ಅಂತರಾಷ್ಟ್ರೀಯ

ಲಿಪ್ಸ್ ಕಿಸ್ ಮಾಡುವ ಮುನ್ನ ಈ ವರದಿ ಓದಿ…! ಕಿಸ್ ಕೊಟ್ಟು ಸಂತಾನಶಕ್ತಿಯನ್ನೇ ಕಳೆದುಕೊಳ್ಳಬೇಕಾದೀತು…

Pinterest LinkedIn Tumblr

kiss

ಪಿಟ್ಸ್’ಬರ್ಗ್: ಯಾರಿಗಾದರೂ ಅಪರಿಚಿತರಿಗೆ ಕಿಸ್ ಕೊಡುವ ಮುನ್ನ ಹುಷಾರ್..! ಮುತ್ತು ಕೊಟ್ಟಾಗ ಎಂಜಲಿನ ಮೂಲಕ ಅಪಾಯಕಾರಿ ವೈರಸ್’ವೊಂದು ಹಬ್ಬುತ್ತಿರುವ ಅಂಶ ಬೆಳಕಿಗೆ ಬಂದಿದೆ. ಈ ವೈರಸ್ ನಮ್ಮ ಲೈಂಗಿಕ ಶಕ್ತಿಯನ್ನೇ ಕುಂದಿಸಬಲ್ಲುದಂತೆ. ಸಂತಾನಹೀನ ಮಹಿಳೆಯರ ಅಧ್ಯಯನ ಮಾಡಿದಾಗ ಈ ವಿಚಾರ ಬಹಿರಂಗಗೊಂಡಿದೆ ಎಂದು ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.

ಮಕ್ಕಳಾಗಲು ಸಾಧ್ಯವಿಲ್ಲದ ಶೇ. 43ರಷ್ಟು ಮಹಿಳೆಯರ ಗರ್ಭಕೋಶದಲ್ಲಿ ಹೆಚ್’ಹೆಚ್’ವಿ-6ಎ ಎಂಬ ಹರ್ಪೆಸ್ ಜಾತಿಯ ವೈರಸ್ ಇರುವುದು ಕಂಡುಬಂದಿದೆ. ಸಂತಾನೋತ್ಪತ್ತಿ ಶಕ್ತಿ ಸಹಜವಾಗಿರುವ ಮಹಿಳೆಯರಲ್ಲಿ ಈ ವೈರಸ್ ಕಾಣಿಸಿಕೊಂಡಿಲ್ಲ.

ಗರ್ಭಧಾರಣೆಗೆ ನೆರವಾಗುವ ಸೈಟೋಕೈನ್ಸ್ ಎಂಬ ಅಂಶದ ಪ್ರಮಾಣವು ಈ ವೈರಸ್’ನಿಂದ ಪೀಡಿತವಾಗಿರುವ ಮಹಿಳೆಯರಲ್ಲಿ ಸಹಜಕ್ಕಿಂತ ತೀರಾ ಕಡಿಮೆ ಇರುತ್ತದೆ.

ಇನ್ನೊಂದು ವಿಚಾರವೆಂದರೆ, ರಕ್ತದಲ್ಲಾಗಲೀ ಅಥವಾ ಎಂಜಲಿನಲ್ಲಾಗಲೀ ಈ ವೈರಸನ್ನು ಪತ್ತೆ ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ಲಾಲಾ ಗ್ರಂಥಿ(ಎಂಜಲನ್ನು ಸ್ರವಿಸುವ ಗ್ರಂಥಿ)ಯಲ್ಲಿ ಈ ವೈರಸ್ ಬೆಳೆಯುತ್ತಾ ಹೋಗುತ್ತದೆ. ಈ ಹಿನ್ನೆಲೆಯಲ್ಲಿ ನಾವು ಬಾಯಿಂದ ಬಾಯಿಗೆ ಮುತ್ತುಕೊಟ್ಟಾಗ ಈ ಲಾಲಾ ಗ್ರಂಥಿ ಮೂಲಕ ಒಬ್ಬರಿಂದೊಬ್ಬರಿಗೆ ಹರಡುವ ಸಾಧ್ಯತೆ ಇದೆ.

ಹಾಗಾದರೆ ಏನು ಮಾಡಬೇಕು?
ಹೆಚ್ಐವಿ ವಿಚಾರದಲ್ಲಿಯಂತೆ ಈ ಎಚ್’ಎಚ್’ವಿ-6ಎ ವೈರಸ್ ವಿಷಯದಲ್ಲೂ ಜಾಗ್ರತೆಯಿಂದಿರಬೇಕು. ಒಬ್ಬರೇ ಸಂಗಾತಿಯೊಂದಿಗೆ ಮಾತ್ರ ಈ ಕಿಸ್ಸಿಂಗ್ ಸಂಬಂಧ ಇಟ್ಟುಕೊಳ್ಳಿ. ಸಿಕ್ಕಸಿಕ್ಕವರಿಗೆಲ್ಲಾ ಮುತ್ತಿಡಲು ಹೋದರೆ ಇಲ್ಲದ ರೋಗ ತಂದುಕೊಳ್ಳಬೇಕಾದೀತು.

Comments are closed.