ಆರೋಗ್ಯ

ಹೊಟ್ಟೆಯುಬ್ಬರ, ಅಜೀರ್ಣ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ದೇಸಿ ಪರಿಹಾರ

Pinterest LinkedIn Tumblr

ಹೊಟ್ಟೆಯಲ್ಲಿ ಉರಿಯಿದ್ದರೆ ಚೂರು ಬೆಲ್ಲವನ್ನು ಸೇವಿಸಿ,ಮಧುಮೇಹ ಇದ್ದವರು ಬೆಲ್ಲವನ್ನು ಸೇವಿಸಬಾರದು.

ಬಿರಿಯಾನಿ ಮತ್ತಿತ್ತರ ಮಸಾಲೆ ಪದಾರ್ಥಗಳನ್ನು ತಿನ್ನುವಾಗ ಅದರೊಂದಿಗೆ ರಾಯತವನ್ನು ಕಡ್ಡಾಯವಾಗಿ ಸೇವಿಸಿ, ಇದರಿಂದ ಅಜೀರ್ಣವಾಗುವುದಿಲ್ಲ.

ಮೂಲಂಗಿ ಕೊತ್ತಂಬರಿ ಹಾಗೂ ಜೀರಿಗೆಯನ್ನು ಪುಡಿ ಮಾಡಿ ರಾಯತಕ್ಕೆ ಸೇರಿಸಿದರೆ ಆರೋಗ್ಯಕ್ಕೆ ಒಳ್ಳೆಯದು.

ತುಳಸಿ ಕೂಡ ಅಜೀರ್ಣವನ್ನು ಹೋಗಲಾಡಿಸುತ್ತದೆ,ಮಸಾಲೆಯುಕ್ತ ಆಹಾರಗಳ ಸೇವನೆ ನಂತರ ನಾಲ್ಕೈದು ತುಳಸಿ ದಳಗಳನ್ನು ತಿಂದರೆ ಹೊಟ್ಟೆ ಹಗುರವಾಗುತ್ತದೆ.

ಹೊಟ್ಟೆಯುಬ್ಬರ ಮತ್ತು ಅಜೀರ್ಣದಿಂದ ಬಳಲುವವರು ಎರಡು ಲವಂಗವನ್ನು ಬಾಯಲ್ಲಿ ಜಗಿಯುತ್ತ ಒಂದು ಸಣ್ಣ ವಾಕ್ ಮಾಡಿದರೆ ಕೆಲ ಸಮಯದ ಬಳಿಕ ಸಮಾಧಾನವಾಗುತ್ತದೆ.

ಒಂದು ವೇಳೆ ಹೊಟ್ಟೆನೋವಿದ್ದು ವಾಂತಿಯಾಗುವ ಲಕ್ಷಣವಿದ್ದರೆ ಹುರಿದ ಜೀರಿಗೆ ಕಾಳುಗಳ ಪುಡಿಯನ್ನು ಒಂದು ಲೋಟ ನೀರಿಗೆ ಹಾಕಿ ಕುಡಿಯಿರಿ.

ಅಜೀರ್ಣತೆ ಇನ್ನೂ ಕಡಿಮೆಯಾಗದಿದ್ದರೆ ತುಳಸಿ ದಳಗಳನ್ನು ಟೀ ಅಥವಾ ಬಿಸಿ ನೀರಿನಲ್ಲಿ ಬೆರೆಸಿ ಕುಡಿಯಿರಿ.

ಊಟದ ನಂತರ ಪುದಿನಾ ಸೊಪ್ಪಿನ ಸೇವನೆ ಮಾಡಿದರೂ ಅಜೀರ್ಣಕ್ಕೆ ಉತ್ತಮ.

ಅಜೀರ್ಣತೆ ಸಮಸ್ಯೆ ಇದ್ದವರು ಮಾಂಸಾಹಾರ ಸೇವಿಸಿದ ಬಳಿಕ ಒಂದು ಲೋಟ ಉಗುರು ಬೆಚ್ಚನೆಯ ನೀರು ಕುಡಿಯಬೇಕು

Comments are closed.