ಕರ್ನಾಟಕ

ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ನಲ್ಲಿ ಬಾಂಬ್‌ ಸ್ಫೋಟ: ಸ್ಫೋಟಕ್ಕೆ ಮಹಿಳೆ ಬಲಿ; ನಾಲ್ವರಿಗೆ ಗಾಯ

Pinterest LinkedIn Tumblr

bamb

ಬೆಂಗಳೂರು: ರಾಜಧಾನಿ ಬೆಂಗಳೂರು ಬಾಂಬ್ ದಾಳಿಯಿಂದ ಮತ್ತೊಮ್ಮೆ ತತ್ತರಿಸಿದೆ. ವಾರಾಂತ್ಯದಲ್ಲಿ ಜನದಟ್ಟಣೆ ಹೆಚ್ಚಿರುವ ನಗರದ ಚರ್ಚ್ ಸ್ಟ್ರೀಟ್‌ನಲ್ಲಿ ಭಾನು­ವಾರ ರಾತ್ರಿ ಸಂಭವಸಿದ ಬಾಂಬ್‌ ಸ್ಫೋಟಕ್ಕೆ ಮಹಿಳೆ ಬಲಿಯಾ­ಗಿದ್ದಾರೆ. ಘಟನೆಯಲ್ಲಿ ನಾಲ್ವರು ಗಾಯ­ಗೊಂಡಿದ್ದಾರೆ.

ಇಸ್ಲಾಮಿಕ್ ಸ್ಟೇಟ್‌ (ಐ.ಎಸ್‌) ಭಯೋ­ತ್ಪಾದನಾ ಸಂಘಟನೆಯ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಮೆಹದಿ ಮಸ್ರೂರ್ ಬಿಸ್ವಾಸ್‌ನ ಬಂಧನದ ಬೆನ್ನಲ್ಲೇ ಈ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ. ಮೆಹದಿ ಬಂಧನಕ್ಕೆ ಪ್ರತಿಕಾರ ತೀರಿಸಿ­ಕೊಳ್ಳುವುದಾಗಿ ಶಂಕಿತ ಉಗ್ರರು ಟ್ವಿಟರ್ನಲ್ಲಿ ಬೆದರಿಕೆ ಹಾಕಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಘಟನೆಯ ಹಿನ್ನೆಲೆಯಲ್ಲಿ ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

mggsw

ಚರ್ಚ್ ಸ್ಟ್ರೀಟ್‌ನ ಕೊಕೊನಟ್ ಗ್ರೋ ರೆಸ್ಟೋರೆಂಟ್‌ನ ಪ್ರವೇಶದ್ವಾರ­ದಲ್ಲಿ ರಾತ್ರಿ 8.30ರ ಸುಮಾರಿಗೆ ಸುಧಾರಿತ ಸ್ಫೋಟಕ (ಐಇಡಿ) ನೆರವಿ­ನಿಂದ ಬಾಂಬ್ ಸ್ಫೋಟ ಮಾಡಲಾಗಿದೆ. ಘಟನೆಯಲ್ಲಿ ಚೆನ್ನೈ ಮೂಲದ ಭವಾನಿ (38) ಮೃತಪಟ್ಟರು. ಎಂಜಿನಿಯರಿಂಗ್ ವಿದ್ಯಾರ್ಥಿ ಕಾರ್ತಿಕ್ (23), ಸಂದೀಪ್ (40), ವಿನಯ್ ಹಾಗೂ ಹರೀಶ್ ಎಂಬುವರು ಗಾಯ­ಗೊಂಡಿ­ದ್ದಾರೆ. ಘಟನಾ ಸ್ಥಳದಲ್ಲಿ ಪಂಜೆ ಮತ್ತು ಪೇಪರ್ ಸಿಕ್ಕಿದ್ದು, ಪೊಲೀಸರು ಅವನ್ನು ವಶಕ್ಕೆ ಪಡೆದಿದ್ದಾರೆ.

ಭವಾನಿ ಕ್ರಿಸ್ಮಸ್ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಗಾಗಿ ನಗರಕ್ಕೆ ಬಂದಿದ­್ದರು. ಕುಟುಂಬ ಸದಸ್ಯರ ಜೊತೆಗೆ ಭಾನುವಾರ ರಾತ್ರಿ ಎಂ.ಜಿ.ರೋಡ್‌ಗೆ ಬಂದಿದ್ದರು. ಘಟನೆಯಲ್ಲಿ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಅವರನ್ನು ಕೂಡಲೇ ಮಲ್ಯ ಆಸ್ಪತ್ರೆಗೆ ದಾಖಲಿಸಲಾ­ಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ 11 ಗಂಟೆ ವೇಳೆಗೆ ಮೃತಪಟ್ಟರು. ಕಾರ್ತಿಕ್ ಬೆನ್ನಿಗೆ ಗಾಯ­ವಾಗಿದೆ. ಅವರು ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Write A Comment