ಅಂತರಾಷ್ಟ್ರೀಯ

ಈ ನಾಯಿಯ ನಿಯತ್ತು ನೋಡಿ…ಒಮ್ಮೆ ಊಟ ಹಾಕಿದ ಮಹಿಳೆಗಾಗಿ 6 ತಿಂಗಳವರೆಗೆ ಕಾಯುತ್ತಾ ಕುಳಿತ ನಾಯಿ!

Pinterest LinkedIn Tumblr

dog

ಬರ್ಲಿನ್: ನಾಯಿಗೆ ನಿಯತ್ತು ಜಾಸ್ತಿ ಅಂತಾರೆ. ತನಗೆ ಊಟ ಹಾಕಿದವರನ್ನ ಅದು ಎಂದಿಗೂ ಮರೆಯುವುದಿಲ್ಲ. ಇದಕ್ಕೆ ಸ್ಪಷ್ಟ ನಿದರ್ಶನವೆಂಬಂತೆ ನಾಯಿಯೊಂದು ತನಗೆ ಊಟ ಹಾಕಿದ ಮಹಿಳೆಯನ್ನ 6 ತಿಂಗಳವರೆಗೆ ಹಿಂಬಾಲಿಸಿ ಆಕೆಗಾಗಿ ಹೋಟೆಲ್ ಗೇಟ್ ಬಳಿ ಕಾಯುತ್ತಾ ಕುಳಿತ ಘಟನೆ ನಡೆದಿದೆ.

ಫ್ಲೈಟ್ ಅಟೆಂಡೆಂಟ್ ಒಲಿವಿಯಾ ಕೆಲಸಕ್ಕೆಂದು ತನ್ನ ಜರ್ಮನಿಯ ಮನೆಯಿಂದ ಅರ್ಜೆಂಟಿನಾಗೆ ಆಗಾಗ ಪ್ರಯಾಣ ಮಾಡುತ್ತಿದ್ರು. 6 ತಿಂಗಳ ಹಿಂದೆ ಆಕೆ ಅರ್ಜೆಂಟಿನಾಗೆ ಭೇಟಿ ನೀಡಿದಾಗ ಬೀದಿ ನಾಯಿಯೊಂದಕ್ಕೆ ಊಟ ಹಾಕಿ, ಅದರ ತಲೆ ನೇವರಿಸಿ ಮುದ್ದು ಮಾಡಿ ಫ್ರೆಂಡ್ಸ್ ಮಾಡಿಕೊಂಡಿದ್ದರು. ನಾಯಿಗೆ ರುಬಿಯೋ ಎಂದು ಹೆಸರಿಟ್ಟಿದ್ದರು.

dog1

ಇಷ್ಟೊಂದು ಪ್ರೀತಿಯನ್ನ ಎಂದೂ ಕಾಣದ ಆ ಬೀದಿ ನಾಯಿ ಫ್ಲೈಟ್ ಅಟೆಂಡೆಂಟ್ ಒಲಿವಿಯಾರನ್ನ ಒಂದೇ ಬಾರಿಗೆ ಹಚ್ಚಿಕೊಂಡಿತ್ತು. ಅಂದಿನಿಂದ ಒಲಿವಿಯಾ ಅರ್ಜೆಂಟಿನಾಗೆ ಬಂದಾಗಲೆಲ್ಲಾ ಅದ್ಹೇಗೋ ಈ ನಾಯಿ ಆಕೆ ತಂಗಿದ್ದ ಹೋಟೆಲ್ ಬಳಿ ಬಂದು ಕಾಯುತ್ತಿತ್ತು.

ಒಲಿವಿಯಾ ಮೊದಲಿಗೆ ನಾಯಿ ತನ್ನನ್ನು ಹೋಟೆಲ್‍ವರೆಗೆ ಹಿಂಬಾಲಿಸಬಾರದೆಂದು ಮಾರ್ಗ ಬದಲಾಯಿಸಿ ಬೇರೆ ದಾರಿ ಹಿಡಿದು ಬರುತ್ತಿದ್ರು. ಆದರೂ ಈ ನಾಯಿ ಒಲಿವಿಯಾರನ್ನ ಹಿಂಬಾಲಿಸಿ ಬರುತ್ತಿತ್ತು. ಕಡೆಗೆ ಆಕೆ ಆ ನಾಯಿಯನ್ನ ಪುನರ್ವಸತಿ ಕೇಂದ್ರಕ್ಕೆ ಒಪ್ಪಿಸಿ ಚೆನ್ನಾಗಿ ನೊಡಿಕೊಳ್ಳುವಂತೆ ಹೇಳಿದ್ದಳು. ಇಷ್ಟಾದ್ರೂ ನಾಯಿ ಮಾತ್ರ ಅಲ್ಲಿಂದಲೂ ತಪ್ಪಿಸಿಕೊಂಡು ಬಂದು ಹೋಟೆಲ್‍ನ ಮುಖ್ಯ ದ್ವಾರದ ಬಳಿ ಕಾಯುತ್ತಾ ಕುಳಿತ್ತಿತ್ತು.

ನಾಯಿಯ ಈ ಪ್ರೀತಿಗೆ ಕರಗಿದ ಒಲಿವಿಯಾ ಕೊನೆಗೆ ಅದನ್ನು ದತ್ತು ತೆಗೆದುಕೊಂಡು ಕಳೆದ ವಾರ ಜರ್ಮನಿಗೆ ಕರೆದುಕೊಂಡು ಹೋಗಿದ್ದಾರೆ.

Comments are closed.