ಮನೋರಂಜನೆ

ಶಾಸಕ ಹ್ಯಾರಿಸ್‌ ಪರವಾಗಿ ಟ್ವೀಟ್‌ ಮಾಡಿದ ಸ್ಯಾಂಡಲ್‌ವುಡ್‌ ನಟಿ

Pinterest LinkedIn Tumblr

ಕಳೆದ ಕೆಲವು ದಿನಗಳಿಂದ ಶಾಂತಿನಗರ ಕ್ಷೇತ್ರದ ಶಾಸಕ ಎನ್‌.ಎ. ಹ್ಯಾರಿಸ್‌ಪುತ್ರ ಮೊಹಮ್ಮದ್‌ನಲಪಾಡ್‌ಪುತ್ರನ ಗೂಂಡಾಗಿರಿಯ ಬಗ್ಗೆ ಸಾಕಷ್ಟು ವರದಿಗಳು ಬರುತ್ತಲೇ ಇವೆ. ಹ್ಯಾರಿಸ್‌ಹಾಗೂ ಪುತ್ರನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕ ವಿರೋಧ ಸುದ್ದಿಗಳೇ ಪ್ರಕಟವಾಗಿವೆ. ಆದರೆ ಈಗ ಸ್ಯಾಂಡಲ್‌ವುಡ್‌ನಟಿಯೊಬ್ಬರು ಈಗ ಹ್ಯಾರಿಸ್ ಪರವಾಗಿ ಟ್ವೀಟ್‌ಮಾಡಿದ್ದಾರೆ.

ಗಂಡ ಹೆಂಡತಿ ಚಿತ್ರದ ಖ್ಯಾತಿಯ ಸಂಜನಾ ಈಗ ಶಾಂತಿನಗರ ಶಾಸಕರ ಪರವಾಗಿ ಟ್ವೀಟಿಸಿದ್ದಾರೆ.

ಮಗ ಮಾಡಿದ ಕೃತ್ಯದಿಂದ ಸಾರ್ವಜನಿಕವಾಗಿ ತಲೆ ತಗ್ಗಿಸಬೇಕಾಗಿ ಬಂದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪರ ಸ್ಯಾಂಡಲ್‌ವುಡ್‌ನಟಿ ಸಂಜನಾ ಗರ್ಲಾನಿ ಟ್ವೀಟ್‌ಮಾಡಿದ್ದಾರೆ.

ಒಬ್ಬ ಉತ್ತಮ ನಾಯಕ ಅವರದ್ದೇನೂ ತಪ್ಪಿಲ್ಲದೆ ಮಗ ಮಾಡಿರುವ ತಪ್ಪಿಗೆ ಬೆಲೆ ತೆರಬೇಕಾಗಿ ಬಂದಿರುವುದಕ್ಕೆ ಅನುಕಂಪವಿದೆ ಎಂದು ಟ್ವೀಟ್‌ಮಾಡಿದ್ದಾರೆ. ಎರಡು ದಶಕಗಳಿಂದ ಉತ್ತಮ ಶಾಸಕರಾಗಿರುವ ಹ್ಯಾರಿಸ್‌ಅವರಿಗೆ ಹೀಗಾಗಬಾರದಿತ್ತು ಎಂದು ಹ್ಯಾರಿಸ್ ಮೇಲೆ ಅನುಕಂಪ ತೋರಿದ್ದಾರೆ.

ಕಾಂಗ್ರೆಸ್‌ಶಾಸಕ ಹ್ಯಾರಿಸ್‌ಅವರ ಮಗ ಮೊಹಮದ್‌ನಲಪಾಡ್‌ಯುಬಿ ಸಿಟಿಯ ಫರ್ಜಿ ಬಾರ್‌ನಲ್ಲಿ ಸಂಗಡಿಗರೊಂದಿಗೆ ಕೂಡಿ ವಿದ್ವತ್‌ಎಂಬವರ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿ ಇದೀಗ ಪೊಲೀಸ್‌ಅತಿಥಿಯಾಗಿದ್ದಾರೆ.

Comments are closed.