ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ನಿಶ್ಚಿತಾರ್ಥ ನಾಳೆ ವರಮಹಾಲಕ್ಷ್ಮಿ (ಆ.12) ಹಬ್ಬದ ದಿನದಂದು ಗೋವಾದಲ್ಲಿ ನಡೆಯಲಿದೆ. ಈ ಸುದ್ದಿಯ ಜೊತೆಗೆ ಐಂದ್ರತಾ ರೇ ಹಾಗೂ ದೂದ್’ಪೇಡ ದಿಗಂತ್ ಅವರ ಮದುವೆಯು ನಾಳೆಯೇ ನಡೆಯಲಿದೆ ಎಂಬ ಸುದ್ದಿ ಗಾಂಧಿ ನಗರದಲ್ಲಿ ಹಬ್ಬುತ್ತಿದೆ.
ಈ ಬಗ್ಗೆ ಸ್ವತಃ ಐಂದ್ರಿತಾ ರೇ ಅವರೇ ಕೆಲವು ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿದ್ದು,’ ನಾನು ದಿಗಂತ್ ಜೊತೆ ಮದುವೆಯಾದರೆ ಅದನ್ನು ಖುಷಿಯಾಗಿ ಎಲ್ಲದೊಂದಿಗೂ ಹೇಳಿಕೊಳ್ಳುತ್ತೇನೆ. ಕದ್ದುಮುಚ್ಚಿ ಮದುವೆಯಾಗುವ ಸ್ವಭಾವ ನನ್ನದಲ್ಲ. ಇದೊಂದು ಸುಳ್ಳು ಸುದ್ದಿ’. ಅಭಿಮಾನಿಗಳು ದಯವಿಟ್ಟು ವದಂತಿಯನ್ನು ಹರಡಿಸಬೇಡಿ’ ಎಂದು ತಿಳಿಸಿದ್ದಾರೆ.
ಯಶ್ ಹಾಗೂ ರಾಧಿಕಾ ಪಂಡಿತ್ ಮದುವೆಯ ಬಗ್ಗೆಯೂ ಹಲವು ದಿನಗಳ ಹಿಂದೆ ವದಂತಿ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಇವರಿಬ್ಬರು ಅಧಿಕೃತವಾಗಿ ನಾಳೆ ನಿಶ್ಚಿತಾರ್ಥವಾಗಲಿದ್ದು, ಡಿಸೆಂಬರ್’ನಲ್ಲಿ ಮದುವೆಯಾಗುತ್ತಿದ್ದಾರೆ. ದಿಗಂತ್ ಹಾಗೂ ಐಂದ್ರಿತಾ ರೇ ಅವರ ಸಿಹಿ ಸುದ್ದಿ ಶೀಘ್ರದಲ್ಲಿಯೇ ಹೊರಬೀಳುವ ಸಾಧ್ಯತೆಯಿದೆ.
Comments are closed.