ಅಂತರಾಷ್ಟ್ರೀಯ

ನಿಮಗೆ ಹುಟ್ಟುವ ಮಗು ಬುದ್ಧಿವಂತ ಆಗಬೇಕೇ…ಹೀಗೆ ಮಾಡಿ …

Pinterest LinkedIn Tumblr

pregnancy

ವಾಷಿಂಗ್ಟನ್ ಡಿ.ಸಿ : ಪ್ರತಿಯೊಬ್ಬ ತಾಯಿಯು ತಮಗೆ ಜನಿಸುವ ಮಕ್ಕಳು ಬುದ್ಧಿವಂತರಾಬೇಕೆಂಬ ಬಯಕೆ ಹೊಂದಿರುತ್ತಾರೆ. ಜನಿಸಿದ ಕೆಲವು ಮಕ್ಕಳು ಕಾಲ ನಂತರದಿಂದ ಚುರುಕುತನ ಪಡೆದುಕೊಂಡರೆ. ಇನ್ನು ಕೆಲವು ಮಕ್ಕಳು ಹುಟ್ಟಿನಿಂದಲೇ ಬುದ್ಧಿವಂತರಾಗಿರುತ್ತಾರೆ. ಅದಕ್ಕೆ ತಾಯಂದಿರು ತಾವು ಗರ್ಭಿಣಿಯಾಗಿದ್ದಾಗ ಆರೈಕೆ ಹೆಚ್ಚು ಮುಖ್ಯ. ಅದಕ್ಕೆ ಏನು ಮಾಡಬೇಕು ಸಂಶೋಧಕರ ತಂಡ ತಿಳಿಸಿರುವ ವರದಿ ಇಲ್ಲಿದೆ.

ಗರ್ಭಿಣಿ ವ್ಯವಸ್ಥೆಯಲ್ಲಿದ್ದಾಗ ಹೆಚ್ಚು ಹೆಚ್ಚು ಹಣ್ಣು ಸೇವಿಸಿದರೆ ಜನಿಸಿದ ಮಕ್ಕಳು ಉತ್ತಮ ಕೌಶಲ್ಯ ಹೊಂದಿರುತ್ತಾರೆ ಎಂದು ಅಮೆರಿಕಾದ ಅಲ್ಬೆರ್ಟಾ ವಿಶ್ವವಿದ್ಯಾಲಯ ಸಂಶೋಧನೆಯಲ್ಲಿ ತಿಳಿಸಿದೆ.

ವಿಶ್ವವಿದ್ಯಾಲಯದ ಹಿರಿಯ ಲೇಖಕ ಪಿಯುಶ್ ಮಾಂಡನೆ ಅವರು ಕೆನಡಾದ ಆರೋಗ್ಯ ಶಿಶು ರೇಖಾಂಶ ಅಭಿವೃದ್ಧಿ ಅಧ್ಯಯನ ಕೇಂದ್ರದಿಂದ ದೇಶಾದ್ಯಂತ 3,500 ಕೆನಾಡದಾ ಶಿಶುಗಳು ಹಾಗೂ ಅವರ ಕುಟುಂಬಗಳನ್ನು ಸಂಶೋಧನೆಗೆ ಒಳಪಡಿಸಿ ವರದಿ ನೀಡಿದ್ದಾರೆ.

ಈ ವರದಿಯ ಪ್ರಕಾರ ಗರ್ಬೀಣಿ ವ್ಯವಸ್ಥೆಯಲ್ಲಿ ಹೆಚ್ಚು ಹಣ್ಣು ಹಾಗೂ ಹಣ್ಣಿನ ರಸಗಳನ್ನು ಸೇವಿಸಿದ ತಾಯಂದಿರ ಮಕ್ಕಳು ಬೆಳವಣಿಗೆಯ ಒಂದು ವರ್ಷದ ಅವಧಿಯಲ್ಲಿ ಹೆಚ್ಚು ಚುರುಕಾಗಿದ್ದಾರೆ. ಸಾಮಾನ್ಯ ಆಹಾರ ಕಡಿಮೆ ಹಣ್ಣು ಸೇವಿಸಿದ ಗರ್ಬೀಣಿಯರ ಮಕ್ಕಳು ಕಡಿಮೆ ಬುದ್ಧಿವಂತರಾಗಿದ್ದಾರೆ.

Comments are closed.