ಕರ್ನಾಟಕ

ಅನೈತಿಕ ಸಂಬಂಧವಿಟ್ಟುಕೊಂಡಿದ್ದ ಗಂಡನ ಮನೆಯ ಮುಂದೆ ಪತ್ನಿ ಪ್ರತಿಭಟನೆ

Pinterest LinkedIn Tumblr

huba

ಹುಬ್ಬಳ್ಳಿ: ಬೇರೆಯೊಬ್ಬಳೊಂದಿಗೆ ಅನೈತಿಕ ಸಂಬಂಧವಿಟ್ಟು ಕೊಂಡಿದ್ದ ಗಂಡನ ಮನೆಯ ಮುಂದೆ ಪತ್ನಿ ಹಾಗೂ ಆಕೆಯ ಪೋಷಕರು ಹಾರ್ಮೋನಿಯಂ, ತಬಲ ಹಿಡಿದು ಭಜನೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದ ಘಟನೆ ಇಲ್ಲಿನ ಸಾಯಿನಗರದಲ್ಲಿ ನಡೆದಿದೆ. ಜೆಡಿಎಸ್ ಮುಖಂಡ ನಾಗೇಗೌಡ ಗದ್ದಿಗೆಪ್ಪ ಗೌಡ ತನ್ನನ್ನು ಬಿಟ್ಟು ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿರುವ ಪತ್ನಿ ಹಾಗೂ ಅವರ ಮನೆಯವರು ಗದ್ದಿಗೆಪ್ಪಗೌಡನ ಮನೆ ಮುಂದೆ ಭಜನೆ ಮಾಡಿ ನ್ಯಾಯ ಬೇಕು ಎಂದು ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಕಳೆದ 16 ವರ್ಷಗಳ ಹಿಂದೆ ನಾಗೇಗೌಡ ಹಾಗೂ ಸುಧಾ ಅವರಿಗೆ ಮದುವೆಯಾಗಿತ್ತು. ಈ ನಡುವೆ ನಾಗೇಗೌಡ ಬೇರೆಯೊಬ್ಬರ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ . ಇದನ್ನು ವಿರೋಧಿಸಿ ಸುಧಾ ಗಂಡನ ನಿವಾಸದೆದುರು ಅತ್ತು ಕರೆದು ಅವಲತ್ತುಕೊಂಡಿದ್ದಾರೆ. ಕೊನೆಗೆ ನಾಗೇಗೌಡಗದ್ದಿಗೆಪ್ಪಗೌಡ ಬಗ್ಗದಿದ್ದಾಗ ಪೋಷಕರೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.

Comments are closed.