ಆರೋಗ್ಯ

ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಆಧ್ಯಾತ್ಮಿಕ ಮಾರ್ಗ ಒಳ್ಳೆದೇ ಕೆಟ್ಟದೇ…?

Pinterest LinkedIn Tumblr

ಯೋಗ ತನ್ನ ವಿವಿಧ ಆಸನಗಳಿಂದ, ಉಸಿರಾಡುವ ವ್ಯಾಯಾಮ ಮತ್ತು ಧ್ಯಾನದಿಂದ ಮನಸ್ಸು, ದೇಹ ಮತ್ತು ಆತ್ಮವನ್ನು ಒಂದುಗೂಡಿಸುತ್ತದೆ. ಇದು ಮಾನವನ ಆತ್ಮವನ್ನು ಸರ್ವೋಚ್ಚದ ಆತ್ಮದ ಜೊತೆ ಸೇರಿಸಿ ಮಾನವನ ಮೂಲಭೂತ ಪ್ರವೃತ್ತಿಗಳಾದ ಕಾಮ, ಕೋಪ ಮತ್ತು ದುಃಖವನ್ನು ಹೋಗಲಾಡಿಸಿ ಆಧ್ಯಾತ್ಮಕ ಚಿಂತನೆ ಮತ್ತು ಸಹಾನುಹುತಿಯ ಭಾವವನ್ನು ಮೂಡಿಸುತ್ತದೆ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ಇದು ಧನಾತ್ಮಕ ಚಿಂತನೆ, ಆರೋಗ್ಯಪೂರ್ಣ ಸಂಬಂಧಗಳು, ಏಕಚಿತ್ತ ಧ್ಯಾನ ಮತ್ತು ಆಧ್ಯಾತ್ಮಿಕ ಚಿಂತನೆ ಇಂದ ಕೂಡಿದ ಜೀವನವನ್ನು ಸಾಗಿಸುವ ರೀತಿಯನ್ನು ತಿಳಿಸುತ್ತದೆ. ಹಾಗಾಗಿ ಯೋಗವನ್ನು ನಮ್ಮೆಲ್ಲರ ಜೀವನದ ಭಾಗವನ್ನಾಗಿಸೋಣ.

ನಿಮ್ಮ ಆಧ್ಯಾತ್ಮಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಯೋಗದ ಪರಿಣಾಮಗಳು
ಆಧ್ಯಾತ್ಮಿಕ ಆರೋಗ್ಯವೆಂದರೆ ಒಬ್ಬ ವ್ಯಕ್ತಿಯು ತನ್ನ ಒಳಗಿನ ದಿನನಿತ್ಯದ ಸಮಸ್ಯೆಗಳನ್ನು ಎದುರಿಸುವ ಸಂಪೂರ್ಣ ಸಾಮರ್ಥ್ಯ, ಅರ್ಥ ಮತ್ತು ಉದ್ದೇಶವನ್ನು ತಾನು ಸಂಪೂರ್ಣವಾಗಿ ಅರಿತುಕೊಂಡು ಬಾಳುವುದು. ಈ ಆಧ್ಯಾತ್ಮವನ್ನು ಕೆಲವರು ಕತ್ತಲೆಯೆಂದು ತಿಳಿದು ತಮ್ಮ ಜೀವನದ ಸಂತೋಷವನ್ನು ಕಳೆದುಕೊಳ್ಳುತ್ತಿರುವುದು ಖೇದನೀಯವಾಗಿದೆ. ಅಧ್ಯಾತ್ಮ ಜೀವನವನ್ನು ನಡೆಸಲು ದಿನನಿತ್ಯದ ಚಟುವಟಿಕೆಯಲ್ಲಿ ದೃಢವಾದ ಮತ್ತು ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳುವುದಕ್ಕೆ ಕವಿತೆ, ಸಂಗೀತ, ಮತ್ತು ಕಲೆಯನ್ನು ಮೆಚ್ಚುವ ಸ್ವಭಾವವನ್ನು ಬೆಳೆಸಿಕೊಳ್ಳಬೇಕು ಮತ್ತು ಈ ಪ್ರಾಪಂಚಿಕ ಗುಣಗಳಿಂದ ದೂರವಿರಬೇಕು.

ಒಬ್ಬ ಯೋಗಿಯು ತನ್ನ ಮಾನಸಿಕ ಸಮತೋಲನವನ್ನು ಪ್ರತಿಕೂಲ ಸಂದರ್ಭಗಳಲ್ಲಿಯೂ ನಿರ್ವಹಿಸುತ್ತಾನೆ; ವ್ಯಸನ ಮತ್ತು ಅನಾರೋಗ್ಯಕರ ಸ್ವಭಾವಗಳಿಂದ ಅವನು ನೈಸರ್ಗಿಕವಾಗಿ ಮುಕ್ತನಾಗಿರುತ್ತಾನೆ. ಆದರೆ ಕೆಲವರು ಈ ನಡವಳಿಕೆಯ ವಿಪರೀತವಾಗಿ ತಮ್ಮ ಅನಾರೋಗ್ಯಕರ ಆಹಾರ, ಜಡ ಜೀವನಶೈಲಿ ಅಥವಾ ದೈಹಿಕ ಚಟುವಟಿಕೆ ತಂಬಾಕುವಿನ ಚಟ, ಮದ್ಯ ಮತ್ತು ಬೇರೆ ವಸ್ತುಗಳ ಚಟಗಳಿಗೆ ದಾಸರಾಗುತ್ತಾರೆ. ಈ ರೀತಿಯ ಜಡ ಜೀವನಶೈಲಿಯಿಂದ ಆಗುವ ಅಪಾಯಗಳೆಂದರೆಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಇತ್ಯಾದಿ. ಜೀವನದಲ್ಲಿ ಒತ್ತಡವನ್ನು ಉಂಟುಮಾಡುವ ಚಿಂತನೆ ಮತ್ತು ಭಾವನೆಗಳನ್ನು ಸಾಮರ್ಥ್ಯದಿಂದ ನಿರ್ವಹಿಸಲು ಯೋಗ ನಿಮಗೆ ಸಹಾಯ ಮಾಡಬಲ್ಲದು.

