ನವದೆಹಲಿ: ವಿವಾದಾತ್ಮಕ ಇಸ್ಲಾಂ ಧರ್ಮ ಬೋಧಕ ಜಾಕೀರ್ ನಾಯಕ್ ಅವರ ಶಿರಚ್ಛೇದನ ಮಾಡಿದರೆ 50 ಲಕ್ಷ ರೂ. ಬಹುಮಾನ ನೀಡುವುದಾಗಿ ಸಂಸದೆ ಸಾಧ್ವಿ ಪ್ರಾಚಿ ಹೇಳಿದ್ದಾರೆ.
ದ್ವೇಷ ಭಾಷಣದ ಮೂಲಕ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿರುವ ಜಾಕಿರ್ ನಾಯಕ್ ಧಾರ್ಮಿಕ ಬೋಧಕನಲ್ಲ. ಈತ ಭಯೋತ್ಪಾದಕ ಎಂದು ಸಾಧ್ವಿ ಹೇಳಿದ್ದಾರೆ.
ಈ ಬಹುಮಾನದ ಮೊತ್ತವನ್ನು ನಾನೇ ಭರಿಸಲಿದ್ದು, ಇದಕ್ಕಾಗಿ ಸರ್ಕಾರ ಅಥವಾ ಯಾವುದೇ ಸಂಘಟನೆಯ ಬಳಿ ಕೇಳುವುದಿಲ್ಲ ಎಂದು ತಿಳಿಸಿದ್ದಾರೆ. ಮದರಸಾಗಳಲ್ಲಿ ಧರ್ಮ ಬೋಧಕರಂತೆ ಇದ್ದುಕೊಂಡು ಭಯೋತ್ಪಾದಕರ ಜೊತೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಜಾಕೀರ್ ನಾಯಕ್ ನ ಕಲೆ ಕಡಿದವರಿಗೆ 50 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ ನಂತರ ನನಗೆ ಶಾಹಿದ್ ಎಂಬಾತ ಕರೆ ಮಾಡಿ ಕೊಲ್ಲುವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿರುವ ಸಾಧ್ವಿ, ಈ ಸಂಬಂಧ ಪೊಲೀಸರಿಗೆ ದೂರು ನೀಡಿರುವುದಾಗಿ ಹೇಳಿದ್ದಾರೆ
Comments are closed.