ಆರೋಗ್ಯ

ಲೋಳೆಸರದ ಶಿಲೀಂಧ್ರ ನಿರೋಧಕ ಗುಣಗಳು ನೆತ್ತಿಯ ಆರೋಗ್ಯ ಒಳ್ಳೆದು

Pinterest LinkedIn Tumblr

ತೆಂಗಿನೆಣ್ಣೆ ಮತ್ತು ಲೋಳೆಸರ ಇದಕ್ಕೆ ಸಮರ್ಪಕ ಔಷಧ. ಲೋಳೆಸರದ ಶಿಲೀಂಧ್ರ ನಿರೋಧಕ ಗುಣಗಳು ನೆತ್ತಿಯ ಆರೋಗ್ಯವನ್ನು ಕಾಪಾಡುತ್ತವೆ. ಈ ಮೂಲಕ ಶುಷ್ಕ, ತುರಿಕೆ ನೆತ್ತಿಯ ಕಾರಣದಿಂದ ಉಂಟಾಗುವ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.

ಹಲವರನ್ನು ಕೂದಲ ಆರೋಗ್ಯ ಸಮಸ್ಯೆ ವ್ಯಾಪಕವಾಗಿ ಕಾಡುತ್ತದೆ. ಎಣ್ಣೆಯುಕ್ತ ಹಾಗೂ ತುರಿಕೆ ನೆತ್ತಿ, ನಿರ್ಜೀವ ಕೂದಲು ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆ. ಕಿರಿಕಿರಿ ಉಂಟು ಮಾಡುವ ಇಂತಹ ಸಮಸ್ಯೆಯಿಂದ ಪಾರಾಗಲು ಸೂಕ್ತ ಮಾರ್ಗ ನಿಸರ್ಗದಲ್ಲೇ ಇದೆ.

ತೆಂಗಿನೆಣ್ಣೆ ಮತ್ತು ಲೋಳೆಸರ ಇದಕ್ಕೆ ಸಮರ್ಪಕ ಔಷಧ. ಲೋಳೆಸರದ ಶಿಲೀಂಧ್ರ ನಿರೋಧಕ ಗುಣಗಳು ನೆತ್ತಿಯ ಆರೋಗ್ಯವನ್ನು ಕಾಪಾಡುತ್ತವೆ. ಈ ಮೂಲಕ ಶುಷ್ಕ, ತುರಿಕೆ ನೆತ್ತಿಯ ಕಾರಣದಿಂದ ಉಂಟಾಗುವ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.

ಲೋಳೆಸರವು ನಿಮ್ಮ ಕೂದಲಿನ ಕೋಶಗಳನ್ನು ಪರಿಣಾಮಕಾರಿಯಾಗಿ ಪೋಷಿಸುತ್ತದೆ. ಬೇಸಿಗೆಯಲ್ಲಿ ನೀರಿನಲ್ಲಿ ಲವಣಾಂಶ ಹೆಚ್ಚಳವನ್ನು ಕಾಣಬಹುದು. ಇದು ನೀರನ್ನು ಗಡಸುಗೊಳಿಸುತ್ತದೆ ಹಾಗೂ ಕೂದಲಿಗೆ ಹಾನಿಕಾರಕ. ಲೋಳೆಸರದೊಂದಿಗೆ ಮಿಶ್ರ ಮಾಡಿರುವ ತೆಂಗಿನೆಣ್ಣೆಯಿಂದ ಮಸಾಜ್‌ ಮಾಡುವುದರಿಂದ ನಿಮ್ಮ ಕೂದಲನ್ನು ಆಳದಿಂದ ರಕ್ಷಿಸುತ್ತದೆ. ಕೂದಲನ್ನು ತೇವಾಂಶಭರಿತವಾಗಿರುವಂತೆ ಹಾಗೂ ನೈಸರ್ಗಿಕವಾಗಿ ಹೈಡ್ರೇಟ್‌ ಆಗಿರುವಂತೆ ಮಾಡುತ್ತದೆ.
ಲೋಳೆಸರವು ನೆತ್ತಿಯ ಮೇಲೆ ಸತ್ತ ಚರ್ಮ ಜೀವಕೋಶಗಳನ್ನು ದುರಸ್ತಿಗೊಳಿಸುವ ಚಿಕಿತ್ಸಕ ಕಿಣ್ವಗಳನ್ನು ಹೊಂದಿದೆ. ಲೋಳೆಸರ ಮತ್ತು ಕೊಬ್ಬರಿ ಎಣ್ಣೆ ಕೂದಲನ್ನು ರೇಷ್ಮೆ ಮತ್ತು ಮೃದುವಾಗಿ ಮಾಡುತ್ತದೆ. ಲೋಳೆಸರ ಮತ್ತು ತೆಂಗಿನೆಣ್ಣೆಯ ಮಿಶ್ರಣವು ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ಮೃದುಗೊಳಿಸುತ್ತದೆ ಮತ್ತು ಬಲಗೊಳಿಸುತ್ತದೆ .

Comments are closed.