ಆರೋಗ್ಯ

ಕೀಲುನೋವು ನಿವಾರಣೆಗೆ ಈ ಜ್ಯೂಸ್ ಸಹಕಾರಿಯಂತೆ….?

Pinterest LinkedIn Tumblr

ಸಾಮಾನ್ಯವಾಗಿ ವಯಸ್ಸಾದವರಿಗೆ ಮೊಣಕಾಲು ನೋವು ಬರುತ್ತದೆ. ಆದರೆ ಈಗ ಈ ಸಮಸ್ಯೆ ಪ್ರತಿಯೊಬ್ಬರಲ್ಲೂ ಸಾಮಾನ್ಯವಾಗಿಬಿಟ್ಟಿದೆ. ಇದಕ್ಕೆ ಮುಖ್ಯ ಕಾರಣ ಆಹಾರ ನಿಯಮಗಳು….ಇದು ಸತ್ಯವಾದ ಮಾತು. ಪೌಷ್ಟಿಕಾಹಾರದ ಕೊರತೆಯಿಂದ ಮೊಣಕಾಲು ನೋವು ಬರುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೇಳಿಕೊಳ್ಳಲಾಗದಂತಹ ಈ ನೋವಿನ ನಿವಾರಣೆಗಾಗಿ ವಿವಿಧ ರೀತಿಯ ಚಿಕಿತ್ಸೆಗಳನ್ನು ಮಾಡಿಸಿ, ಸಾವಿರಾರು ರೂಪಾಯಿಗಳನ್ನು ವ್ಯಯಿಸುತ್ತಿರುತ್ತಾರೆ. ಈ ನೋವಿಗೆ ಕ್ಯಾಲ್ಷಿಯಂ ಇಲ್ಲದಿರುವುದೇ ಮುಖ್ಯ ಕಾರಣ.

ತುಂಬಾ ನಡೆಯುವವರಿಗೆ, ಹೆಚ್ಚಾಗಿ ನಿಂತಿರುವವರಿಗೆ, ವಿಟಮಿನ್ ‘ಬಿ’ ಐರನ್ ಇವುಗಳ ಲೋಪದಿಂದ ನೋವು ಬರುತ್ತದೆ. ಕೇವಲ ಈ ಹಣ್ಣಿನ ರಸವನ್ನು ಪ್ರತಿದಿನ ತೆಗೆದುಕೊಂಡರೆ ಮೊಣಕಾಲು ನೋವು ಸುಲಭವಾಗಿ ಉಪಶಮನವಾಗುವುದೆಂದು ಈಗ ಆಯುರ್ವೇದ, ನ್ಯಾಚುರೋಪತಿ ವೈದ್ಯರು ಪ್ರತಿದಿನದ ಆಹಾರದಲ್ಲಿ ಇದನ್ನೂ ತೆಗೆದುಕೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ. ಅದು ಏನು? ಹಾಗೂ ಹೇಗೆ ತಯಾರಿಸಿಕೊಳ್ಳುವುದು ಎಂಬುದನ್ನು ನೋಡೋಣ…..

ಬೇಕಾದ ಪದಾರ್ಥಗಳು :
ದಾಲ್ಚಿನಿ
ಅನಾನಸ್
ಓಟ್ಸ್
ನೀರು
ಆರೆಂಜ್ ಜ್ಯೂಸ್
ಜೇನುತುಪ್ಪ

ತಯಾರಿಸುವ ವಿಧಾನ :
ಮೊದಲು ಓಟ್ಸ್ ಅನ್ನು ನೀರಿನಲ್ಲಿ ಕುದಿಸಬೇಕು. ತಣ್ಣಗಾದ ನಂತರ ಮೇಲೆ ತಿಳಿಸಿದ ಪದಾರ್ಥಗಳನ್ನು ಗ್ರೈಂಡ್ ಮಾಡಿಕೊಂಡು ಪಾನೀಯವನ್ನು ತಕ್ಷಣವೇ ಕುಡಿಯಬೇಕು. ಪ್ರತಿದಿನ ಹೀಗೆ ಮಾಡುವುದರಿಂದ ಮೊಣಕಾಲು ನೋವಿನೊಂದಿಗೆ ಇತರೇ ಕೀಲು ನೋವು, ಕೀಲು ಊತಗಳು ಸಹಾ ನಿವಾರಣೆಯಾಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಮೊಣಕಾಲು ನೋವಿಗೆ ಔಷಧಿ ಬಳಸುತ್ತಿರುವವರು ಸಹಾ ಈ ಪಾನೀಯ ಅನ್ನು ಕುಡಿಯಬಹುದು.

ಉಪಯೋಗಗಳು :
ಈ ಪಾನೀಯದಲ್ಲಿ ಆಂಟಿ ಇನ್ ಫ್ಲಮೇಟರಿ ಪ್ರಾಪರ್ಟೀಸ್ ಇರುವುದರಿಂದ ಕೀಲು ನೋವಿಗೆ ಹೆಚ್ಚಿನ ಉಪಯುಕ್ತವಾಗುತ್ತದೆ. ಇದರಲ್ಲಿರುವ ಸಿಲಿಕಾನ್, ಬ್ರಮಿಲೈನ್, ವಿಟಮಿನ್ ಸಿ, ಮೆಗ್ನೀಷಿಯಂ ಪೋಷಕಾಂಶಗಳು ನೋವಿನಿಂದ ರಕ್ಷಿಸಲು ಸಹಾಯವಾಗುತ್ತವೆ.

ಅನಾನಸ್ ನಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಇದು ಮೂಳೆಗಳಿಗೆ ತುಂಬಾ ಉಪಯುಕ್ತವಾದದ್ದು. ದಾಲ್ಚಿನಿಯಲ್ಲಿ ದೇಹದಲ್ಲಿ ರಕ್ತ ಪ್ರಸಾರವನ್ನು ವೃದ್ಧಿಗೊಳಿಸುತ್ತದೆ

Comments are closed.