ಆರೋಗ್ಯ

ಕಿಡ್ನಿಯ ಸಮಸ್ಯೆ (ಸಿಕೆಡಿ) ಮತ್ತು ಬೊಜ್ಜಿನಿಂದ ತಪ್ಪಿಸಲು ಇರುವ ಒಳ್ಳೆಯ ಉಪಾಯವೆಂದರೆ ಆರೋಗ್ಯಕರ ಜೀವನಶೈಲಿ.?

Pinterest LinkedIn Tumblr

ಮೂತ್ರಪಿಂಡದ ಕಾಯಿಲೆಗಳು ಸೈಲೆಂಟ್ ಕಿಲ್ಲರ್ ಆಗಿವೆ, ಇದು ನಿಮ್ಮ ಜೀವನಶೈಲಿಯ ಗುಣಮಟ್ಟದ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತದೆ. ಮೂತ್ರಪಿಂಡದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಇರುವ ಕೆಲವು ಸುಲಭ ಮಾರ್ಗಗಳೆಂದರೆ.

ಬೊಜ್ಜು ಎಂದರೆ ಅಸಹಜ ಅಥವಾ ವಿಪರೀತ ಕೊಬ್ಬಿನ ಶೇಖರಣೆ ಆಗಿದೆ. ಮತ್ತು ಇದು ಮೂತ್ರಪಿಂಡದ ಕಾಯಿಲೆಯ ಬೆಳವಣಿಗೆಗೆ ಪ್ರಬಲವಾದ ಅಪಾಯಕಾರಿ ಅಂಶವಾಗಿದೆ. ಇದು ಮಧುಮೇಹ ಮತ್ತು ಅಧಿಕ ರಕ್ತದೊತ್ತಡ, ದೀರ್ಘಾವಧಿಯ ಮೂತ್ರಪಿಂಡದ ಸಮಸ್ಯೆ ಮತ್ತು ಕೊನೆ ಹಂತದ ಮೂತ್ರಪಿಂಡದ ವೈಫಲ್ಯ ಆಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಬೂಜ್ಜು ಇರುವ ವ್ಯಕ್ತಿಗಳಲ್ಲಿ ಮೂತ್ರಪಿಂಡ ಹೆಚ್ಚು ಕೆಲಸ ಮಾಡಬೇಕಿದ್ದು, ಸಾಮಾನ್ಯಕ್ಕಿಂತ ಹೆಚ್ಚು ರಕ್ತವನ್ನು ಸೋಸಬೇಕಾಗಿರುತ್ತದೆ. ಇದರಿಂದ ಮೂತ್ರಪಿಂಡದ ಹಾನಿಯಾಗಿ ಧೀರ್ಘಾವಧಿಯ ಕಿಡ್ನಿಯ ಸಮಸ್ಯೆ(ಸಿಕೆಡಿ) ಆಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಆದರೆ ಬೊಜ್ಜು ಮತ್ತು ಸಿಕೆಡಿಯನ್ನು ತಪ್ಪಿಸಲು ಇರುವ ಒಂದು ಒಳ್ಳೆಯ ಉಪಾಯವೆಂದರೆ ಆರೋಗ್ಯಕರ ಜೀವನಶೈಲಿ .

