ಆರೋಗ್ಯ

ನೈಸರ್ಗೀಕವಾಗಿ ದೇಹದ ತೂಕ ಇಳಿಸುವ ವಿಧಾನ..!

Pinterest LinkedIn Tumblr

ನೀರು ಭೂಮಿಯಲ್ಲಿ ಅತ್ಯಂತ ಹೇರಳವಾಗಿ ದೊರೆಯುವ ಸಂಪನ್ಮೂಲ, ಆದರೆ ಕೇವಲ ನೀರನ್ನ ಸರಿಯಾದ ರೀತಿಯಲ್ಲಿ ಕುಡಿಯುವುದರಿಂದ ನಿಮ್ಮ ತೂಕ ಇಳಿಸಲು ಸಾಧ್ಯ ಎಂದು ನಿಮಗೆ ಗೊತ್ತ??

ಹೌದು ನೀರನ್ನು ಕುಡಿಯುವ ಕೆಲವು ಉಪಾಯಗಳನ್ನು ಪಾಲಿಸದರೆ ಸಾಕು, ನೀವು ಹತ್ತೇ ದಿನಗಳಲ್ಲಿ ತೂಕ ಕಳೆದುಕೊಳ್ಳಲು ಸಾಧ್ಯವಿದೆ.

ಹೇಗೆ ಅಂತೀರಾ ….
ಬಹಳಷ್ಟು ಸಲ ನಮಗೆ ಊಟದ ಸಮಯ ಬಿಟ್ಟು ಬೇರೆ ಸಮಯದಲ್ಲಿ ಹಸಿವಾಗುವುದು ಬಾಯಾರಿಕೆಯಿಂದ, ನಾವು ನೀರು ಕುಡಿಯುವುದನ್ನು ಬಿಟ್ಟು ಕುರುಕಲು ತಿಂಡಿ ತಿನ್ನುತ್ತಾ ಬಂದ್ದಿದರಿಂದನೇ ತೂಕ ಹೆಚ್ಚಾಗಿರುವುದು. ಹೆಚ್ಚು ನೀರು ಕುಡಿಯುವುದರಿಂದ ನಮ್ಮ ದೇಹ ಇನ್ನು ಹೆಚ್ಚು ಕ್ಯಾಲೊರಿಗಳನ್ನು ಖರ್ಚು ಮಾಡುತ್ತದೆ, ಅದಕ್ಕಾಗಿಯೇ ಇನ್ಮೇಲಿಂದ ಹಸಿವಾದಾಗ ನೀರು ಕುಡಿಯಿರಿ, ಕ್ರಮೇಣ ಇದು ಅಭ್ಯಾಸವಾದಾಗ ತೂಕ ಖಂಡಿತ ಇಳಿಯುವುದು..

10 ದಿನಗಳಲ್ಲಿ ತೂಕ ಇಳಿಸಿಕೊಳ್ಲಲು 5 ಹಂತಗಳು:
೧. ಬೆಳಿಗ್ಗೆ ಎದ್ದ ತಕ್ಷಣ 250 ಎಂಎಲ್, ತಣ್ಣಗಿನ ನೀರು. ತಣ್ಣಗಿನ ನೀರು ಅಂದರೆ ಐಸ್ ನೀರಲ್ಲ, ಸ್ವಲ್ಪ ತಣ್ಣಗಿನ ನೀರು ಅಂತ ಅರ್ಥ.
೨. ತಿಂಡಿ ತಿನ್ನುವ 1 ಘಂಟೆಗೆ ಮೊದಲು 250-5೦೦ ಎಂಎಲ್ ನೀರು ಕುಡಿಯಿರಿ.
೩. ಪ್ರತಿಸಲ ಕಾಫಿ ಅಥವಾ ಟೀ ಸೇವಿಸಿದಾಗ 2೦೦-25೦ ಎಂಎಲ್ ನೀರು ಕುಡಿಯಿರಿ.
೪. ಪ್ರತಿ ಸರ್ತಿ ಊಟಕ್ಕೆ 2೦ ನಿಮಿಷದ ಮೊದಲು 25೦-5೦೦ ಎಂಎಲ್ ನೀರು ಕುಡಿಯಿರಿ.
೫. ಮಲಗುವ 2 ಘಂಟೆಗೆ ಮುನ್ನ 3೦೦-6೦೦ ಎಂಎಲ್ ನೀರು ಕುಡಿಯಿರಿ.

ಮೊದಲ ಸ್ವಲ್ಪ ದಿನ ನೀವು ಮೂತ್ರ ವಿಸರ್ಜನೆಗೆ ಶೌಚಾಲಯಕ್ಕೆ ಹೋಗುವುದು ಜಾಸ್ತಿ ಆಗಬಹುದು, ಕ್ರಮೇಣ ನಿಮ್ಮ ದೇಹ ಇದಕ್ಕೆ ಒಗ್ಗಿಕೊಳ್ಳುತ್ತದೆ.

ಇದನ್ನು ಖಂಡಿತ ಪ್ರಯತ್ನ ಮಾಡಿ… ತೂಕ ಇಳಿಸಿಕೊಳ್ಳಲು ಸಾವಿರಾರು ರೂಪಾಯಿ ಕೊಟ್ಟು ತೊಗೊಳ್ಳೋ ಕೆಲವು ಮಾತ್ರೆಗಳು ಹಾಗು ಇನ್ನಿತರ ಪಾನೀಯಗಳಿಗಿಂತ ಉಚಿತವಾಗಿ ನೀಡಿರುವ ಸಲಹೆ ಸಾವಿರ ಪಾಲು ಉತ್ತಮ.

Comments are closed.