ಲಂಡನ್, ಮಾ.22-ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ನಿಯಂತ್ರಣದಲ್ಲಿರುವ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಇಲ್ಲಿನ ವೈದ್ಯಕೀಯ ಕಾಲೇಜಿನ 9 ಮಂದಿ ಅಲ್ಲಿಗೆ ತೆರಳಿದ್ದಾರೆ ಎಂದು ಹೇಳಲಾಗಿದೆ. ಕಳೆದ ವಾರ ನಾಲ್ಕು ಮತ್ತು ಐವರ ಎರಡು ತಂಡ ಟರ್ಕಿಯಿಂದ ಸಿರಿಯಾಕ್ಕೆ ತೆರಳಿವೆ. ಇವರು ಸೂಡಾನ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದರು. ಹೀಗೆ ಸಿರಿಯಾಕ್ಕೆ ತೆರಳಿರುವ ವಿದ್ಯಾರ್ಥಿಗಳನ್ನು ವಾಪಸ್ ಬರುವಂತೆ ಕೇಳಿಕೊಳ್ಳುತ್ತಿರುವ ಕುಟುಂಬಸ್ಥರನ್ನು ತಾನು ಭೇಟಿ ಮಾಡಿರುವುದಾಗಿ ಟರ್ಕಿಯ
ವಿರೋಧಪಕ್ಷದ ನಾಯಕ ಮೆಹ್ಮೆತ್ ಅಲಿ ಎಡಿಬೊಗ್ಗು ತಿಳಿಸಿದ್ದಾರೆ ಎಂದು ಅಬ್ಸರ್ವರ್ ಪತ್ರಿಕೆ ವರದಿ ಮಾಡಿದೆ.
ಇದುವರೆಗೆ ಹಲವು ವಿದೇಶಿಯರನ್ನು ಶಿರಚ್ಛೇದ ಮಾಡಿರುವ ವಿಡಿಯೋಗಲ್ಲಲಿ ಕಾಣಿಸಿಕೊಂಡಿರುವ ಜಿಹಾದಿ ಜಾನ್ ಎಂದು ಗುರುತಿಸಲಾಗಿರುವ ವ್ಯಕ್ತಿಯೂ ಸೇರಿದಂತೆ ಬ್ರಿಟನ್ನಿನ ಸುಮಾರು 600ಕ್ಕೂ ಹೆಚ್ಚು ಜನ ಬ್ರಿಟಿಷ್ ಪ್ರಜೆಗಳು ಐಎಸ್‌ಐಎಸ್ ಉಗ್ರ ಸಂಘಟನೆಗೆ ಸೇರ್ಪಡೆಯಾಗಲು ಸಿರಿಯಾಕ್ಕೆ ತೆರಳಿದ್ದಾರೆ ಎಂದು ಅಬ್ಸರ್ವರ್ ಹೇಳಿದೆ.