ಆರೋಗ್ಯ

ದೇಹದಲ್ಲಿನ ಅನಾರೋಗ್ಯದ ಲಕ್ಷಣ ತಿಳಿದುಕೊಳ್ಳಲು ನಾಲಿಗೆಯ ಬಣ್ಣ ಸಹಕಾರಿ

Pinterest LinkedIn Tumblr

ಅಂಗೈ ರೇಖೆ ನೋಡಿ ಇಲ್ಲ, ಮುಖ ಲಕ್ಷಣ ಆಧರಿಸಿ ಭವಿಷ್ಯ ಹೇಳೋದು ಎಲ್ಲರಿಗೂ ಗೊತ್ತಿರೋ ವಿಚಾರ.. ಆದ್ರೆ, ನಿಮ್ಮ ನಾಲಿಗೆ ಬಣ್ಣದ ಆಧಾರ ಮೇಲೆ ಆರೋಗ್ಯದ ಕುರಿತು ನೀವು ತಿಳಿದು ಕೊಳ್ಳಲೇಬೇಕು!

1.ನಾಲಿಗೆಯನ್ನು ನೋಡಿ ನಿಮ್ಮ ಆರೋಗ್ಯದ ಬಗ್ಗೆ ನೀವೇ ತಿಳಿದುಕೊಳ್ಳಬಹುದು. ನಾಲಿಗೆಯ ಮೇಲ್ಮೈ ನೋಡಿ ಚಿಕ್ಕ ಪುಟ್ಟ ಬದಲಾವಣೆ ಗಮನಿಸಬಹುದು. ಆದ್ರೆ, ಕೆಲ ಸಂದರ್ಭದಲ್ಲಿ ನಿಮ್ಮ ನಾಲಿಗೆ ಮೇಲಿನ ಬದಲಾವಣೆ ಕಂಡು ಭಯ ಬೀಳುವ ಅವಶ್ಯಕತೆ ಇಲ್ಲ. ಯಾಕಂದ್ರೆ, ನೀವು ಅನಾರೋಗ್ಯದ ವೇಳೆ ತೆಗೆದುಕೊಳ್ಳುವ ಮಾತ್ರೆ, ಸಿರಪ್ ಸೇವಿಸಿದಾಗ ತಾತ್ಕಾಲಿಕವಾಗಿ ನಾಲಿಗೆ ಕಲರ್​ ಚೇಂಜ್​ ಆಗೋ ಸಾಧ್ಯತೆ ಇರುತ್ತೆ. ಆಗ ನೀವು ಕೂಡಲೇ ಬ್ರಶ್​​ ಮಾಡಿ ಅಥವಾ ನಾಲಿಗೆಯನ್ನೊಮ್ಮೆ ಕೆರೆದು ನೋಡಿ ಗೊತ್ತಾಗುತ್ತೆ. ಅನಾರೋಗ್ಯದ ತೊಂದರೆಯೋ ಮೆಡಿಷನ್​​ನ ತೊಂದರೆಯೋ ಎಂದು.

2.ಲೈಟ್​ ಪಿಂಕ್​
ಆರೋಗ್ಯಯುತ ನಾಲಿಗೆ ಲೈಟ್​ ಪಿಂಕ್​ ಬಣ್ಣದಿಂದ ಕೂಡಿರುತ್ತೆ. ನಿಮ್ಮ ನಾಲಿಗೆ ರಚನೆಯು ಸ್ವಲ್ಪ ಅಸ್ಪಷ್ಟವಾಗಿರಬೇಕು. ನಾಲಿಗೆ ಸುತ್ತ ತಿಳಿಯಾದ ಬಿಳಿ ಲೇಪನವಿದ್ರೆ ನಿಮ್ಮ ಆರೋಗ್ಯ ನಾರ್ಮಲ್​ ಆಗಿದೆ ಎಂದರ್ಥ.

3. ಬಿಳಿ​ ಟಂಗ್​
ಒಂದುವೇಳೆ ನಿಮ್ಮ ನಾಲಗೆ ಬಣ್ಣ ಬಿಳಿಯಾಗಿದ್ರೆ ನಿರ್ಜಲೀಕರಣ ಇಲ್ಲವೆ, ಸ್ವಚ್ಛವಾಗಿಲ್ಲ ಎಂದರ್ಥ. ನಾಲಿಗೆ ಮೇಲೆ cottage cheese ಜಾಸ್ತಿಯಾಗಿದ್ರೆ ಧೂಮಪಾನದಿಂದ ಆಗುವ ಪರಿಣಾಮ. ಇಲ್ಲವೇ ಜ್ವರ ಬಂದಿರುವ ಸೂಚನೆ ನೀಡಲಿದೆ. ಹೀಗಾಗಿ ಸಮಸ್ಯೆ ಕುರಿತು ವೈದ್ಯರನ್ನು ಸಂಪರ್ಕಿಸಿ.

