ಆರೋಗ್ಯ

ಮನೆಯಲ್ಲಿ ಉಪಯೋಗಿಸುವ ವಿಷಕಾರಿ ಪದಾರ್ಥಗಳು

Pinterest LinkedIn Tumblr

ಸಾಮಾನ್ಯಾವಾಗಿ ನಾವು ಮನೆಯಲ್ಲಿ ಬಳಸುವ ಹಲವು ವಸ್ತುಗಳಿಂದ ನಮಗೆ ಹಾನಿಯುಂಟಾಗಬಹುದು ಎಂಬುದರ ಅರಿವು ನಮಗೆ ಬರುವುದಿಲ್ಲ, ಅದರೆ ಇದು ನಿಜ ಕೆಲವು ವಸ್ತುಗಳು ಹಲವು ವಿಷಕಾರಿ ಅಂಶಗಳನ್ನು ಒಳಗೊಂಡುರುತ್ತದೆ . ಅದು ಯಾವುದು ತಿಳಿಯಿರಿ

ನುಶಿಗುಳುಗೆ(Moth balls)
ನುಶಿ ಗುಳುಗೆ (mothballs-ಕೆಟ್ಟ ವಾಸನೆ ತಡೆಯಲು ಬಳಸುವ ಗುಳುಗೆಗಳು) ರಾಸಾಯನಿಕಗಳು ನಿಮ್ಮ ಬಟ್ಟೆಗಳನ್ನು ಚಿಟ್ಟೆತಗಳು, ಜಿರಳೆ, ತಿಗಣೆಗಳಿಂದ ರಕ್ಷಿಸುತ್ತದೆ. ಆದರೆ ಅದರ ವಾಸನೆ ಮಕ್ಕಳಿಗೆ ಹಾನಿಕಾರಕ ಎಂದು ನಿಮಗೆ ತಿಳಿದಿದಿಯೇ ? ನೀವು ಅತಿಯಾಗೆ ನುಸಿ ಗುಳುಗೆಗೆ ನಿಮ್ಮನ್ನು ಒಡ್ಡಿಕೊಂಡರೆ ತಲೆನೋವು, ವಾಂತಿ, ವಾಕರಿಕೆ ಹೇಗೆ ಅನೇಕ ಸಮಸ್ಯೆಗಳಿಗೆ ಒಳಗಾಗುತ್ತೀರ. ಆದ್ದರಿಂದ ನೀವು ಚಿಮಿಕಲ್ಸ್ ನಿಂದ ತಯಾರಿಸದ ನುಸಿ ಜುಳುಜುಗಳನ್ನು ಬಿಟ್ಟು ನೈಸರ್ಗಿಕವಾಗಿ ತಯಾರಿಸುವ ಸುಘಂದ ದೃವ್ಯವನ್ನು ಉಪಯೋಗಿಸಬಹುದು.

ಡ್ರೈಯರ್ ಗಳು
ವಾಷಿಂಗ್ ಮೆಷಿನ್ನಲ್ಲಿ ಬಟ್ಟೆಯನ್ನು ಒಣಗಿಸುವಾಗ ಪ್ರತಿಬಾರಿಯೂ ಲಿಂಟ್ ಅನ್ನು ಸ್ವಚ್ಛಗೊಳಿಸಬೇಕು. ಇಲ್ಲವಾದರೆ ಲಿಂಟ್ ಅಥವಾ ಕಸ ದಲ್ಲಿರುವ ರಾಸಾಯನಿಕವು ಬೆಂಕಿಗೆ ಕಾರಣವಾಗಬಹುದು. ಲಿಂಟ್ ರಾಸಾಯನಿಕದಿನ ಶಾಖ ಉಂಟಾಗಿ ಅದರಿಂದ ಬೆಂಕಿ ಅನಾಹುತ ಉಂಟಾಗಬಹುದು. ನೀವು ಪ್ರತಿಸಲಿ ಬಟ್ಟೆಯನ್ನು ಡ್ರೈ ಯರ್ ಗೆ ಹಾಕುವಾಗ ಎಚ್ಚರಿಕೆಯಿಂದಿರಬೇಕು. ಮತ್ತು ಆಗಾಗ್ಗೆ ಲಿಂಟ್ ಅನ್ನು ತೆಗೆದು ತೊಳೆಯಬೇಕು.

