ದಾವಣಗೆರೆ: ಬ್ಯಾಚುಲರ್ ಹೀರೋಗಳನ್ನ ಹುಡುಗಿಯರು ಮದುವೆಯಾಗು ಎಂದು ಕಾಡೋದು ಸಾಮಾನ್ಯ. ಆದ್ರೆ ಗೋಲ್ಡ್‍ನ್ ಸ್ಟಾರ್ ಗಣೇಶ್ ಅಭಿಮಾನಿಯೊಬ್ಬಳು ತನಗೆ ಗಣೇಶ್ ಜೊತೆ ಮದುವೆ ಮಾಡಿ ಎಂದು ದುಂಬಾಲು ಬಿದ್ದಿದ್ದಾಳೆ.
ದಾವಣಗೆರೆಯ ಎಸ್‍ಒಜಿ ಕಾಲೋನಿಯ ನಿವಾಸಿ 26 ವರ್ಷದ ಪುಷ್ಪಲತಾ ಗಣೇಶ್ ಜೊತೆ ಮದುವೆ ಮಾಡಿಸಿ ಎಂದು ಮನೆಯವರಿಗೆ ದುಂಬಾಲು ಬಿದ್ದಿದ್ದಾಳೆ. ನಾನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಗಣೇಶ್‍ನನ್ನು ಪ್ರೀತಿಸುತ್ತಿದ್ದೇನೆ, ಆತನ ಎಲ್ಲಾ ಚಿತ್ರಗಳನ್ನು ನೋಡಿದ್ದೇನೆ. ನನಗೆ ಗಣೇಶ್ ಜೊತೆ ಮದುವೆ ಮಾಡಿಸಿ ಎಂದು ಮನೆಯವರನ್ನು ಪೀಡಿಸುತ್ತಿದ್ದಾಳಂತೆ.
ಅಕ್ಕ ಪಕ್ಕದ ಮನೆಯಲ್ಲಿ ಟಿವಿ ನೋಡಲು ಹೋದಾಗ ಅವರು ಗಣೇಶ್‍ನ್ನು ತೋರಿಸಿ ಈತ ನಿನ್ನೆ ಗಂಡ ಎಂದು ತಮಾಷೆಗೆ ಹೇಳಿದನ್ನೆ ಮನಸ್ಸಿಗೆ ಅಚ್ಚಿ ಕೊಂಡು ಈಗ ನನಗೆ ಗಣೇಶ್ ಬೇಕು ಎಂದು ಹಠ ಹಿಡಿದು ಕುಳಿತಿದ್ದಾಳೆ. ಗಣೇಶ್‍ನೊಂದಿಗೆ ಮದುವೆ ಮಾಡಿಸದೆ ಇದ್ದರೆ, ನಾನು ಆತ್ಮಹತ್ಯೆ ಮಾಡಿಕೊಳ್ಳಿವುದಾಗಿ ಹೇಳಿ, ನೇಣು ಹಾಕಿ ಕೊಳ್ಳಲು ಹಾಗೂ ನಿದ್ದೆ ಮಾತ್ರೆ ತೆಗೆದು ಕೊಳ್ಳಲು ಹೋಗಿದ್ದಾಳೆ. ಈಕೆಯ ಹುಚ್ಚಾಟ ಕಂಡು ಮನೆಯವರು ಕಣ್ಣಿರು ಹಾಕುತ್ತಿದ್ದಾರೆ.
Comments are closed.