ಪ್ರಮುಖ ವರದಿಗಳು

ಲಿವಿಂಗ್ ಟುಗೆದರ್‍ನಲ್ಲಿದ್ದ ಯುವತಿ ಮದುವೆಯಾಗು ಎಂದಿದ್ದಕ್ಕೆ 32 ಬಾರಿ ಇರಿದ ಸಂಗಾತಿ ! ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಯುವತಿ

Pinterest LinkedIn Tumblr

attack

ನೊಯ್ಡಾ: ಲಿವಿಂಗ್ ಟುಗೆದರ್‍ನಲ್ಲಿದ್ದ ಯುವತಿಯೊಬ್ಬಳು ಮದುವೆಯಾಗು ಎಂದಿದ್ದಕ್ಕೆ ಆಕೆಯ ಪಾಟ್ರ್ನರ್ ಹತ್ಯೆ ಮಾಡಲು ಯತ್ನಿಸಿದ್ದು, ಇದೀಗ ಯುವತಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಘಟನೆ ದೆಹಲಿಯ ನೊಯ್ಡಾದಲ್ಲಿ ನಡೆದಿದೆ.

ಕಳೆದ ವರ್ಷದಿಂದ ವರುಣ್ ಗೋಯಾಲ್ ಎಂಬಾತನ ಜೊತೆಗೆ ಯುವತಿ ಲಿವಿಂಗ್ ಟುಗೆದರ್‍ನಲ್ಲಿದ್ದಳು. ಆದ್ರೆ ಕೆಲದಿನಗಳಿಂದ ಯುವತಿ ಲಿವಿಂಗ್ ಟುಗೆದರ್ ಸಾಕು ಮದುವೆಯಾಗೋಣ ಎಂದು ವರುಣ್‍ಗೆ ಹೇಳಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಇಬ್ಬರ ನಡುವೆ ಜಗಳ ನಡೆದಿದ್ದು, ಸಿಟ್ಟಿಗೆದ್ದ ವರುಣ್ 32 ಬಾರಿ ಆಕೆಗೆ ಇರಿದು ಹತ್ಯೆಗೆ ಯತ್ನಿಸಿದ್ದಾನೆ.

ಆರೋಪಿ ವರುಣ್ 2 ಜಿಮ್‍ಗಳನ್ನು ಇಟ್ಟುಕೊಂಡಿದ್ದು, ಯುವತಿ ಜಿಮ್ ಬಂದ ವೇಳೆ ಇಬ್ಬರ ನಡುವೆ ಗೆಳೆತನ ಬೆಳೆದು ನಂತರ ಇಬ್ಬರು ಲಿವಿಂಗ್ ಟುಗೆದರ್‍ನಲ್ಲಿದ್ದರು ಎನ್ನಲಾಗಿದೆ. ಘಟನೆ ನಡೆದ ದಿನ ಯುವತಿ ಚೀರಾಟ ಕೇಳಿದ ನೆರೆಮೆನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸದ್ಯ ತೀವ್ರವಾಗಿ ಗಾಯಗೊಂಡಿರುವ ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಆರೋಪಿ ವರುಣ್‍ನನ್ನ ಪೊಲೀಸರು ಬುಧವಾರ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Comments are closed.