ಹೈದರಾಬಾದ್: ಕುಡಿದ ಅಮಲಿನಲ್ಲಿ 30 ವರ್ಷದ ವ್ಯಕ್ತಿಯೊಬ್ಬ ತನ್ನ ಆರು ವರ್ಷದ ಮಗಳ ಸ್ನೇಹಿತೆ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಮಾಲಕ್ ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಹಮಲಿ ಬಸ್ತಿಯ ಗಾಂಧಿ ನಗರದ ಸ್ಲಂ ನಿವಾಸಿ ನಾಲ್ಕು ಹೆಣ್ಣು ಮಕ್ಕಳ ತಂದೆ ಶ್ರೀನಿವಾಸ್ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪಿಯಾಗಿದ್ದಾನೆ.
ಕಳೆದ ರಾತ್ರಿ ಕುಡಿದ ಅಮಲಿನಲ್ಲಿದ್ದ ಶ್ರೀನಿವಾಸ್ ಹೆಂಡತಿ ಜತೆ ಜಗಳವಾಡಿದ್ದಾನೆ. ಶ್ರೀನಿವಾಸನ ಕಿರುಕುಳದಿಂದಾಗಿ ಹೆಂಡತಿ ಮಧ್ಯರಾತ್ರಿಯಲ್ಲಿ ತಮ್ಮ ನಾಲ್ಕು ಮಕ್ಕಳನ್ನು ಕರೆದುಕೊಂಡು ಹೊರಗೆ ಹೋಗಿದ್ದಾಳೆ. ಈ ವೇಳೆ ತಾಯಿ ಇಲ್ಲದ ಅತ್ಯಾಚಾರ ಸಂತ್ರಸ್ತ ಬಾಲಕಿ ಶ್ರೀನಿವಾಸನ ಮಕ್ಕಳೊಂದಿಗೆ ಮಲಗಿದ್ದಾಳೆ. ಹೆಂಡತಿ ಹೊರ ಹೋದ ನಂತರ ಶ್ರೀನಿವಾಸ ಮಲಗಿದ್ದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ.
ಮಾರನೇ ದಿನ ಬೆಳಗ್ಗೆ ಎದ್ದ ಬಾಲಕಿಗೆ ತೀವ್ರ ರಕ್ತಸ್ರಾವವಾಗಿದೆ. ನೋವಿನಿಂದ ಅಳುತ್ತಿದ್ದ ಬಾಲಕಿ ತಂದೆ ಕೆ ಶ್ರೀನಿವಾಸ್ ಗೆ ವಿಷಯ ತಿಳಿಸಿದ್ದಾಳೆ. ಕೆ ಶ್ರೀನಿವಾಸ್ ಕೂಡಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಆರೋಪಿ ಶ್ರೀನಿವಾಸನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಶ್ರೀನಿವಾಸ್ ಅತ್ಯಾಚಾರ ನಡೆಸಿರುವುದನ್ನು ಒಪ್ಪಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿ ಗಂಗಾ ರೆಡ್ಡಿ ತಿಳಿಸಿದ್ದಾರೆ.
ಆರೋಪಿ ಶ್ರೀನಿವಾಸ್ ವಿರುದ್ಧ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.
Comments are closed.