ಆರೋಗ್ಯಕರ ಕಿಡ್ನಿಗಳಿಗಾಗಿ ೮ ಅತ್ಯುತ್ತಮ ನಿಯಮಗಳು
ಹೇಳಬೇಕೆಂದರೆ, worldkidneyday.orgಪ್ರಕಾರ ಆರೋಗ್ಯಕರ ಕಿಡ್ನಿಗಳಿಗಾಗಿ ೮ ಅತ್ಯತ್ತಮ ನಿಯಮಗಳಿವೆ.
ದೈಹಿಕ ಚಟುವಟಿಕೆ. ಎಲ್ಲರಿಗೂ ತಿಳಿದಿರುವಂತೆ ದೈಹಿಕವಾಗಿ ಸಕ್ರಿಯವಾಗಿರುವುದು ಒಬ್ಬ ವ್ಯಕ್ತಿಗೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತದೆ, ಇದು ತೂಕ ನಷ್ಟ, ಸಕಾರಾತ್ಮಕ ಚಿಂತನೆ ಮತ್ತು ಮೂತ್ರಪಿಂಡವನ್ನು ಆರೋಗ್ಯಕರವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.
ನಿಮ್ಮ ರಕ್ತದ ಗ್ಲುಕೋಸ್ ಮಟ್ಟದ ಮೇಲೆ ಗಮನವಿಡಿ. ಮಧುಮೇಹ ಇರುವ ಬಹುಪಾಲು ಜನರು ಕಿಡ್ನಿ ಹಾನಿಗೆ ಒಳಗಾಗಿದ್ದಾರೆ. ಹಾಗಾಗಿ ನಿಯಮಿತ ರಕ್ತದಲ್ಲಿನ ಗ್ಲುಕೋಸ್ ಪರೀಕ್ಷೆ ಮಾಡಿಸುವುದರಂದ ನಿಮ್ಮ ಕಿಡ್ನಿ ಹಾನಿಗೊಳಗಾಗುವುದನ್ನು ತಡೆಗಟ್ಟಬಹುದು.
ನಿಮ್ಮ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಿ. ಹೃದಯ ವೈಫಲ್ಯ ಅಥವಾ ಪಾರ್ಶ್ವವಾಯುವನ್ನು ಬಿಟ್ಟರೆ ಅಧಿಕ ರಕ್ತದೊತ್ತಡವು ಸಹ ಕಿಡ್ನಿ ಹಾನಿಗೆ ಕಾರಣವಾಗುತ್ತದೆ. ಸಾಮಾನ್ಯ ರಕ್ತದೊತ್ತಡ ಮಟ್ಟ 120/80 ಆಗಿರಬೇಕು. ಇದಕ್ಕಿಂತ ಸ್ವಲ್ಪ ಹೆಚ್ಚು ಮತ್ತು 139/89 ನಡುವೆ ಇದ್ದರೆ, ನಿಮಗೆ ರಕ್ತದೊತ್ತಡ ಸಮಸ್ಯೆ ಬರುವ ಸಾಧ್ಯೆತೆಗಳಿವೆ ಎಂದು ಪರಿಗಣಿಸಲಾಗುತ್ತದೆ, ಆಗ ನೀವು ಜೀವನಶೈಲಿ ಮತ್ತು ಆಹಾರದ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕು. ಇನ್ನು ನಿಮ್ಮ ಬಿಪಿ 140/90 ಮತ್ತು ಅದಕ್ಕಿಂತ ಹೆಚ್ಚಾಗಿದ್ದರೆ, ನಿಮ್ಮ ವೈದ್ಯರೊಂದಿಗೆ ಅದರ ಅಪಾಯಗಳನ್ನು ಒಮ್ಮೆ ಚರ್ಚಿಸಿ, ಔಷಧಿಗಳನ್ನು ತೆಗೆದುಕೊಳಬೇಕು ಮತ್ತು ನಿಮ್ಮ ರಕ್ತದೊತ್ತಡ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳುತ್ತಿರಬೇಕು. ಅಧಿಕ ರಕ್ತದೊತ್ತಡದ ಜೊತೆಯಲ್ಲಿ ಮಧುಮೇಹ, ಅಧಿಕ ಕೊಲೆಸ್ಟ್ರಾಲ್ ಮತ್ತು ಇತರೆ ಹೃದಯ ಸಂಬಂಧಿ ಕಾಯಿಲೆಗಳು ಇದ್ದಾಗ ಮೂತ್ರಪಿಂಡ ಹಾನಿಯಾಗುವ ಹೆಚ್ಚಿನ ಸಾಧ್ಯತೆಯಿರುತ್ತದೆ.

