ಪ್ರಮುಖ ವರದಿಗಳು

ಸಾಮಾಜಿಕ ಮಾಧ್ಯಮಗಳಲ್ಲಿ ತಮಾಷೆಯ ಸರಕಾಗಿಬಿಟ್ಟ ಬಾಬಾ ರಾಮ್’ದೇವ್!

Pinterest LinkedIn Tumblr

2121

ನವದೆಹಲಿ: ಯೋಗಾಸನ ವಿದ್ಯೆಯಲ್ಲಿ ಭಾರತ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಹಾಗೂ ಹಣಕಾಸು ಖ್ಯಾತಿ ಪಡೆದಿರುವ ಯೋಗಾ ಗುರು ಬಾಬಾ ರಾಮ್’ದೇವ್ ಅವರ ‘ಪ್ರಸರಿತ ಪದೋತ್ತಾನಾಸನ’ ಭಂಗಿ ಆಂಗ್ಲ ನಿಯತಕಾಲಿಕೆ ಇಂಡಿಯಾ ಟುಡೆ ನಿಯತಕಾಲಿಕೆಯ ಮುಖಪುಟದಲ್ಲಿ ಪ್ರಕಟವಾಗಿದ್ದು, ಈ ಚಿತ್ರವನ್ನು ಹಲವರು ತಮ್ಮ ವಿನ್ಯಾಸಕ್ಕೆ ಮಾರ್ಪಡಿಸಿದ್ದು, ಇದು ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ತಮಾಷೆಯಾಗಿ ಪರಿಣಮಿಸಿದೆ.

‘ಪ್ರಸರಿತ ಪದೋತ್ತಾನಾಸನ’ದ ಭಂಗಿ ಕಾಲು ಅಗಲಗೊಳಿಸಿ ದೇಹವನ್ನು ಮುಂದೆ ಬಾಗಿಸಿ ನಿಲ್ಲುವ ಭಂಗಿ ಇದಾಗಿದೆ. ಅಧ್ಯಾತ್ಮವನ್ನು ಸಂಪೂರ್ಣವಾಗಿ ಮೇಲೆ ಕೆಳಗೆ ಮಾಡಿ ರಾಜಕೀಯ, ಆರ್ಥಿಕ ಹಾಗೂ ಸಾಂಸ್ಕೃತಿಕ ಸೂಪರ್ ಬ್ರ್ಯಾಂಡ್ ಆದ ಶಕ್ತಿ ಯೋಗಿ ಎಂದು ಶೀರ್ಷಿಕೆ ನೀಡಿದ್ದಾರೆ. ಇಂಡಿಯಾ ಟುಡೆಯು ಮುಖಪುಟದ ಚಿತ್ರವನ್ನು ಟ್ವಿಟ್ಟರ್’ನಲ್ಲಿ ಪೋಸ್ಟ್ ಮಾಡಿದ ನಂತರ ರಾಮ್’ದೇವ್ ತಮಾಷೆಯ ಸರಕಾಗಿಬಿಟ್ಟಿದ್ದಾರೆ.

ರಾಮ್ ದೇವ್ ಅವರ ಈ ಆಸನವನ್ನು ತಮಾಷೆ ಮಾಡಿರುವ ಕೆಲವು ಟ್ವೀಟ್’ಗಳು ಈಗಿವೆ..

1) ವಿ ಫಾರ್ ವೇದಾಂತ ಬಿ ಫಾರ್ ಬಾಬಾ ರಾಮ್’ದೇವ್

2

2) ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಹೊಡೆದುರುಳಿಸುವ ಭಾರತೀಯ ವಾಯುದಳ ಸೇನೆಯ ಪ್ರಮುಖ ಆಸನ ಅಸ್ತ್ರ

3

3) ರಾಮ್’ದೇವ್ ಅವರು ಜಾಕಿ ಕಂಪನಿಯ ಒಳ ಉಡುಪಿಗೆ ಸ್ಪರ್ಧಿಯಾಗಿ ನೂತನ ಪತಾಂಜಲಿ ಲಂಗೋಟಿಯನ್ನು ಬಿಡುಗಡೆ ಮಾಡಿದ್ದಾರೆ

1

4) ರಷ್ಯಾದಲ್ಲಿ 2018 ರಲ್ಲಿ ನಡೆಯುವ ಫೈಫಾ ವಿಶ್ವಕಪ್ ಫುಟ್’ಬಾಲ್ ಭಾರತ ತಂಡದ ಗೋಲ್’ಕೀಪರ್’ಆಗಿ ಅಭ್ಯಾಸ ಮಾಡುತ್ತಿದ್ದಾರೆ

4

5) 2016ರ ರಿಯೋ ಒಲಿಂಪಿಕ್ಸ್’ನಲ್ಲಿ ಈಜು ಸ್ಪರ್ಧೆಯಲ್ಲಿ ಭಾಗವಹಿಸಲು ಅಭ್ಯಾಸ ಮಾಡುತ್ತಿರುವ ಭಂಗಿ

5

6) ರಾಮ್’ದೇವ್ ಅವರು ಅಗಸದಲ್ಲಿ ಈ ಆಸನದಲ್ಲಿ ಬೆಲೈಜ್ ಅಭ್ಯಾಸ ಮಾಡುತ್ತಿದ್ದಾರೆ.

6

7) ಚಂದ್ರನಲ್ಲಿ ಧ್ವಜ ಹಾರಾಡಿದ ನಂತರ ರಾಮ್ ದೇವ್ ಅವರ ಗುರುತ್ವಾಕರ್ಷಣೆ ವಿರೋಧಿ ಗಡ್ಡ ಮುಂದಿನ ಜನಾಂಗದ ವಿಜ್ಞಾನ ಫಿಕ್ಷನ್

7

8) ರಾಮ್’ದೇವ್ ಅವರ ಈ ಚಿತ್ರ ನೋಡಿ ಡೊನಾಲ್ಡ್ ಟ್ರಂಪ್ ಅವರಿಗೆ ಹೃದಯಾಘಾತವಾಗಿದೆ.

8

ಅಂದ ಹಾಗೆ ಈ ತಮಾಷೆಯ ಯೋಗಾ ಭಂಗಿಯ ಚಿತ್ರವನ್ನು ತೆಗೆದವರು ‘ಇಂಡಿಯಾ ಟುಡೆ’ ಛಾಯಾಚಿತ್ರಗಾರರಾದ ‘ಬಾನ್’ದೀಪ್ ಸಿಂಗ್’. ಆ ಚಿತ್ರವನ್ನು ತೆಗೆಯುವ ಮುನ್ನ ತಮಗಾದ ಅನುಭವವನ್ನು ‘ಡೈಲಿಓ’ ವೆಬ್’ಸೈಟ್’ನಲ್ಲಿ ಬರೆದು ಕೊಂಡಿದ್ದಾರೆ.

Comments are closed.