ಕರ್ನಾಟಕ

ಟ್ಯೂಷನ್‌ಗೆ ಬಂದ 4 ವರ್ಷದ ಪುಟ್ಟ ಬಾಲಕಿಯ ಮೇಲೆ ಟೀಚರ್‌ ಮಗನಿಂದ ರೇಪ್‌ ಯತ್ನ ! ಮುಂದೇನಾಯಿತು…?

Pinterest LinkedIn Tumblr

rape

ಮೈಸೂರು: ನಗರದಲ್ಲಿ ನಡೆದ ಕಳವಳಕಾರಿ ಘಟನೆಯೊಂದರಲ್ಲಿ 4 ವರ್ಷ ಪ್ರಾಯದ ಬಾಲಕಿಯ ಮೇಲೆ 22 ವರ್ಷದ ಯುವಕನೊಬ್ಬ ಬಲತ್ಕಾರಕ್ಕೆ ಯತ್ನಿಸಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. 22 ವರ್ಷ ಪ್ರಾಯದ ತಿಮ್ಮಯ್ಯ ಎಂಬ ಯುವಕನ್ನು ವಿಜಯನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮನೆ ಪಾಠಕ್ಕೆಂದು ಬರುತ್ತಿದ್ದ ಬಾಲಕಿಯ ಮೇಲೆ ಟ್ಯೂಷನ್‌ ಶಿಕ್ಷಕಿಯ ಪುತ್ರ ಅತ್ಯಾಚಾರಕ್ಕೆ ಯತ್ನಿಸಿದ್ದು, ಈ ವೇಳೆ ಬಾಲಕಿ ಭಯಗೊಂಡು ಜೋರಾಗಿ ಕಿರುಚಿದ್ದಾಳೆ. ಆಕ್ರಂದನ ಕೇಳಿದ ಸುತ್ತಮುತ್ತಲಿನ ಜನರು ಧಾವಿಸಿ ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತಾಯಿ ಮನೆಯಲ್ಲಿ ಇಲ್ಲದ ವೇಳೆ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

Comments are closed.