ಆರೋಗ್ಯಕರ ಆಹಾರ ಪದ್ಧತಿ ಇದನ್ನು ಪಾಲಿಸುವುದರಿಂದ ನೀವು ಮಧುಮೇಹ, ಹೃದಯದ ಸಮಸ್ಯೆಗಳು ಮತ್ತು ದೀರ್ಘಾವಧಿಯ ಕಿಡ್ನಿ ಸಮಸ್ಯೆಗಳಿಗೆ ಕಾರಣವಾಗುವ ಇತರೆ ಸಮಸ್ಯೆಗಳನ್ನು ತಡೆಗಟ್ಟಬಹುದಾಗಿದೆ. ಕಡಿಮೆ ಉಪ್ಪನ್ನು ಸೇವಿಸಿ. ಶಿಫಾರಸು ಮಾಡಿದ ಒಂದು ದಿನದ ಸೋಡಿಯಂ ಪ್ರಮಾಣ 5-6 ಗ್ರಾಂ (1 ಚಮಚ). ಹಾಗಾಗಿ ಹೊರಗಡೆಯ ರೆಸ್ಟೋರೆಂಟ್ಗಳ ಊಟ ಸೇವನೆ ಮತ್ತು ಸಂಸ್ಕರಿಸಿದ ಆಹಾರಗಳಲ್ಲಿ ಹೆಚ್ಚು ಉಪ್ಪು ಇರುವುದರಿಂದ ಅದರ ಬದಲಾಗಿ ಮನೆಯಲ್ಲಿ ತಯಾರಿಸಿದ ಅಡುಗೆಯನ್ನು ತಿನ್ನಬೇಕು. ಇದು ನಿಮ್ಮ ದೇಹದಲ್ಲಿನ ಉಪ್ಪಿನ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ಸಾಕಷ್ಟು ನೀರು ಕುಡಿಯಿರಿ ಸಾಕಷ್ಟು ನೀರು ಕುಡಿಯುವುದರಿಂದ ನಿಮ್ಮ ಚರ್ಮವಷ್ಟೇ ಅಲ್ಲದೆ ನಿಮ್ಮ ಮೂತ್ರಪಿಂಡಗಳು ಆರೋಗ್ಯಕರವಾಗಿರುತ್ತದೆ. ಹೆಚ್ಚು ನೀರು ಕುಡಿಯುವುದರಿಂದ ಕಿಡ್ನಿಯು ದೇಹದ ತ್ಯಾಜ್ಯಗಳು ಮತ್ತು ಹೆಚ್ಚಿನ ಸೋಡಿಯಂ, ಯೂರಿಯ ಗಳನ್ನು ಮೂತ್ರದಲ್ಲಿ ಹೊರಹಾಕುತ್ತದೆ, ಇದರಿಂದ ಕಿಡ್ನಿ ಹಾನಿಗೊಳಗಾಗುವ ಸಾಧ್ಯತೆಗಳು ತೀರಾ ಕಡಿಮೆಯಾಗುತ್ತದೆ. ಒಂದು ವ್ಯಕ್ತಿ ತೆಗೆದುಕೊಳ್ಳಬೇಕಾದ ನೀರಿನ ಪ್ರಮಾಣ ಲಿಂಗ, ವ್ಯಾಯಾಮ, ವಾತಾವರಣ, ಆರೋಗ್ಯದ ಸ್ಥಿತಿ, ಗರ್ಭಾವಸ್ಥೆ ಮತ್ತು ಸ್ತನಪಾನದ ಮೇಲೂ ಅವಲಂಬಿತವಾಗಿರುತ್ತದೆ. ಇದರ ಜೊತೆಯಲ್ಲಿ ಕಿಡ್ನಿಯಲ್ಲಿ ಕಲ್ಲು ಇರುವ ರೋಗಿಗಳು ಒಂದು ದಿನಕ್ಕೆ 1-2 ಲೀಟರ್ ನೀರನ್ನು ಅವಶ್ಯಕವಾಗಿ ಕುಡಿಯುವುದರಿಂದ ಹೊಸ ಕಲ್ಲುಗಳು ಆಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ.

