ಮೇಲಿಂದ ಮೇಲೆ ತಮ್ಮ ಇಮೇಲ್ಗಳನ್ನು ತೆರೆದು ನೋಡುವ ವ್ಯಕ್ತಿಗಳಲ್ಲಿ ಮಾನಸಿಕ ಒತ್ತಡ ಗಣನೀಯವಾಗಿ ತಗ್ಗಲಿದೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ. ತಮ್ಮ ಇಮೇಲ್ಗಳನ್ನು ಪದೇ ಪದೇ ಪರಿಶೀಲಿಸಿ ನೋಡುವವರಲ್ಲಿ ಮಾನಸಿಕ ಒತ್ತಡ ಗಣನೀಯವಾಗಿ ಕಡಿಮೆಯಾಗುತ್ತದೆ ಎಂಬುದು ನಾವು ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ ಎಂದು ಕೊಸ್ಟಾಡಿನ ಕುಶ್ಲೇವ್ ಎಂಬ ಸಂಶೋಧನಾ ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.
ಇದಕ್ಕಾಗಿ ನಾವು 124 ವಯಸ್ಕರನ್ನು ಒಂದು ವಾರ ಕಾಲ ದಿನಕ್ಕೆ ಮೂರು ಬಾರಿ ಇಮೇಲ್ ನೋಡಲು ಹೇಳಿದ್ದೆವು. ನಂತರ ಇನ್ನೊಂದು ಗುಂಪಿಗೆ ತಮಗೆ ಬೇಕಾದಂತೆ ಅನಿಯಮಿತವಾಗಿ ಇಮೇಲ್ ನೋಡುವಂತೆ ಹೇಳಿದ್ದೆವು. ನಂತರ ಇವರನ್ನೆಲ್ಲಾ ಅಧ್ಯಯನಕ್ಕೊಳಪಡಿಸಿದಾಗ ಮಿತಿಯಲ್ಲಿ ಇಮೇಲ್ ನೋಡಿದವರು ಹೆಚ್ಚು ಒತ್ತಡ ಅನುಭವಿಸಿದ್ದಾರೆ. ಮುಕ್ತವಾಗಿ ವೀಕ್ಷಿಸಿದವರು ಒತ್ತಡ ಮುಕ್ತರಾಗಿರುವುದು ಕಂಡುಬಂತು ಎಂದು ಅವರು ಹೇಳಿದ್ದಾರೆ. ತಮ್ಮ ಕಚೇರಿಯಲ್ಲಿನ ಉದ್ಯೋಗಿಗಳ ಮಾನಸಿಕ ಒತ್ತಡ ತಗ್ಗಿಸಲು ಕಂಪನಿಗಳ ಮುಖ್ಯಸ್ಥರು ಅವರಿಗೆ ತಮ್ಮ ತಮ್ಮ ಇಮೇಲ್ಗಳನ್ನು ಪರಿಶೀಲಿಸಲು ಅನುವು ಮಾಡಿಕೊಟ್ಟರೆ ಅವರೆಲ್ಲಾ ಒತ್ತಡ ಮುಕ್ತರಾಗುತ್ತಾರೆ ಎಂಬುದು ಈ ಸಂಶೋಧಕರ ಅಭಿಪ್ರಾಯ.
Comments are closed.