ಅಂತರಾಷ್ಟ್ರೀಯ

ಸ್ನೇಹಿತರ ದಿನ ನಿಮ್ಮ ಗೆಳೆಯನಿಗೆ ಈ ಗಿಫ್ಟ್’ನ್ನು ನೀಡಿ ……

Pinterest LinkedIn Tumblr

happy-friendship-day

ಮತ್ತೆ ಬಂದಿದೆ ‘ಗೆಳೆಯರ ದಿನ’. ಸ್ನೇಹದ ಅಂಗಳದಲ್ಲಿ ಕಿರು ನಗೆಯ ಬೀರುತ್ತಾ, ಹಳೆಯ ನೆನಪುಗಳ ಕದಡುತ್ತ, ಎಂದೋ ಯಾವುದೋ ಕಾರಣಕ್ಕೆ ಮುನಿಸಿಕೊಂಡ ಸ್ನೇಹಿತರ ಒಂದು ಗೂಡಿಸುತ್ತಾ, ಕಳೆದು ಹೋದವರ ಮತ್ತೆ ತನ್ನ ಸ್ನೇಹದಲ್ಲಿ ಬಂದಿಸುತ್ತಾ, ಆತ್ಮೀಯ ಗೆಳೆಯ ಗೆಳತಿಯರಿಗಾಗಿ ಮತ್ತೊಮ್ಮೆ ಬಂದಿದೆ ಗೆಳೆಯರ ದಿನ.

ಈ ದಿನ ಪ್ರತಿಯೊಬ್ಬನಿಗೂ ವಿಶೇಷ. ತನ್ನೆಲ್ಲಾ ಗೆಳೆಯ/ಗೆಳತಿಯರಿಗೆ ವಿಭಿನ್ನ ಉಡುಗೊರೆ ನೀಡಿ ಶುಭಾಷಯ ಕೋರಬೇಕೆಂಬ ಹಂಬಲ. ಆದರೆ ಗೆಳೆಯನಿಗೆ ಕೊಡುಗೆಯಾಗಿ ಏನು ನೀಡಬೇಕೆಂಬ ಗೊಂದಲ. ನಿಮ್ಮ ಈ ಗೊಂದಲವನ್ನು ದೂರ ಮಾಡಲು ನಿಮ್ಮ ಸ್ನೇಹಿತ/ ಸ್ನೇಹಿತೆಗೆ ಕೊಡಬಹುದಾದ ಕಡಿಮೆ ವೆಚ್ಚದ ಆದರೆ ಬೆಸ್ಟ್ ಗಿಫ್ಟ್’ಗಳು ಇಲ್ಲಿವೆ

1) ಪುಸ್ತಕ:
ಪುಸ್ತಕ ಓದುವ ದಿನಗಳು ಸರಿದಿವೆ ಈಗೇನಿದ್ದರೂ ಇಂಟರ್ನೆಟ್ ಕಾಲ ಅಂದುಕೊಳ್ಳುವುದು ಸಹಜ. ಆದರೆ ಕಾಳ ಬದಲಾದರೂ ಪುಸ್ತಕಗಳು ತಮ್ಮ ಅಸ್ಥಿತ್ವವನ್ನು ಇನ್ನೂ ಕಾಪಾಡಿಕೊಂಡಿವೆ. ಹೀಗಾಗಿ ನಿಮ್ಮ ಮಿತ್ರನ ಇಷ್ಟವನ್ನರಿತು ಅದಕ್ಕೆ ಸಂಭಂದಿಸಿದ ಪುಸ್ತಕವನ್ನು ಖರೀದಿಸಿ ಅವರಿಗೆ ಗಿಫ್ಟ್ ಆಗಿ ನೀಡಬಹುದು. ಆತನಿಗೇನು ಇಷ್ಟ ಎಂಬ ಗೊಂದಲವಿದ್ದರೆ ಅಗತ್ಯ ವಿಚಾರಗಳನ್ನು ಬರೆದಿಡಲು ಎಂದು ಡೈರಿಯಂತಹ ಪುಸ್ತಕವನ್ನೂ ನೀಡಬಹುದು. ಆದರೆ ಈರೀತಿ ಪುಸ್ತಕವನ್ನು ನೀಡುವ ಮೊದಲು ಇದರ ಮೊದಲ ಪುಟದಲ್ಲಿ ನಿಮ್ಮಿಬ್ಬರ ಗೆಳೆತನನ್ನು ಮತ್ತೆ ನೆನಪಿಸುವಂತಹ ಒಂದೆರಡು ವಾಕ್ಯವನ್ನು ಬರೆಯಲು ಮರೆಯದಿರಿ.