ಯೋಗ ಮತ್ತು ಪ್ರಾಣಾಯಾಮ ಶ್ವಾಸಕೋಸಹದ ಗಾತ್ರವನ್ನು ಹಿಗ್ಗಿಸಿ, ಅಸ್ತಮಾದಲ್ಲಿ ಆಗಾಗ್ಗೆ ಬರುವ ದಮ್ಮನ್ನು ಕಡಿಮೆಮಾಡುತ್ತದೆ. ಮೈಗ್ರೇನ್ , ಸೈನಸೈಟಿಸ್, ಬೆನ್ನುನೋವು, ಸರ್ವಿಕಲ್ ಸ್ಪಾಂಡಿಲೈಟಿಸ್, ಸಂಧಿವಾತ, ಅಜೀರ್ಣ, ಇತ್ಯಾದಿಗಳೆಲ್ಲವೂ ಕೂಡ ಇವನ್ನು ದೈನಂದಿನ ಅಭ್ಯಾಸ ಮಾಡುವುದರಿಂದ ಕಡಿಮೆಯಾಗುತ್ತದೆ. ಮೊಣಕಾಲು ಬದಲಿ ದೇವರು ಎಂದು ಕರೆಯಲ್ಪಡುವ ಪದ್ಮಶ್ರೀ ಪ್ರಶಸ್ತಿ ವಿಜೇತ ಡಾ. ಜಾನ್ ಎಬ್ನೆಜರ್ ಯೋಗವನ್ನು ಉತ್ತೇಜಿಸಿ, ಸಂಧಿನೋವಿಗಾಗಿ ಶಸ್ತ್ರಚಿಕಿತ್ಸೆಯೇ ಕೊನೆಯ ಪರಿಹಾರವಲ್ಲ ಎಂದು ವಾದ ಮಾಡಿದ್ದಾರೆ. ಇದು ಉತ್ತಮ ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಯನ್ನು ಮತ್ತು ಸ್ಥಿರತೆಯನ್ನು ಬೆಳೆಯುವ ಮಕ್ಕಳಲ್ಲಿ ತರುತ್ತದೆ. ಇಷ್ಟೇಅಲ್ಲದೆ ಖ್ಯಾತ ಡಾ. ದೀಪಕ್ ಚೋಪ್ರಾ ನಡೆಸಿದ ಹಲವು ಅಧ್ಯಯನಗಳ ಪ್ರಕಾರ ಯೋಗ ಮಾನಸಿಕ ಖಿನ್ನತೆ, ಹೆದರಿಕೆ ಮತ್ತು ಬೇರೆ ರೋಗಗಳನ್ನು ಕಡಿಮೆ ಮಾಡುತ್ತದೆ.

ಯೋಗದೊಂದಿಗೆ ಸರಳ ಬದಲಾವಣೆಗಳು
ಯೋಗದ ಜೊತೆಯಲ್ಲಿ ದಿನವೂ ವಾಕಿಂಗ್ ಅಭ್ಯಾಸವನ್ನು ಮಾಡುವುದರಿಂದ ಇನ್ನಷ್ಟು ಪರಿಣಾಮಕರ ರೀತಿಯಲ್ಲಿ ನಿಮ್ಮ ಸಮಸ್ಯೆಗಳನ್ನು ಕಡಿಮೆಮಾಡಬಹುದು. ಸಾತ್ವಿಕ ಆಹಾರದಲ್ಲಿ “5 ಬಣ್ಣಗಳನ್ನು ತೆಗೆದುಕೊಳ್ಳಿ ”, ಸಾಕಷ್ಟು ಪ್ರೋಟೀನ್, ಒಳ್ಳೆಯ ಅನ್ಸ್ಯಾಚುರೇಟೆಡ್ ಕೊಬ್ಬುಗಳು, ಸ್ವಲ್ಪವೇ ಕಾರ್ಬೋಹೈಡ್ರೇಟ್ಗಳು ಮತ್ತು ಅಧಿಕ ನೀರು ಮತ್ತು ನೀರಿನ ಜೊತೆಯಲ್ಲಿ ಶುಂಠಿ, ಲಿಂಬೆಹಣ್ಣು ಮತ್ತು ತುಳಸಿ ಸೇವನೆ ಮಾಡುವುದರಿಂದಲೂ ಸಹ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾಗಿ ಯೋಗದ ದಿನವೂ ಅಭ್ಯಾಸಿಸಿ.

Comments are closed.