ಧೂಮಪಾನ ನಿಲ್ಲಿಸಿ! ಧೂಮಪಾನ ಮಾಡುವುದರಿಂದ ಮೂತ್ರಪಿಂಡಗಳಲ್ಲಿ ರಕ್ತದ ಹರಿವು ನಿಧಾನವಾಗುತ್ತದೆ. ಮತ್ತು ಇದರಿಂದ ಮೂತ್ರಪಿಂಡದ ಕೆಲಸದ ಮೇಲೆ ಪರಿಣಾಮ ಬೀರಿ ಅದರ ಕಾರ್ಯನಿರ್ವಹಣೆ ಕುಂಠಿತವಾಗುತ್ತದೆ. ಅಷ್ಟೇ ಅಲ್ಲದೆ ಧೂಮಪಾನ ಮಾಡುವುದರಿಂದ ಕಿಡ್ನಿ ಕ್ಯಾನ್ಸರ್ ಬರುವ ಸಂಭವಗಳು ೫೦% ಹೆಚ್ಚಾಗುತ್ತದೆ.

ಓಟಿಸಿ ಔಷಧಿಗಳ ಸೇವನೆಯನ್ನು ಕಡಿಮೆ ಮಾಡಿ ಓಟಿಸಿ ಔಷಧಗಳೆಂದರೆ ವೈದ್ಯರ ಚೀಟಿಯಿಲ್ಲದೆಯೇ ಸುಲಭವಾಗಿ ಔಷಧ ಅಂಗಡಿಗಳಲ್ಲಿ ಸಿಗುವ ಮಾತ್ರೆಗಳು ಅಂದರೆ ಕ್ರೋಸಿನ್, ಇಬುಪ್ರೋಫಿನ್ ಇತ್ಯಾದಿ. ಇದರಲ್ಲಿ ಹೆಚ್ಚಿನ ನೋವು ನಿವಾರಕ ಮಾತ್ರೆಗಳು ಸ್ಟೀರಾಯ್ಡ್ ಅಲ್ಲದ ಉರಿಊತ ನಿರೋಧಕ ಔಷಧಗಳಾಗಿರುತ್ತವೆ. ಇದನ್ನು ಹೆಚ್ಚಾಗಿ ಆಗಾಗ್ಗೆ ತೆಗೆದುಕೊಳ್ಳುವುದರಿಂದ ಕಿಡ್ನಿ ಸಮಸ್ಯೆಗಳು ಶುರುವಾಗುತ್ತದೆ. ಆದ್ದರಿಂದ ಯಾವುದೇ ಔಷಧಿಗಳನ್ನು ತೀರಾ ಅವಶಕತೆ ಇದ್ದಲ್ಲಿ ಮಾತ್ರ ಮತ್ತು ನಿಮ್ಮ ವೈದ್ಯರ ಸಲಹೆಯನ್ನು ಪಡೆದು ತೆಗೆದುಕೊಳ್ಳಬೇಕು. ಏನಾದರೂ ತೀರಾ ಸಂಧಿವಾತ ಅಥವಾ ಬೆನ್ನು ನೋವು ಇದ್ದರೆ ಮಾತ್ರ ನಿಮ್ಮ ವೈದ್ಯರು ಹೇಳಿದ ಪ್ರಮಾಣದಲ್ಲಿ ಕ್ರೋಸಿನ್ ಗುಳಿಗೆಯನ್ನು ತೆಗೆದುಕೊಳ್ಳಬಹುದು.

ನಿಮಗೇನಾದರೂ ಒಂದಕ್ಕಿಂತ ಹೆಚ್ಚು ಕಾಯಿಲೆಗಳ ಅಪಾಯಗಳಿದ್ದರೆ ಅಂದರೆ ಮಧುಮೇಹ, ಬೊಜ್ಜು, ಅಧಿಕ ರಕ್ತದೊತ್ತಡ ಅಥವಾ ನಿಮ್ಮ ಕುಟುಂಬದವರಿಗೆ ಯಾರಿಗಾದರೂ ಕಿಡ್ನಿ ಸಮಸ್ಯೆ ಇದ್ದರೆ ನೀವು ನಿಯಮಿತವಾಗಿ ಕಿಡ್ನಿ ಪರೀಕ್ಷೆಯನ್ನು ಮಾಡಿಸಬೇಕು.

Comments are closed.