ಅಂತರಾಷ್ಟ್ರೀಯ

ಇದು ಉತ್ತರಕೊರಿಯಾ ಮಹಿಳಾ ಸೈನಿಕರ ದಯನೀಯ ಸ್ಥಿತಿ!: ಮೇಲಧಿಕಾರಿಗಳಿಂದ ರೇಪ್‌ ಸಾಮಾನ್ಯ

Pinterest LinkedIn Tumblr


ಪಯೋಂಗ್ಯಾಂಗ್: ಯುದ್ಧೋನ್ಮಾದ ತೋರುತ್ತಿರುವ ಉತ್ತರ ಕೊರಿಯಾದ ಮಹಿಲಾ ಸೈನಿಕರ ದಯಸ್ಥಿತಿ ನೋಡಿದರೆ ಎಂಥಹವರ ಕಣ್ಣಲ್ಲೂ ನೀರು ಬಂದಿತು. ದೇಶ ಭಕ್ತಿಯಿಂದ ಸೈನ್ಯಕ್ಕೆ ಸೇರುವ ಉತ್ತರ ಕೊರಿಯಾದ ಮಹಿಳೆಯರು ಅನುಭವಿಸುವ ಶಿಕ್ಷೆ ನರಕ ಸದೃಶ.

ಉತ್ತರಕೊರಿಯಾದ ಸರ್ವಾಧಿಕಾರಿಯಾಗಿರುವ ಕಿಮ್‌ಜೊಂಗ್‌ ಸಾಲು ಸಾಲು ಪರಮಾಣು ಪರೀಕ್ಷೆ ನಡೆಸಿ ಅಮೆರಿಕ ಸೇರಿದಂತೆ ವಿಶ್ವದ ನಿದ್ದೆ ಕೆಡಿಸಿರುವ ವೇಳೆಯಲ್ಲೇ ಸೈನ್ಯದ ಒಳಗಿನ ನರಕದ ಚಿತ್ರಣ ಲೋಕಮುಖಕ್ಕೆ ಪ್ರಕಟವಾಗಿದೆ.

ಮಹಿಳಾ ಸೈನಿಕರಿಗೆ ಅತ್ಯಂತ ಕಠಿಣ ತರಬೇತಿ ಸಾಮಾನ್ಯವಾದರೆ , ಮೇಲಧಿಕಾರಿಗಳಿಂದ ನಿರಂತರ್‌ ರೇಪ್‌ ಸಾಮಾನ್ಯ. ಕಠಿಣ ತರಬೇತಿಯ ನಡುವೆ ಸೂಕ್ತಪೌಷ್ಟಿಕ ಆಹಾರ ಸಿಗದೆ ಋತುಸ್ನಾನವೇ ಇಲ್ಲದೆ ಪಡಬಾರದ ನೋವು ಅನುಭವಿಸಬೇಕಾಗಿದೆ.

ಎಲ್ಲಾ ನೋವಿನ ಕಥೆಗಳನ್ನು ಮಾಜಿ ಯೋಧೆ ಲಿ ಸೋ ಯೋನ್‌ ಅವರು ಬಹಿಂರಂಗ ಪಡಿಸಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.

’17 ನೇ ವರ್ಷದಲ್ಲಿ ನಾನು ದೇಶಭಕ್ತಿಯಿಂದ ಸೇನೆಗೆ ಸೇರಿದೆ.ಅಲ್ಲಿ ನರಕವನ್ನು ಅನುಭವಿಸಿದೆ’ ಎಂದು ಇದೀಗ 41 ರ ಹರೆಯದಲ್ಲಿರುವ ಲಿಸೋ ಅವರು ಹೇಳಿಕೊಂಡಿದ್ದಾರೆ.

‘ಅತೀವ ಒತ್ತಡ ಪೌಷ್ಠಿಕ ಆಹಾರದ ಕೊರತೆಯಿಂದ ಮಹಿಳಾ ಸೈನಿಕರ ಋತು ಚಕ್ರದ ಮೇಲೆ ಪರಿಣಾಮ ಬೀರುತ್ತದೆ. ಹಲವರು ಮುಟ್ಟಾಗುವುದೆ ನಿಂತು ಹೋಗುತ್ತಿದೆ. ಜೀವನವನ್ನೇ ಬಲಿ ನೀಡುತ್ತಿದ್ದಾರೆ’ ಎಂದು ನೋವು ತೋಡಿಕೊಂಡಿದ್ದಾರೆ.

‘ದುರ್ಗಮ ಪ್ರದೇಶದಲ್ಲಿ ಮಹಿಳಾ ಸೈನಿಕರು ಸ್ನಾನ, ನೀರಿಲ್ಲದೆ ಕಾಲ ಕಳೆಯಬೇಕಾಗಿದೆ. ಮಹಿಳಾ ಸೈನಿಕರ ಟೆಂಟ್‌ಗಳಿಗೆ ಪುರುಷ ಅಧಿಕಾರಿಗಳು ಬಂದು ರೇಪ್‌ ಎಸಗುವುದು ಸಾಮಾನ್ಯ . ಹಲವರು ಈ ರೀತಿ ಶೋಷಣೆಗೊಳಗಾಗಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ.

‘ವಿಶ್ವದ ನಾಲ್ಕನೇ ದೊಡ್ಡ ಸೇನೆಯಲ್ಲಿ ಕೆಲಸ ಮಾಡುವ ಬಗ್ಗೆ ಖುಷಿ ಪಟ್ಟಿದ್ದೆ. ಆದರೆ ಅದನ್ನು ಅನುಭವಿಸಲಾಗಲಿಲ್ಲ’ ಎಂದಿದ್ದಾರೆ.

-ಉದಯವಾಣಿ

Comments are closed.