ಆರೋಗ್ಯ

ಸ್ನಾನದ ನೀರಿಗೆ ಈ ವಸ್ತುಗಳನ್ನ ಸೇರಿಸಿ ಸ್ನಾನ ಮಾಡಿದರೆ ಈ ದೋಷ ನಿವಾರಣೆಗೆ ಸಾಧ್ಯ.

Pinterest LinkedIn Tumblr

ಜಾತಕದಲ್ಲಿ ದೋಷ, ಗ್ರಹ ದೋಷ ಇರಬಹುದು. ಅಥವಾ ತಿಳಿಯದೇ ಮಾಡಿದ ತಪ್ಪಿನಿಂದಾಗಿ ದುರಾದೃಷ್ಟ ಎದುರಾಗಬಹುದು. ಕೆಲವೊಮ್ಮೆ ಎಷ್ಟೇ ಪ್ರಯತ್ನಪಟ್ಟರೂ ಯಶಸ್ಸು ಸಿಗುವುದಿಲ್ಲ. ಜ್ಯೋತಿಷ್ಯದಲ್ಲಿ ಹೇಳಿದ ಕೆಲ ಉಪಾಯಗಳನ್ನು ಅನುಸರಿಸಿದರೆ ನಿಮಗೆ ಅದೃಷ್ಟ ಒಲಿದು ಬರುತ್ತದೆ. ಅದಕ್ಕಾಗಿ ಸ್ನಾನದ ನೀರಿಗೆ ಕೆಲವೊಂದು ವಸ್ತುಗಳನ್ನ ಸೇರಿಸಿ ಸ್ನಾನ ಮಾಡಿ ದುರಾದೃಷ್ಟ ದೂರವಾಗಿಸಿ.

ನೀರಿಗೆ ಏಲಕ್ಕಿ, ಕೇಸರಿ ಬೆರೆಸಿ ಸ್ನಾನ ಮಾಡಿದರೇ ಕೆಟ್ಟ ದಿನಗಳು ದೂರವಾಗುತ್ತದೆ. ನಿಧಾನವಾಗಿ ಜೀವನದಲ್ಲಿ ಪ್ರಗತಿ ಕಾಣಿಸಲು ಶುರುವಾಗುತ್ತದೆ. ನೀರಿಗೆ ಹಾಲು ಹಾಕಿ ಸ್ನಾನ ಮಾಡಿದ್ದಲ್ಲಿ ಮನುಷ್ಯನ ಆಯಸ್ಸು ವೃದಿಯಾಗುತ್ತದೆ. ಜೊತೆಗೆ ಶಾರೀರಿಕ ಬಲ ಹೆಚ್ಚುತ್ತದೆ.

ನೀರಿಗೆ ಎಳ್ಳು ಬೆರೆಸಿ ಸ್ನಾನ ಮಾಡುವುದರಿಂದ ಮಹಾಲಕ್ಷ್ಮಿ ಕೃಪೆ ಪ್ರಾಪ್ತಿಯಾಗುತ್ತದೆ. ಮನೆಯಲ್ಲಿ ಧನ, ಸಮೃದ್ಧಿ ಸದಾ ನೆಲೆಸಿರುತ್ತದೆ. ನೀರಿಗೆ ತುಪ್ಪ ಹಾಕಿ ಸ್ನಾನ ಮಾಡುವುದರಿಂದ ಆರೋಗ್ಯಕರ ಹಾಗೂ ಸುಂದರ ಚರ್ಮ ಪ್ರಾಪ್ತಿಯಾಗುತ್ತದೆ. ನೀರಿಗೆ ಚಂದನ, ಶ್ರೀಗಂಧವನ್ನು ಸೇರಿಸಿ ಸ್ನಾನ ಮಾಡುವುದರಿಂದ ದುಃಖ,ಕಷ್ಟ ದೂರವಾಗುತ್ತದೆ.

Comments are closed.