ಕರಾವಳಿ

ಬಿಎಸ್ಸೆನ್ನೆಲ್‌ ಗ್ರಾಹಕರಿಗೆ ಇಲ್ಲಿದೆ ಸಿಹಿ ಸುದ್ದಿ….ಉಚಿತ ಕರೆ ಕೊಡುಗೆ ಏನು ಎಂಬುದು ಮುಂದಿದೆ ಓದಿ…

Pinterest LinkedIn Tumblr

BSNL

ಬೆಂಗಳೂರು: ಸಾರ್ವಜನಿಕ ರಂಗದ ಬಿಎಸ್ಸೆನ್ನೆಲ್‌ ಸ್ಥಿರ ದೂರವಾಣಿಯಿಂದ ಯಾವುದೇ ನೆಟ್‌ವರ್ಕ್‌ನ ಮೊಬೈಲ್‌ ಅಥವಾ ಸ್ಥಿರ ದೂರವಾಣಿಗೆ ಉಚಿತ ಕರೆಗಳನ್ನು ಮಾಡಬಹುದು.

ಬಿಎಸ್ಸೆನ್ನೆಲ್‌ ಗ್ರಾಹಕರಿಗೆ ಆಗಸ್ಟ್‌ 15ರಿಂದ ಎಲ್ಲ ಭಾನುವಾರಗಳಂದು ಈ ಸೌಲಭ್ಯ ಲಭ್ಯವಾಗಲಿದೆ ಎಂದು ಭಾರತ್‌ ಸಂಚಾರ ನಿಗಮ ನಿಯಮಿತ ಬುಧವಾರ ಪ್ರಕಟಣೆ ಹೊರಡಿಸಿದೆ.

ಈಗಾಗಲೇ ಬಿಎಸ್ಸೆನ್ನೆಲ್‌ ರಾತ್ರಿ 9 ಗಂಟೆಯಿಂದ ಬೆಳಗ್ಗೆ 7 ಗಂಟೆಯ ತನಕದ ಅವಧಿಯಲ್ಲಿ ಸ್ಥಿರ ದೂರವಾಣಿಯಿಂದ ಯಾವುದೇ ನೆಟ್‌ವರ್ಕಿಗೆ ಉಚಿತ ಕರೆ ಮಾಡುವ ಸೌಲಭ್ಯ ಒದಗಿಸಿದ್ದು, ಇದು ಸಹ ಮುಂದುವರಿಯಲಿದೆ.

ಹಲವಾರು ವರ್ಷಗಳಿಂದ ನಷ್ಟದಲ್ಲಿದ್ದ ಬಿಎಸ್ಸೆನ್ನೆಲ್‌ ಲಾಭದ ಹಳಿಗೆ ಮರಳುತ್ತಿದ್ದು, ಕಳೆದ ಸಾಲಿನಲ್ಲಿ 3,378 ಕೋಟಿ ರೂ. ನಿರ್ವಹಣಾ ಲಾಭ ಹೊಂದಿತ್ತು.

Comments are closed.