ಆರೋಗ್ಯ

ಪುಟ್ಟ ಮಗುವನ್ನು ಏಕೆ ಈ ರೀತಿ ಅಲ್ಲಾಡಿಸಬಾರದು, ಗೋತ್ತೆ…?

Pinterest LinkedIn Tumblr
ವಯಸ್ಕರರನ್ನ ಅಥವಾ ಕನಿಷ್ಠ ಪಕ್ಷ ಹತ್ತು ವರ್ಷದ ಮಗುವನ್ನ ಅಲ್ಲಾಡಿಸುವುದಕ್ಕೂ, ಮಗುವನ್ನ ಅಲ್ಲಾಡಿಸುವುದಕ್ಕೂ, ಬಹಳ ವ್ಯತ್ಯಾಸವಿದೆ. ಏಕೆಂದರೆ ಪುಟ್ಟ ಮಗುವಿಗೆ ದೊಡ್ಡ, ಭಾರವಾದ ತಲೆ, ಆದರೆ ದುರ್ಬಲ ಕತ್ತಿನ ಸ್ನಾಯುಗಳು ಇರುತ್ತವೆ. ಅದರ ಮೆದುಳು ಇನ್ನು ಬೆಳವಣಿಗೆ ಹೊಂದುತ್ತಿರುತ್ತದೆ. ಮೆದುಳು ಇನ್ನು ತನ್ನ ಹೊರ ಪದರವನ್ನ ಸಂಪೂರ್ಣವಾಗಿ ಬೆಳೆಸಿಕೊಂಡಿರುವುದಿಲ್ಲ. ಹೀಗಾಗಿ ಮೆದುಳು ಬಲು ಬೇಗನೆ ಗಾಯ ಹೊಂದಬಹುದು.
ಮಗುವಿನ ಬುರುಡೆ ಮತ್ತು ಮೆದುಳಿನ ನಡುವೆ ತುಂಬಾ ಅಂತರ ಇರುತ್ತದೆ. ಹೀಗಾಗಿ ಮಗುವನ್ನ ಅಲ್ಲಾಡಿಸಿದಾಗ, ಅದರ ಮೆದುಳು ಹೆಚ್ಚು ಅಂತರದವರೆಗೆ ವಾಲಾಡಬಹುದು ಮತ್ತು ಬುರುಡೆಗೆ ತಾಗುವ ಮುನ್ನ ಹೆಚ್ಚು ವೇಗವನ್ನು ಗಳಿಸಿಕೊಳ್ಳಬಹುದು. ಮಗುವನ್ನ ಅಲ್ಲಾಡಿಸುವುದು ವಿಪ್ಲ್ಯಾಷ್ ಪರಿಣಾಮವನ್ನ ಉಂಟು ಮಾಡಬಹುದು. ಮಗುವಿನ ತಲೆ ಅಲ್ಲಾಡಿದಂತೆ, ಅದರ ಮೆದುಳು ಬುರುಡೆಯ ಒಳಭಾಗಕ್ಕೆ ರಭಸವಾಗಿ ಬಡಿಯುತ್ತದೆ. ಆಗ ಮೆದುಳಲ್ಲಿ ರಕ್ತಸ್ರಾವ ಉಂಟಾಗುತ್ತದೆ. ಇದರಿಂದ ಅಂಗಾಂಶಗಳಿಗೆ ಹಾನಿ ಆಗುತ್ತದೆ. ಇದರ ಪರಿಣಾಮವಾಗಿ ಮಗುವಿಗೆ ಶಾಶ್ವತವಾಗಿ ಮೆದುಳಿನ ತೊಂದರೆ ಉಂಟಾಗಬಹುದು.

 

Comments are closed.