ಆರೋಗ್ಯ

ಉಡುಪಿಯಲ್ಲಿಂದು 4 ಕೊರೋನಾ ಪಾಸಿಟಿವ್: ಸೋಂಕಿತ ಗರ್ಭಿಣಿಗೆ ಹೆರಿಗೆ- ತಾಯಿ, ಮಗು ಆರೋಗ್ಯ: ಡಿಸಿ ಜಿ. ಜಗದೀಶ್

Pinterest LinkedIn Tumblr

ಉಡುಪಿ: ಇತ್ತೀಚೆಗೆ ಮುಂಬೈನಿಂದ ಮೂವರು ಹಾಗೂ ಈ ಹಿಂದೆ ಪಾಸಿಟಿವ್ ಇದ್ದ ಒಬ್ಬರ ಪ್ರಾಥಮಿಕ ಸಂಪರ್ಕದಲ್ಲಿದ್ದ ಒಬ್ಬರು ಸೇರಿದಂತೆ ಬುಧವಾರದಂದು ನಾಲ್ವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1039ಕ್ಕೆ ಏರಿಕೆಯಾಗಿದೆ.

ಇಂದು ಜಿಲ್ಲೆಯಲ್ಲಿ 87 ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 904 ಮಂದಿ ಗುಣಮುಖರಾಗಿ ಬಿಡುಗಡೆಯಾದಂತಾಗಿದೆ. ಜಿಲ್ಲೆಯಲ್ಲಿ ಈವರೆಗೆ 134 ಕೊರೋನಾ ಸಕ್ರೀಯ ಪ್ರಕರಣಗಳಿದೆ ಎಂದು ಉಡುಪಿ ಡಿಸಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ.

ಕೊರೋನಾ ಪಾಸಿಟಿವ್ ಇದ್ದ ಗರ್ಬಿಣಿಗೆ ಹೇರಿಗೆ….
ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಆಗಿದ್ದ ಗರ್ಭಿಣಿಗೆ ಟಿ.ಎಂ.ಎ. ಪೈ ಆಸ್ಪತ್ರೆಯಲ್ಲಿ ಇಂದು ಹೆರಿಗೆ ಆಗಿದ್ದು ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ. ಮಗುವಿಗೆ ಯಾವುದೇ ಪಾಸಿಟಿವ್ ಬಾರದಂತೆ ಆಸ್ಪತ್ರೆ ವೈದ್ಯರು ಎಚ್ಚರಿಕೆ ವಹಿಸಿದ್ದಾರೆ. ಇಂತಹ ಗಂಭೀರ ಪ್ರಕರಣವನ್ನು ನಿಬಾಯಿಸಿದ ಆಸ್ಪತ್ರೆಯ ವೈದ್ಯರುಗಳಿಗೆ ಜಿಲ್ಲಾಡಳಿತದಿಂದ ಅಭಿನಂದಿಸುವೆ. ಮುಂದಿನ ದಿನದಲ್ಲಿ ಮಹಿಳೆ ಡಿಶ್ಚಾರ್ಜ್ ಸಂದರ್ಭವೂ ಮಗುವಿಗೂ ಕೊರೋನಾ ಪರೀಕ್ಷೆ ಮಾಡಲಾಗುತ್ತದೆ ಎಂದು ಡಿಸಿ ಮಾಹಿತಿ ನೀಡಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.