ಆರೋಗ್ಯ

ಈ ಸಸ್ಯದ ಎಲೆ ಮತ್ತು ಬೇರುಗಳನ್ನು ಅರೆದು ಲೇಪಿಸುವುದರಿಂದ ಎಲ್ಲ ವಿಧದ ಚರ್ಮರೋಗಗಳು ಗುಣಮುಖ.

Pinterest LinkedIn Tumblr

ಈ ಒಂದು ಗಿಡದ ರಸವನ್ನು ನೀರಿಗೆ ಹಾಕಿದರೆ ನೀರು ಲೋಳೆಯಂತಾಗುತ್ತದೆ ಹಾಗೇನೇ ಎಲ್ಲ ರೀತಿಯ ರೋಗಗಳಿಗೂ ಸಹ ಮನೆಮದ್ದಾಗಿದೆ ಹಾಗಾದರೆ ಆ ಒಂದು ಉಪಯುಕ್ತವಾದ ಗಿಡದ ಬಗ್ಗೆ ತಿಳಿಯೋಣ ಬನ್ನಿ. ದಾಗಡಿ ಬಳ್ಳಿ ಇದಕ್ಕೆ ವೈಜ್ಞಾನಿಕ ಹೆಸರು ಕ್ಯಾಕುಲಸ ಈಜುಟಸ್ ಈ ಸಸ್ಯವು ಮೇನಿಸ್ ಪರ್ಮಸಿ ಎಂಬ ಸಸ್ಯ ಕುಟುಂಬಕ್ಕೆ ಸೇರಿರುತ್ತದೆ ಇದಕ್ಕೆ ಕನ್ನಡದಲ್ಲಿ ಅಂಡಬುಬಳ್ಳಿ ಎಡನಿಬಳ್ಳಿ ದುಸುರಿಬಳ್ಳಿ ಎಂದು ಕರೆಯುತ್ತಾರೆ, ಈ ಮೂಲಿಕೆಯು ಕಳ್ಳಿ ಕುರಿಚಲು ಗಿಡಗಳಲ್ಲಿ ಹೊಂದಿಕೊಂಡು ಸಸ್ಯಾವರಣ್ಯ ಮತ್ತು ಬೇಸಿಗೆಯಲ್ಲಿ ಎಲೆ ಉದುರುವ ನಿತ್ಯಹರಿದ್ವರ್ಣ ಸಸ್ಯವರ್ಣದ ನೆಲದ ಮೇಲೆ ಗಿಡದ ಮೇಲೆ ಮತ್ತು ಪೊದರಿನ ಮೇಲೆ ಹಬ್ಬಿ ಬೆಳೆಯುತ್ತದೆ.