2) ಫೋಟೋ ಫ್ರೇಮ್:
ಈಗಂತೂ ಸ್ಮಾರ್ಟ್’ಫೋನ್’ಗಳ ಕಾಲ. ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಕಾಣ ಸಿಗುತ್ತದೆ. ಯಾವುದಾಧರೂ ಸುಂದರ ಸ್ಥಳವಿದ್ದರೆ ತಕ್ಷಣ ಸೆಲ್ಫಿ ತೆಗೆದುಕೊಳ್ಳುತ್ತೇವೆ. ಅದರಲ್ಲೂ ನಿಮ್ಮ ಆತ್ಮೀಯ ಮಿತ್ರನಿದ್ದರೆ ದಿನವಿಡೀ ಸೆಲ್ಫೀಗಳದ್ದೇ ಕಾರುಬಾರು. ಹೀಗಿರುವಾಗ ನಿಮ್ಮ ಗೆಳೆಯ/ಗೆಳತಿಯೊಂದಿಗೆ ಕ್ಲಿಕ್ಕಿಸಿದ ುತ್ತಮ ಫೋಟೋವೊಂದನ್ನು ಆಯ್ಕೆ ಮಾಡಿ ಅದಕ್ಕೊಂದು ಫೋಟೋ ಫ್ರೇಮ್ ಮಾಡಿಸಿ ಜೊತೆಗೊಂದು ಶುಭಾಷಯ ಕೋರುವ ಸಾಲನ್ನೂ ಸೇರಿಸಿ ಉಡುಗೊರೆಯಾಗಿ ನೀಡಿ.

3) ವಾಚ್:
ಕೈ ಗಡಿಯಾರ ಹಳೇ ಕಾಲದಲ್ಲಿ ನೀಡುತ್ತದ್ದ ಕೊಡುಗೆ ಅಂತನಿಸಿದರೂ ಇದು ಸಮಯದ ಮಹತ್ವವನ್ನು ತಿಳಿಸಿಕೊಡುವ ಸಾಧನ. ಹೀಗಾಗಿ ವಾಚ್’ನ್ನು ನಿಮ್ಮ ಮಿತ್ರನಿಗೆ ಕೊಡಲು ಹಿಂಜರಿಕೆ ಬೇಡ. ಆದರೆ ಕೈ ಗಡಿಯಾರವನ್ನು ಆಯ್ಕೆ ಮಾಡುವ ಸಮಯದಲ್ಲಿ ಈಗಿನ ಫ್ಯಾನ್’ಗೆ ಹೊಂದಿಕೊಳ್ಳುವ ಗಡಿಯಾರವನ್ನು ಖರೀದಿಸಿ.

4) ಕಾಫಿ ಕಪ್:
ತಂತ್ರಜ್ಞಾನದಲ್ಲಿ ಇಂದು ಬಹಳಷ್ಟು ಅಭಿವೃದ್ದಿಯಾಗಿದೆ. ಇಂದು ಫೋಟೋವನ್ನು ಕಪ್’ನಲ್ಲಿ ಸದಾ ಕಾಲವೂ ಉಳಿಯುವಂತೆ ಮಾಡುವ ಕಲೆಯೂ ಇದೆ. ಹೀಗಿರುವಾಗ ನಿಮ್ಮ ಗೆಳೆಯ/ಗೆಳತಿಯೊಂದಿಗೆ ಕ್ಲಿಕ್ಕಿಸಿದ ಉತ್ತಮವೆನಿಸಿದ ಫೋಟೋವನ್ನೇ ಕಪ್’ನ ಹೊರ ಬಾಗಕ್ಕೆ ಹಾಕಿಸಿ ಗಿಫ್ಟ್’ ಆಗಿ ನೀಡಬಹುದು. ನಿಮ್ಮ ಮಿತ್ರ ಏನಿಲ್ಲವೆಂದರೂ ಕಾಫಿ ಕುಡಿಯುವ ಸಂದರ್ಭದಲ್ಲಿ ನಿಮ್ಮನ್ನು ನೆನಪಿಸಿಕೊಳ್ಳುತ್ತಾನೆ,

5) ಕೀ ಬಂಚ್:
ಸ್ನೇಹಿತರ ದಿನದಂದು ಕೀ ಬಂಚನ್ನು ಕೊಡುಗೆಯಾಗಿ ನೀಡಬಹುದು. ವಿನೂತನ ರೀತಿಯ ಕೀ ಬಂಚ್’ಗಳು ಇಂದು ಬಂದಿದ್ದು, ಇದರಲ್ಲಿ ನಿಮ್ಮ ಹೆಸರನ್ನೂ ಹಾಕಿಸಬಹುದಾಗಿದೆ. ಹೀಗೆ ನಿಮ್ಮ ಗೆಳೆಯನ ಇಲ್ಲವೇ ನಿಮ್ಮಿಬ್ಬರ ಹೆಸರನ್ನೂ ಬರೆಸಿ ಉಡುಗೊರೆಯಾಗಿ ನೀಡಬಹುದು.

ಇದನ್ನು ಹೊರತುಪಡಿಸಿ ಗ್ರೀಟಿಂಗ್ ಕಾರ್ಡ್, ಕ್ರಾಫ್ಟ್ ವರ್ಕ್’ಗಳು, ಪೇಂಟಿಂಗ್ ಮೊದಲಾದುವುಗಳನ್ನೂ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಬಹುದು.

Comments are closed.