ಆರೋಗ್ಯ

ನೀಲಿ ಚೇಳಿನ ವಿಷ ಸಂಧಿವಾತ ನಿವಾರಣೆಗೆ ಸಹಾಯಕ

Pinterest LinkedIn Tumblr

 

ಚೇಳಿನ ಹೆಸರು ಕೇಳಿದ್ರೂ ಸಾಕು ಎಂಥವರ ಬೆವರು ಇಳಿಯುತ್ತೆ. ಅಂತದ್ರಲ್ಲಿ ಮನೆ ಮೂಲೆ, ಹೊಲಗದ್ದೆಗಳಲ್ಲಿ ಕಾಣಸಿಗುವ ಚೇಳಿಗೆ ಸಂಧಿವಾತ ಗುಣಪಡಿಸುವ ಶಕ್ತಿಯಿದೆ ಅಂದ್ರೆ ನಂಬಲೇಬೇಕು. ಹೌದು, ಕ್ಯೂಬಾದ ಜನರಿಗೆ ನೀಲಿ ಚೇಳಿನ ವಿಷವೇ ಸಂಧಿವಾತಕ್ಕೆ ಮದ್ದು. ಪೆಪೆ ಕ್ಯಾಸಾನಾಸ್ ಎಂಬ ಕ್ಯೂಬನ್​ ರೈತ ತನ್ನ ಸಂಧಿವಾತ ನಿವಾರಣೆಯಾಗಬೇಕೆಂದು ಚೇಳಿನಿಂದ ಕಚ್ಚಿಸಿಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬಂದಿದೆ. ಇದು ವಿಚಿತ್ರವೆನಿಸಿದ್ರೂ ಸತ್ಯ. ನೀಲಿ ಚೇಳು ಅಥವಾ ರೋಪಾಲುರಸ್ ಜುನ್ಸಿಯಸ್​ಗೆ ನೋವು ನಿಯಂತ್ರಿಸುವ ಮತ್ತು ಕ್ಯಾನ್ಸರ್​ ಪೀಡಿತರಲ್ಲಿ ಟ್ಯೂಮರ್​ ಬೆಳೆವಣಿಗೆ ನಿಯಂತ್ರಿಸುವ ಶಕ್ತಿಯಿದೆ ಎಂದು ಅಧ್ಯಯನದ ಮೂಲಕ ತಿಳಿದು ಬಂದಿದೆ ಎಂದು ಕ್ಯೂಬನ್ ಫಾರ್ಮಾಕ್ಯೂಟಿಕಲ್​​ ಸಂಸ್ಥೆ ಲ್ಯಾಬಿಯೊಫಾಮ್ ತಿಳಿಸಿದೆ.

2011ರಿಂದ ನೀಲಿ ಚೇಳಿನ ವಿಷದಿಂದ ವಿಡಾಟೊಕ್ಸ್​ ಎಂಬ ಹೋಮಿಯೋಪಥಿ ಔಷಧಿ ತಯಾರಿಸುತ್ತಿದ್ದೇವೆ. ವಿಡಾಟೊಕ್ಸ್ ಮಾರುಕಟ್ಟೆಯಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದು, ವರ್ಷ ಕಳೆದಂತೆ ಇದರ ಬೇಡಿಕೆ ಹೆಚ್ಚುತ್ತಿದೆ ಎಂದು ಲ್ಯಾಬಿಯೊಫಾಮ್​ನ ವ್ಯವಹಾರ ನಿರ್ದೇಶಕ ಕಾರ್ಲೋಸ್ ಆಲ್ಬರ್ಟೊ ಡೆಲ್ಗಾಡೊ ತಿಳಿಸಿದ್ದಾರೆ. ಪ್ರಪಂಚದ 15 ದೇಶಗಳಲ್ಲಿ ಈಗಾಗ್ಲೇ ವಿಡಾಟೊಕ್ಸ್​ ಮರಾಟವಾಗುತ್ತಿದೆ. ವಿಡಾಟೊಕ್ಸ್​ಗೆ ಚೀನಾ ಮಾರುಕಟ್ಟೆಯಲ್ಲಿ ಅನುವು ಮಾಡಿಕೊಡುವಂತೆ ಮಾತುಕತೆಗಳು ನಡೆಯುತ್ತಿದೆ ಎಂದು ಆಲ್ಬರ್ಟೊ ಹೇಳಿದ್ದಾರೆ. ಅಮೇಜಾನ್​ ಡಾಟ್ ಕಾಮ್​ನಲ್ಲಿ ಸುಮಾರು 10 ಸಾವಿರ ರೂಪಾಯಿಗೆ ಇದು ಮಾರಾಟ ಆಗುತ್ತಿದೆ.

Comments are closed.