4. ಬಾಡಿದಂತಿರುವ ನಾಲಿಗೆ
ಬಾಡಿದಂತಿರುವ ನಾಲಿಗೆ, ಪೌಷ್ಟಿಕಾಂಶ ಕೊರತೆ ಸೂಚಕ. ಅಗತ್ಯವಾದ ಆಹಾರ ಬದಲಾವಣೆಗಳನ್ನು ಮಾಡುವ ಮೂಲಕ ಈ ಸಮಸ್ಯೆಗೆ ಸುಲಭವಾಗಿ ಕಾಳಜಿ ವಹಿಸಬಹುದು.

5. ಹಳದಿ
ಹಳದಿ ನಾಲಿಗೆ ಇಲ್ಲವೇ ನಾಲಿಗೆ ಸುತ್ತ ಹಳದಿ ಬಣ್ಣ ಆವರಿಸಿದ್ದರೆ, ಜೀರ್ಣಾಂಗ ವ್ಯವಸ್ಥೆ, ಲೀವರ್​ ಅಥವಾ ಹೊಟ್ಟೆ ಸಮಸ್ಯೆಗಳನ್ನು ಹೊಂದಿರುವ ಬಗ್ಗೆ ಸೂಚಿಸುತ್ತೆ.

6.ಕಂದು ನಾಲಿಗೆ
ನೀವು ಕಾಫಿ ಪ್ರಿಯರಾಗಿದ್ರೆ ನಿಮ್ಮ ನಾಲಿಗೆ ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದ್ರೂ ಚಿಂತಿಸುವ ಅಗತ್ಯವಿಲ್ಲ. ವಾಸ್ತವದಲ್ಲಿ ಧೂಮಪಾನ ಸಹ ನಾಲಿಗೆ ಮೇಲೆ ಕಂದು ಛಾಯೆ ಬರಲು ಕಾರಣವಾಗಬಹುದು. ಅಲ್ಲದೇ ಬಹಳ ದಿನಗಳಿಂದ ಧೂಮ ಪಾನಿಗಳಾದವರು ಶಾಶ್ವತವಾಗಿ ತಮ್ಮ ನಾಲಿಗೆಗೆ ಮೇಲೆ ಕಂದು ಲೇಪನ ಹೊಂದಿರುತ್ತಾರೆ. ಇದರಿಂದ ಅವರು ವೈದ್ಯರನ್ನು ಸಂಪರ್ಕಿಸಬೇಕು.

7. ಕಪ್ಪು ನಾಲಿಗೆ
೩.ಒಂದು ವೇಳೆ ನೀವು ಸರಣಿ ಧೂಮಪಾನಿಯಾಗಿದ್ರೆ ಈ ವಿಷಯವನ್ನು ಎಚ್ಚರಿಕೆಯಿಂದ ಓದಿ. ನಿಮ್ಮ ನಾಲಿಗೆ ಮೇಲೆ ಬ್ಯಾಕ್ಟೀರಿಯಾಗಳು ಬೆಳೆದಿದ್ರೆ, ಅದು ಕಪ್ಪಾಗಬುಹುದು ಇಲ್ಲವೆ ಅದರ ಮೇಲೆ ಕೂದಲುಗಳು ಬೆಳೆಯಬಹುದು ಎಚ್ಚರ.

8. ನೀಲಿ:ನೀಲಿ ಮತ್ತು ನೆರಳೆ ಬಣ್ಣದ ನಾಲಿಗೆ, ಹೃದಯ ಸಂಬಂಧಿ ತೊಂದರೆ ಕುರಿತು ಸೂಚಿಸುತ್ತೆ. ನಿಮ್ಮ ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡುವುದಿಲ್ಲ ಅಥವಾ ನಿಮ್ಮ ರಕ್ತದಲ್ಲಿ ಆಮ್ಲಜನಕದ ಕೊರತೆ ಇರುತ್ತೆ. ಹೀಗಾಗಿ ನಿಮ್ಮ ನಾಲಿಗೆ ಈ ಎರಡು ಬಣ್ಣಗಳಿಗೆ ತಿರುಗಿದ್ರೆ ವೈದ್ಯರನ್ನು ಸಂಪರ್ಕಿಸಿ.

Comments are closed.