ಅಡ್ಡಾದಿಡ್ಡಿ ‘ಮೇಯು’ವವರನ್ನು ನೋಡಿದಾಗ ಜನರು ಇವನಿಗೆ ಮಗುವಾಗಲಿ ಆಗ ಸರಿಹೋಗುತ್ತಾನೆ ಎಂದು ಹೇಳುವುದನ್ನು ಕೇಳಿರುತ್ತೇವೆ. ಆದರೆ, ಸಂಶೋಧನೆಯೊಂದು ಇದಕ್ಕೆ ವಿಭಿನ್ನವಾದ ಅಂಶವನ್ನು ಹೊರಹಾಕಿದೆ. ಮದುವೆಯಾದ ಮೇಲೆ ದಂಪತಿಯ ಸೆಕ್ಸ್ ಜೀವನ ಇನ್ನಷ್ಟು ಮಜವಾಗಿರುತ್ತದೆ. ಗಂಡು-ಹೆಣ್ಣು ಹೆಚ್ಚು ಆಸಕ್ತಿಯಿಂದ ಸಂಭೋಗದಲ್ಲಿ ನಿರತರಾಗುತ್ತಾರೆ ಎಂಬುದು ಬ್ರಿಟನ್’ನ ಜಾಲತಾಣದ ಅಧ್ಯಯನದಿಂದ ತಿಳಿದುಬಂದಿದೆ.
ಮಗುವಾದ ಎರಡು ತಿಂಗಳ ನಂತರ ಸಾಮಾನ್ಯವಾಗಿ ದಂಪತಿ ಮತ್ತೆ ಒಂದುಗೂಡುತ್ತಾರೆ. ಮಗುವಾದ ನಂತರ ಮತ್ತೆ ಸಂಭೋಗ ಮಾಡಲು ಹೆಣ್ಣಿಗಿಂತ ಗಂಡು ಹೆಚ್ಚು ಹಾತೊರೆಯುತ್ತಾನೆ. ಗಂಡು ವಾರದಲ್ಲಿ ಎರಡು ಬಾರಿ ಸೆಕ್ಸ್ ಮಾಡಲು ಇಚ್ಛಿಸಿದರೆ, ಹೆಣ್ಣು ಒಂದಕ್ಕೆ ತೃಪ್ತಿ ಪಡುತ್ತಾಳೆ. ಮಗುವಾಗುವ ಮುಂಚಿನದಕ್ಕಿಂತಲೂ ಈಗ ಇವರಿಬ್ಬರು ಹೆಚ್ಚು ಆಸಕ್ತಿಯಿಂದ ಸಂಭೋಗದಲ್ಲಿ ತೊಡಗಿಕೊಳ್ಳುತ್ತಾರೆ. ಅವರ ಸೆಕ್ಸ್ ಜೀವನ ಹೆಚ್ಚು ಸುಖಕರವಾಗಿರುತ್ತದೆ ಎಂದು “ಚಾನೆಲ್ ಮಮ್” ಎಂಬ ವೆಬ್ ತಾಣವು ಅಭಿಪ್ರಾಯಪಟ್ಟಿದೆ.
ಹೆಣ್ಣಿಗೆ ಹಿಂಜರಿಕೆ:
ಮಗುವಾದ ನಂತರ ತನ್ನ ದೇಹದ ಆಕಾರದಲ್ಲಿ ಆಗುವ ಬದಲಾವಣೆಯು ಗಂಡನಿಗೆ ಇಷ್ಟವಾಗದೇಹೋಗಬಹುದು ಎಂಬ ಹಿಂಜರಿಕೆ ಭಾವನೆ ಹೆಣ್ಣಿನಲ್ಲಿರುತ್ತದೆ. ಆದರೆ, ವಾಸ್ತವವಾಗಿ ಗಂಡು ತನ್ನ ಹೆಣ್ಣಿನ ಹೊಸ ಆಕಾರವನ್ನು ಇಷ್ಟಪಡುತ್ತಾನೆ. ತನ್ನ ಹೆಂಡತಿಯ ದಪ್ಪ ಮೈಕಟ್ಟು ಆತನಿಗೆ ಇಷ್ಟವಾಗುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
“ಚಾನೆಲ್ ಮಮ್” ನಡೆಸಿದ ಈ ಸಂಶೋಧನೆಯಲ್ಲಿ ಸಂತಾನ ಹೊಂದಿರುವ 1,118 ದಂಪತಿಗಳನ್ನು ಅಧ್ಯಯನ ಮಾಡಲಾಗಿದೆ. ಇವರ ಪೈಕಿ ಬರೋಬ್ಬರಿ 94%ರಷ್ಟು ದಂಪತಿಗಳು ತೃಪ್ತ ಲೈಂಗಿಕ ಜೀವನ ನಡೆಸುತ್ತಿರುವುದಾಗಿ ತಿಳಿಸಿದ್ದಾರಂತೆ.
Comments are closed.