ಅಂತರಾಷ್ಟ್ರೀಯ

ವಿವಸ್ತ್ರರಾಗಿ ಮಲಗುದರಿಂದ ವೈವಾಹಿಕ ಜೀವನ, ಆರೋಗ್ಯಕ್ಕೆ ಆಗುವ ಲಾಭದ ಕುರಿತು ಸಂಶೋಧನೆ ಹೇಳಿದ್ದು ಹೀಗೆ…

Pinterest LinkedIn Tumblr

Couple-sleeping

ಲಂಡನ್‌: ಪ್ರತಿದಿನ ರಾತ್ರಿ ಮೈತುಂಬಾ ಉಡುಪುಗಳನ್ನು ಧರಿಸಿ ಮಲಗುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅಮೆರಿಕದ ಸಂಶೋಧಕರು ಹೇಳಿದ್ದಾರೆ. ಅಲ್ಲದೆ, ವಿವಸ್ತ್ರವಾಗಿ ಮಲಗುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ‘ಡೈಲಿ ಮೇಲ್‌’ ವರದಿ ಮಾಡಿದೆ.

ದಿನವಿಡೀ ಕೆಲಸ ಮಾಡಿ ಅದೇ ಉಡುಪಿನಲ್ಲಿ ರಾತ್ರಿಯೂ ಮಲಗುವುದರಿಂದ ಕಿರಿಕಿರಿಯಾಗುತ್ತದೆ. ದೇಹದ ಉಷ್ಣತೆ ಹೆಚ್ಚಿ ರಾತ್ರಿಯಿಡೀ ಆಗ್ಗಾಗ್ಗೆ ಎಚ್ಚರವಾಗುತ್ತದೆ. ಇದರಿಂದ ನೆಮ್ಮದಿಯ ನಿದ್ದೆ ಮಾಡಲು ಅಸಾಧ್ಯವಾಗುತ್ತದೆ. ಈ ರೀತಿಯ ಸಮಸ್ಯೆಯಿಂದ ಮುಕ್ತರಾಗಲು ಬಟ್ಟೆಗಳನ್ನು ಬಿಚ್ಚಿಟ್ಟು ಮಲಗಬೇಕೆಂದು ಸಂಶೋಧಕರು ಸಲಹೆ ನೀಡಿದ್ದಾರೆ.

ಈ ರೀತಿ ಮಾಡುವುದರಿಂದ ದೇಹದ ಉಷ್ಣತೆ ನಿಯಂತ್ರಣಗೊಂಡು ಪರಿಪೂರ್ಣವಾದ ಆಹ್ಲಾದಕರ ನಿದ್ದೆಗೆ ಸಹಕಾರಿಯಾಗುತ್ತದೆ. ಅಷ್ಟೇ ಅಲ್ಲದೆ, ಈ ಮಾರ್ಗಗಳನ್ನು ಪುರುಷರು ಅನುಸರಿಸುವುದರಿಂದ ವೀರ್ಯ ಸಾಮರ್ಥ್ಯವು ದ್ವಿಗುಣಗೊಳ್ಳುತ್ತದೆ. ವಿವಸ್ತ್ರವಾಗಿ ಮಲಗುವುದರಿಂದ ರಾತ್ರಿ ಸೇವಿಸಿದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯವಾಗಿರಲು ಪ್ರೇರಣೆಯಾಗಿರುತ್ತದೆ. ಅಲ್ಲದೆ, ವೈವಾಹಿಕ ಜೀವನಕ್ಕೆ ಇದು ಅನುಕೂಲಕಾರಿ ಎನ್ನುವ ವೈದ್ಯರು ಮತ್ತು ಸಂಶೋಧಕರು ಬಟ್ಟೆತೆಗೆದಿರಿಸಿ ಮಲಗಲು ಸಲಹೆ ನೀಡುತ್ತಾರೆ.

ಆದರೆ, ಅಮೆರಿಕದಂಥ ರಾಷ್ಟ್ರದಲ್ಲೇ ಕೇವಲ ಶೇ.12ರಷ್ಟು ಮಂದಿ ಮಾತ್ರ ನಗ್ನವಾಗಿ ಮಲಗುತ್ತಾರೆ. ಉಳಿದವರು ವಸ್ತ್ರ ಸಮೇತರಾಗಿಯೇ ನಿದ್ರೆಗೆ ಜಾರುತ್ತಾರೆ ಎಂದು ‘ನ್ಯಾಷನಲ್‌ ಸ್ಲೀಪ್‌ ಫೌಂಡೇಶನ್‌’ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಯುವಕ ಮತ್ತು ಯುವತಿಯರ ತಂಪಾದ ದೇಹವು ಆಹ್ಲಾದಕರ ಅಥವಾ ಉಲ್ಲಾಸದ ನಿದ್ರೆ ಬರುವಂತೆ ಮಾಡುತ್ತದೆ ಎಂದು ಈ ಹಿಂದಿನ ಅಧ್ಯಯನವೊಂದು ತಿಳಿಸಿತ್ತು.

ಇದಷ್ಟೇ ಅಲ್ಲ, ಸರಿಯಾದ ರೀತಿಯಲ್ಲಿ ನಿದ್ದೆಯಾಗದಿದ್ದರೆ ಮಾರನೆಯ ದಿನ ಆಹಾರ ಸೇವನೆಯೂ ಸರಿಯಾಗಿ ಆಗದು. ಇತರೆ ಚಟುವಟಿಕೆಗಳಲ್ಲೂ ಉತ್ಸಾಹದಿಂದ ಸಕ್ರಿಯವಾಗಿರಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಸಂತಸದ ಜೀವನಕ್ಕೂ ಉತ್ತಮ ನಿದ್ದೆ ಬೇಕೇ ಬೇಕಿದೆ.

ವಿವಸ್ತ್ರವಾಗಿ ಮಲಗುವ ಲಾಭಾಂಶಗಳು
-ಕಡಿಮೆ ಉಷ್ಣಾಂಶ ದೇಹವು ಮಲಗಿದ್ದರೂ ಆಹಾರ ಜೀರ್ಣತೆಗೆ ಸಹಕಾರಿ
-ಮಹಿಳೆಯರಿಗೆ ಬ್ಯಾಕ್ಟೀರಿಯಾ ಸೋಂಕಿನಿಂದ ನಿವಾರಣೆಗೆ ಅನುಕೂಲಕರ
-ಪುರುಷ, ಮಹಿಳೆಯರ ಉತ್ತಮ ಚಯಾಪಚಯ ಕ್ರಿಯೆ
-ಪತಿ, ಪತ್ನಿ ವಿವಸ್ತ್ರ ದೇಹಗಳು ಸೋಂಕುವುದರಿಂದ ಪ್ರೀತಿಯ ಅಲೆ ವೃದ್ಧಿ

Comments are closed.