ಆರೋಗ್ಯ

ನಾಲಗೆಯಲ್ಲಿ ಬಿಸಿ ಆಹಾರ ಸೇವನೆಯಿಂದ ಬೊಕ್ಕೆ ಬಂದಿದೀಯಾ…? ಇಲ್ಲಿದೆ ಟಿಪ್ಸ್

Pinterest LinkedIn Tumblr

ತುಂಬಾ ಬಿಸಿಯಾಗಿರುವ ಆಹಾರ ಸೇವನೆನಯಿಂದಾಗಿ ನಾಲಗೆ ಸುಡುತ್ತದೆ. ಇದರಿಂದ ನಾಲಗೆ ಮೇಲೆ ಬೊಕ್ಕೆಗಳು ಮೂಡುತ್ತದೆ.. ಇದು ಗುಣವಾಗಲು ಕೆಲವು ದಿನಗಳೇ ಬೇಕಾಗುವುದು. ಕೆಲವೊಮ್ಮೆ ಆಹಾರ ಜಗಿಯುವಾಗ ಅಥವಾ ಮಾತನಾಡುವಾಗ ಕೂಡ ನಾಲಗೆ ಕಚ್ಚಿ ಹೋಗುವುದು ಇದೆ. ನಾಲಗೆಯಲ್ಲಿ ಬೊಕ್ಕೆಗಳು ಮೂಡಿದರೆ ಅದರಿಂದ ಏನೇ ತಿಂದರೂ ರುಚಿ ಸಿಗದು. ಈ ಸಮಸ್ಯೆ ಒಂದು ವಾರ ಕಾಲ ಇರುವುದು. ಆದರೆ ಮನೆಮದ್ದು ಬಳಸಿಕೊಂಡು ಇದನ್ನು ಬೇಗನೆ ನಿವಾರಿಸಬಹುದು.

ಉಪ್ಪು : ನಾಲಗೆಯಲ್ಲಿ ಮೂಡಿರುವ ಬೊಕ್ಕೆಗಳಿಗೆ ಉಪ್ಪು ತುಂಬಾ ಪರಿಣಾಮಕಾರಿ ಮನೆ ಔಷಧಿ. ಇದು ಉರಿಯೂತ ಮತ್ತು ನೋವು ನಿವಾರಣೆ ಮಾಡುವುದು. ಇದು ಬ್ಯಾಕ್ಟೀರಿಯಾ ಕೊಲ್ಲುವುದು ಮತ್ತು ಸೋಂಕು ತಡೆಯುವುದು. ಒಂದು ಚಮಚ ಉಪ್ಪನ್ನು ಉಗುರು ಬೆಚ್ಚಗಿನ ನೀರಿಗೆ ಹಾಕಿ ಕಲಸಿ. ಇದನ್ನು ಬಾಯಿಗೆ ಹಾಕಿಕೊಂಡು ಸುಮಾರು 30 ಸೆಕೆಂಡು ಕಾಲ ಹಾಗೆ ಬಿಡಿ. ಬಳಿಕ ಉಗುಳಿ. ದಿನದಲ್ಲಿ ಐದು ಸಲ ಹೀಗೆ ಮಾಡಿದರೆ ಫಲಿತಾಂಶ ಸಿಗುವುದು.

ಅರಶಿನ : ನಾಲಗೆಯ ಬೊಕ್ಕೆಯಿಂದ ಉಂಟಾಗಿರುವಂತಹ ನೋವು ಹಾಗೂ ಉರಿಯೂತವನ್ನು ಅರಶಿನದಲ್ಲಿ ಇರುವಂತಹ ನಂಜು ನಿರೋಧಕ ಗುಣವು ನಿವಾರಣೆ ಮಾಡುವುದು. ಅರ್ಧ ಚಮಚ ಅರಶಿನ ಹುಡಿಗೆ ಒಂದು ಚಮಚ ಜೇನುತುಪ್ಪ ಹಾಕಿ ಕಲಸಿಕೊಂಡು ಅದನ್ನು ಬೊಕ್ಕೆಗಳಿಗೆ ಹಚ್ಚಿಕೊಳ್ಳಿ. ಮೂರು ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

Comments are closed.