ಈ ಮೂಲಿಕೆಯು ಬಳ್ಳಿ ಕಾಂಡದಮೇಲೆ ಭರ್ಜಿ ಅಥವಾ ನೀಳ ಅಂಡಕಾರದ ಎಲೆಗಳು ಪರ್ಯಾಯವಾಗಿ ಜೋಡನೆಯಾಗಿರುತ್ತವೆ. ಎಲೆಗಳ ಮೇಲೆ ರೋಮ ಇದ್ದರೆ ವಿರಳವಾಗಿರುತ್ತವೆ ಎಲೆ ಕಂಕುಳಿನಲ್ಲಿ ಹೆಣ್ಣು ಹೂಗಳು ಗೊಂಚಲಾಗಿ ಮತ್ತು ಗಂಡು ಹೂಗಳು ವಿರಳವಾಗಿ ಹಾಗೂ ಪ್ರತ್ಯಕವಾಗಿ ಇರುತ್ತವೆ. ಚಪ್ಪಟೆಯಾದ ರಸಭರಿತ ಹಣ್ಣಿನ ಬಣ್ಣ ಕಪ್ಪು ಮಿಶ್ರಿತ ನೀಲಿಯಾಗಿರುತ್ತದೆ ಎಲೆಗಳನ್ನು ಅರೆದು ನೀರಿಗೆ ಹಾಕಿದರೆ ಮೇಲೆ ಲೋಳೆಯಂತೆ ಗರಣಿ ಕಟ್ಟುತ್ತದೆ. ಈ ಒಂದು ಗಿಡದ ಪ್ರಮುಖ ಉಪಯೋಗಗಳೇನೆಂದರೆ ಬೇರಿನ ಚೂರ್ಣವನ್ನು ಹಾವು ಕಡಿದವರಿಗೆ ತಿನ್ನಿಸುತ್ತಾರೆ ಬೇರಿನ ಕಷಾಯಕ್ಕೆ ಕೆಲವು ಕಾಳು ಕರಿಮೆಣಸು ಸೇರಿಸಿ ಮೇಕೆ ಹಾಲಿನೊಡನೆ ಪ್ರತಿದಿವಸ ಕುಡಿಸುವುದರಿಂದ ಸಂಧಿವಾತ ಹಾಗೂ ನಿಮ್ಮ ದೇಹದ ಗುಪ್ತ ಸಮಸ್ಯೆಗಳು ಕಡಿಮೆ ಆಗುತ್ತವೆ ದಾಗಡಿ ಎಲೆ ಮತ್ತು ಬೇರುಗಳನ್ನು ಅರೆದು ಲೇಪಿಸುವುದರಿಂದ ಎಲ್ಲ ವಿಧದ ಚರ್ಮರೋಗಗಳು ವಾಸಿಯಾಗುತ್ತವೆ

ಇದನ್ನೇ ಚೇಳು ಕಡಿದ ಜಾಗದ ಮೇಲೆ ಲೇಪಿಸುವುದರಿಂದ ನೋವು ಉರಿ ಶಮನವಾಗುತ್ತದೆ. ಇದೆ ರಸವನ್ನು ನೀರಿಗೆ ಹಾಕಿದಾಗ ನೀರು ಲೋಳೆಯಂತೆ ಆಗುತ್ತದೆ ಅದಕ್ಕೆ ಸಕ್ಕರೆ ಸೇರಿಸಿ ಕುಡಿಸುವುದರಿಂದ ಗೋನ್ನೂರಿಯ ರೋಗ ಗುಣವಾಗುತ್ತದೆ ಎಲೆ ಮತ್ತು ಬೇರಿನ ಚೂರ್ಣದ ಸೇವನೆಯಿಂದ ರತಿಯ ಸಂಬಂಧದ ರೋಗಗಳು ಅಮನಾವಾತ ಅಂದರೆ ಸಂಧಿವಾತ ದಮ್ಮು ಕೆಮ್ಮು ಅಜೀರ್ಣ ಸಂಬಂಧದ ಹೊಟ್ಟೆನೋವು ವಾಸಿಯಾಗುತ್ತದೆ ಹಾಗೇನೇ ಜ್ವರ ನಿವಾರಣೆಯಾಗುತ್ತದೆ ಮತ್ತು ರಕ್ತವು ಶುದ್ಧಿಯಾಗುತ್ತದೆ ಬೇರಿನ ಚೂರ್ಣ ಸೇವಿಸುವುದರಿಂದ ಶಕ್ತಿವರ್ಧನೆಯಾಗುತ್ತದೆ.

ದಾಗಡಿಯ ಸ್ವರಸ ಸೇವನೆಯಿಂದ ಶೀಘ್ರ ವೀರ್ಯಸ್ಪಲನ ಗುಣವಾಗುತ್ತದೆ ಮತ್ತು ಸಂಭೋಗದ ಬ್ಶಕ್ತಿ ವೃದ್ಧಿಯಾಗುತ್ತದೆ. ನಿಮಗೆ ಮತ್ತಷ್ಟು ಮಾಹಿತಿ ಪಡೆಯಲು ಮತ್ತು ನಿಮ್ಮ ಹತ್ತಿರದ ಸೂಕ್ತ ಆಯುರ್ವೇದ ವೈದ್ಯರ ನೆರವು ಪಡೆದುಕೊಂಡು ಈ ಮನೆ ಮದ್ದು ಮಾಡಿರಿ.

Comments are closed.