ಅಂತರಾಷ್ಟ್ರೀಯ

ಬರೋಬ್ಬರಿ 65 ಲಕ್ಷ ಬೆಳೆ ಬಾಳುವ ಬಂಗಾರ ಜೊತೆ ವ್ಯಕ್ತಿಯ ಅಂತ್ಯಕ್ರಿಯೆ !

Pinterest LinkedIn Tumblr

ಪೋರ್ಟ್ ಆಫ್ ಸ್ಪೇನ್: ವ್ಯಕ್ತಿಯೊಬ್ಬರು ಸತ್ತರೆ ಅವರಿಗೆ ಇಷ್ಟವಾದ ವಸ್ತುವನ್ನ ಅವರ ಜೊತೆಯಲ್ಲಿ ಸಮಾಧಿ ಮಾಡುತ್ತಾರೆ. ಆದರೆ ಕೆರೆಬಿಯನ್ ದ್ವೀಪದಲ್ಲಿ ವ್ಯಕ್ತಿಯೊಬ್ಬರು ಬರೋಬ್ಬರಿ 65 ಲಕ್ಷ ಬೆಳೆ ಬಾಳುವ ಬಂಗಾರ ಜೊತೆ ಸಮಾಧಿಯಾಗುವ ಮೂಲಕ ಸುದ್ದಿಯಾಗಿದ್ದಾರೆ.

ಬದುಕಿದ್ದಾಗ ಮೈ ತುಂಬಾ ಚಿನ್ನಾಭರಣ ಧರಿಸಿ ಓಡಾಡಬೇಕು ಅನ್ನೋ ಆಸೆ ಎಲ್ಲರಲ್ಲೂ ಇರುತ್ತೆ. ಅದು ಸಹಜ. ಸತ್ತ ಮೇಲೆ ಯಾರೂ ಏನೂ ಹೊತ್ಕೊಂಡ್ ಹೋಗಲ್ಲ ಸ್ವಾಮಿ ಅನ್ನೋರೂ ತುಂಬಾ ಮಂದಿ. ಆದರೆ ಕೆರಿಬಿಯನ್ ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಕೊಲೆಯಾಗಿದ್ದ ವ್ಯಕ್ತಿಯೊಬ್ಬರನ್ನು ವಿಭಿನ್ನವಾಗಿ ಸಮಾಧಿ ಮಾಡಲಾಗಿದೆ.

ಶೆರಾನ್ ಸುಖೆಡೋ (33) ಕೊಲೆಯಾದ ವ್ಯಕ್ತಿ. ಕಳೆದ ವಾರ ಪತ್ನಿ ಮತ್ತು ಪೋಷಕರ ಜೊತೆ ಮನೆಯ ಹೊರಗೆ ಶೂಟಿಂಗ್ ನಡೆಸುತ್ತಿದ್ದಾಗ ಯಾರೋ ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಕೊಂದಿದ್ದರು. ಇವರು ಜೀವನದುದ್ದಕ್ಕೂ ಮೈತುಂಬಾ ತೊಲೆಗಟ್ಟಲೆ ಚಿನ್ನ ಧರಿಸಿ ಓಡಾಡುತ್ತಿದ್ದರು. ಆದ್ದರಿಂದ ಚಿನ್ನದಿಂದಲೇ ಅವರ ಅಂತ್ಯಸಂಸ್ಕಾರ ಮಾಡಲಾಗಿದೆ ಎಂಬುದಾಗಿ ವರದಿಯಾಗಿದೆ.

ರಿಯಲ್ ಎಸ್ಟೇಟ್ ಮೂಲಕವೇ ಕೋಟಿ ಕೋಟಿ ಸಂಪಾದನೆ ಮಾಡಿದ್ದ ಶೋರನ್ ಸುಖ್ದೋ ಅವರು ದುಷ್ಕರ್ಮಿಗಳು ಗುಂಡಿಗೆ ಬಲಿಯಾಗಿದ್ದಾರೆ. ಬದುಕಿದ್ದಾಗ ಸುಖ್ದೋಗೆ ಚಿನ್ನಾಭರಣ ಧರಿಸೋ ವ್ಯಾಮೋಹವಿತ್ತು. ಯಾವಾಗಲೂ ಕತ್ತಿನಲ್ಲಿ ಚಿನ್ನದ ಹಾರಗಳು, ಕೈ ಬೆರಳುಗಳಲ್ಲಿ ದಪ್ಪದ ಉಂಗುರಗಳನ್ನ ಸುಖ್ದೋ ಧರಿಸುತ್ತಿದ್ದರು.

ಇಷ್ಟೊಂದು ಚಿನ್ನದ ಕ್ರೇಜ್ ಹೊಂದಿದ್ದ ಸುಖ್ದೋ ಅಂತ್ಯಸಂಸ್ಕಾರವನ್ನು 65 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಜೊತೆಗೆ ಮಾಡಲಾಗಿದೆ. ಸುಖ್ದೋ ಶವ ಇಟ್ಟ ಪೆಟ್ಟಿಗೆಗೆ 32 ಲಕ್ಷ ರೂಪಾಯಿ ಖರ್ಚು ಮಾಡಿ ಚಿನ್ನದ ಲೇಪನ ಮಾಡಿಸಲಾಗಿತ್ತು. ಅಷ್ಟೇ ಅಲ್ಲದೇ ಅವರ ಬೂಟ್ ಗಳನ್ನು ಸಹ ಅದರ ಜೊತೆಗೆ ಇಡಲಾಗಿತ್ತು. ಜೊತೆಗೆ ಅವರ ಬಳಿ ಇದ್ದ 65 ರೂಪಾಯಿ ಲಕ್ಷದ ಮೌಲ್ಯದ ಚಿನ್ನಾಭರಣವನ್ನು ಕೂಡ ಮೈಮೇಲೆ ಹಾಕಿ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ವರದಿಯಾಗಿದೆ.

Comments are closed.