
ನವದೆಹಲಿ: ಒಬ್ಬ ವ್ಯಕ್ತಿ ಎರಡು ಮೂರು ಪತ್ನಿಯರನ್ನು ಹೊಂದಿರುವ ಪ್ರಕರಣಗಳು ವಿರಳವೇನಲ್ಲ. ಆದರೆ ನೈಜೀರಿಯಾದ ವ್ಯಕ್ತಿಯೊಬ್ಬ 13 ಪತ್ನಿಯರನ್ನು ಹೊಂದಿದ್ದು ಇದೀಗ ಇವರ ಫೋಟೋ ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡುತ್ತಿದೆ.
ಕುತೂಹಲಕಾರಿ ವಿಚಾರವೆಂದರೆ ಈತನ ಎಲ್ಲ ಪತ್ನಿಯರೂ ಏಕ ಕಾಲದಲ್ಲಿ ಗರ್ಭವತಿಯರಾಗಿದ್ದಾರೆ. ನೈಜೀರಿಯಾದ ವ್ಯಕ್ತಿ ತನ್ನ ಪತ್ನಿಯರೊಂದಿಗಿರುವ ಚಿತ್ರ ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡುತ್ತಿದ್ದು, ಎಲ್ಲ ಪತ್ನಿಯರೂ ಸಾಮರಸ್ಯದಿಂದಿದ್ದಾರೆ ಎನ್ನಲಾಗಿದೆ. ಒಬ್ಬರಿಗೊಬ್ಬರು ಸಹಾಯ ಮಾಡುತ್ತಾರಂತೆ. ಫೋಟೋದಲ್ಲೂ 13 ಮಹಿಳೆಯರು ಕೂಡಾ ಸಂತಸದಿಂದ ಇರುವಂತೆ ಕಂಡುಬಂದಿದೆ. ಮಾಧ್ಯಮದ ವರದಿ ಪ್ರಕಾರ ಅಷ್ಟೂ ಪತ್ನಿಯರ ಹೆರಿಗೆ ದಿನಾಂಕದಲ್ಲಿ ಮೂರರಿಂದ ಐದು ವಾರಗಳ ವ್ಯತ್ಯಾಸವಿದೆಯಷ್ಟೆ
Comments are closed.