಡಿಗ ಅದ್ಭುತ ಕಲಾಕಾರ ಮಂಗಳೂರು ಕೋಟೆಕಾರು ನಿವಾಸಿ ಅಬ್ದುಲ್ ರವೂಫ್ ರವರನ್ನು ಗೌರವಿಸಲಾಗುವುದು. ಅನಿವಾಸಿ ಕನ್ನಡಿಗ ಬರಹಗಾರರ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ “ಸ್ವತಂತ್ರ ಭಾರತ ಮತ್ತು ಭಾರತೀಯರು” ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಇದರಲ್ಲಿ ವಿಜೇತರಾದ ಪ್ರಥಮ, ದ್ವಿತೀಯ ಮತ್ತು ತ್ರಿತೀಯ ಸ್ಥಾನ ಪಡೆದವರನ್ನು ಬಹುಮಾನ ನೀಡಿ ಗೌರವಿಸಲಾಗುವುದು.
ಕೆಸಿಎಫ್ ಹಾಗೂ ಇತರ ಸಂಘ ಸಂಸ್ಥೆಗಳ ನಾಯಕರುಗಳಾದ ಅಬ್ದುಲ್ ಜಲೀಲ್ ನಿಝಾಮಿ, ಇಬ್ರಾಹಿಂ ಸಖಾಫಿ ಕೆದುಂಬಾಡಿ, ಹುಸೈನ್ ಹಾಜಿ ಕಿನ್ಯ, ಪಿಎಂಹೆಚ್ ಅಬ್ದುಲ್ ಹಮೀದ್ ಈಶ್ವರಮಂಗಲ, ಎಂ ಇಬ್ರಾಹಿಂ ಮೂಳೂರು, ಅಬ್ದುಲ್ ಲತೀಫ್ ಮುಲ್ಕಿ ಶಾರ್ಜಾ, ಅಶ್ರಫ್ ಹಾಜಿ ಅಡ್ಯಾರ್, ಅಬ್ದುಲ್ ರಝಾಕ್ ಹಾಜಿ ಶಾರ್ಜಾ, ಕೆ ಹೆಚ್ ಮುಹಮ್ಮದ್ ಸಖಾಫಿ ಅಬುಧಾಬಿ, ಅಬ್ದುಲ್ ಖಾದರ್ ಸಅದಿ ಅಜ್ಮಾನ್, ಅಬ್ದುಲ್ ರಝಾಕ್ ಹಾಜಿ ನಾಟೆಕಲ್ ಅಲ್ ಐನ್ ಸೇರಿದಂತೆ ಹಲವು ಉಲಮಾ ಉಮರಾ ನಾಯಕರುಗಳು ಭಾಗವಹಿಸಲಿದ್ದಾರೆ.
ಪ್ರಸ್ತುತ ಸಮಾರಂಭಕ್ಕೆ ಅನಿವಾಸಿ ಕನ್ನಡಿಗರಾದ ಸರ್ವರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೆಸಿಎಫ್ ದುಬೈ ಸಮಿತಿ ವಿನಂತಿಸಿದೆ.
ಪತ್ರಿಕಾ ಘೋಷ್ಠಿಯಲ್ಲಿ ಭಾಗವಹಿಸಿದವರು:
1. ಮಹಬೂಬ್ ಸಖಾಫಿ ಕಿನ್ಯ (ಅಧ್ಯಕ್ಷರು)
2. ಕಲಂದರ್ ಕಬಕ (ಕಾರ್ಯದರ್ಶಿ)
3. ರಫೀಕ್ ಸಂಪ್ಯ (ಕಾರ್ಯದರ್ಶಿ, ಪ್ರಕಾಶನ ವಿಭಾಗ)
4. ರಫೀಕ್ ಕಲ್ಲಡ್ಕ (ಅಧ್ಯಕ್ಷರು, ಆಡಳಿತ ವಿಭಾಗ)
Comments are closed.