ಮನೆ ತೊಳೆಯುವ ವಸ್ತುಗಳು
ಮನೆತೊಳೆಯಲು ನಾವು ಹಲವಾರು ಬ್ರಾಂಡೆಡ್ ವಸ್ತುಗಳನ್ನು ಖರೀದಿಸುವುದು ಸಾಮಾನ್ಯ ಆದರೆ ಆ ವಸ್ತುಗಳಲ್ಲಿರುವ ಕೆಮಿಕಲ್ಸ್ ನಿಮ್ಮ ಮಕ್ಕಳಿಗೆ ಹಾನಿಕರ ಎಂದು ನಿಮಗೆ ತಿಳಿದಿದಿಯೇ ? ಕ್ಲೀನ್ ಮಾಡುವ ಉದ್ದೇಶದಿಂದ ಯಾವುದೊ ಕೆಮಿಕಲ್ಸ್ ಗಳನ್ನ ಹಾಕಿ ಮಿಕ್ಸ್ ಮಾಡಿ ರಾಸಾಯನಿಕವನ್ನು ತಯಾರು ಮಾಡಿರುತ್ತಾರೆ, ಆದ್ದರಿಂದ ನೀವು ಕೆಮಿಕಲ್ಸ್ ನಿಂದ ಮಾಡಲ್ಪಟ್ಟ ರಾಸಾಯನಿಕ ಹೋಂ ಕ್ಲೀನರ್ ಗಳನ್ನೂ ಬಳಸದೆ ನೈಸರ್ಗಿಕವಾಗಿ ತಯಾರಾಗಿರುವ ಹೋಂ ಕ್ಲೀನರ್ ಗಳನ್ನೂ ಬಳಸುವುದು ಉತ್ತಮ.

ಗೋಡೆಯ ಹಳೆ ಪೇಯಿಂಟ್
ನಿಮ್ಮ ಮನೆ ಹಳೆಯದಾಗಿದ್ದಲ್ಲಿ ನೀವು ಲೆಡ್ ಅಥವಾ ಸೀಸದಿಂದ ಮಾಡಿದ ಪೈಂಟ್ ಅನ್ನು ಹೊಡೆಸಿರುತ್ತೀರಿ. ಆ ಪೈಂಟ್ ಹಳೆಯದಾಗಿ ಆಗಾಗ್ಗೆ ಉದುರುತ್ತದೆ. ಆ ಪೈಂಟ್ನಲ್ಲಿರುವ ಲೆಡ್ ಅಂಶ ಅರೋಗ್ಯಕ್ಕೆ ಹಾನಿಕಾರಕ.. ಅದರಲ್ಲೂ ಗರ್ಭಿಣಿ ಮತ್ತು ಚಿಕ್ಕ ಮಕ್ಕಳಿಗೆ ಅನಾ ರೋಗ್ಯವನ್ನುಂಟು ಮಾಡುತ್ತದೆ. ಲೆಡ್ ಪೈಂಟ್ ಅನ್ನು ಹೋಗಲಾಡಿಸಿ ನೈಸರ್ಗಿಕವಾಗಿ ತಯಾರಾದ ಬಣ್ಣಗಳನ್ನು ಸಿಂಪಡಿಸಿ ನಿಮ್ಮ ಮನೆಯ ಗೋಡೆಯನ್ನು ಲೆಡ್ ಮುಕ್ತ ಗೊಳಿಸಬಹುದು.

Comments are closed.