ಆರೋಗ್ಯ

ಈ X-ರೇ ಪೋಷಕರಿಗೆ ಎಚ್ಚರಿಕೆಯ ಗಂಟೆ

Pinterest LinkedIn Tumblr

ನೀವು ಪೋಷಕರಾದ ಮೇಲೆ ಅಷ್ಟೇ ನಿಮಗೆ ಗೊತ್ತಾಗುವುದು, ಹೇಗೆ ಮನೆಯ ಪ್ರತಿಯೊಂದು ಮೂಲೆಯೂ, ವಸ್ತುವೂ ನಿಮ್ಮ ಸಂಸಾರಕ್ಕೆ ಅಪಾಯ ಉಂಟು ಮಾಡುತ್ತದೆ ಎಂದು.

ನೀವು ಅಂದುಕೊಳ್ಳಲು ಸಾಧ್ಯವೇ ಇರದಂತಹ ವಸ್ತುಗಳು, ನೀವು ಊಹಿಸಲಾಗದಷ್ಟು ಹೆಚ್ಚಿನ ಪ್ರಮಾಣದಲ್ಲಿ ನಿಮಗೆ ಅಪಾಯ ತಂದು ಒಡ್ಡಬಹುದು. ಹೊಸದಾಗಿ ಮಗುವಾಗಿದ್ದರಂತೂ ನಿಮಗೆ ಯಾವುದು ನಿಮಗೆ ಅಪಾಯಕಾರಿ ಎಂದು ತಿಳಿದುಕೊಳ್ಳುವುದು ಕೂಡ ಕಷ್ಟವಾಗುತ್ತದೆ. ಹೌದು, ಮನೆಯಲ್ಲಿ ಮಕ್ಕಳಿಗೆ ಗಾಯ ಅಥವಾ ಇನ್ನ್ಯಾವುದೋ ಅಪಘಾತ ಆಗದಂತೆ ನಾವು ಎಷ್ಟು ಸಾಧ್ಯವೋ ಅಷ್ಟು ಮನೆಯ ಸ್ತಿಥಿಯನ್ನ ಬದಲಿಸುತ್ತೇವೆ, ಆದರೆ ಎಲ್ಲಾ ಚಿಕ್ಕ ಚಿಕ್ಕ ವಿಷಯಗಳಲ್ಲೂ ನಾವು 100% ಸುರಕ್ಷಿತ ಕ್ರಮಗಳನ್ನ ಕೈಗೊಂಡಿದ್ದೇವೆ ಎಂದು ಹೇಳಲು ಸಾಧ್ಯವಾಗುವುದಿಲ್ಲ.

ಇಲ್ಲಿ ಕೂಡ ಆಗಿದ್ದು ಅದೇ! ಈ ಮೈ ಜುಮ್ಮ್ ಎನಿಸುವ ಸುದ್ದಿಯು ಈಗ ಎಲ್ಲೆಡೆ ಪೋಷಕರು ಬೆಚ್ಚಿ ಬೀಳುವಂತೆ ಮಾಡುತ್ತಿದೆ. ಒಂದು ದಿನ ಕೇವಲ 2 ವರ್ಷದ ಮಗು ಚೆನ್ಚೆನ್ ತನ್ನ ಬೆಡ್ ಮೇಲೆ ಜಿಗಿದು, ಕುಣಿದು ಕುಪ್ಪಳಿಸುತ್ತಿದ್ದ. ಆಗಲೇ ನಡೆದದ್ದು ಈ ಅಚಾತುರ್ಯ! ಹೀಗೆ ಮಂಚದ ಮೇಲೆ ಜಿಗಿಯುತ್ತಿರುವಾಗ ಆಯಾ ತಪ್ಪಿ ಮಗು ಮಂಚದಿಂದ ನೆಲಕ್ಕೆ ಅಪ್ಪಳಿಸಿದ್ದಾನೆ. ಆದರೆ, ಅದು ಹಣೆಯ ಮೇಲೆ ಕೇವಲ ಒಂದು ಬುಗುಟು ಉಂಟು ಮಾಡಿದ್ದರೂ, ಮಗು ಹೇಗೋ ಸ್ವಲ್ಪ ಸಮಯ ಅತ್ತು, ಅನಂತರ ಸುಧಾರಿಸಿಕೊಳ್ಳುತ್ತಿತ್ತು. ಆದರೆ, ಅಲ್ಲಿ ಆಗಿದ್ದೆ ಬೇರೆ!

ಚೆನ್ಚೆನ್ ನೆಲಕ್ಕೆ ತಲೆ ಮುಂದೆ ಮಾಡಿ ಅಪ್ಪಳಿಸಿದ್ದಾನೆ. ಹೀಗೆ ಬೀಳುವಾಗ ಆತನು ಸೀದಾ ನೆಲದ ಮೇಲೆ ಬಿದ್ದಿದ್ದ ಒಂದು ಎಲೆಕ್ಟ್ರಿಕಲ್ ಪವರ್ ಸಾಕೆಟ್ ಮೇಲೆಯೇ ನೇರವಾಗಿ ತನ್ನ ತಲೆಯನ್ನ ಇಟ್ಟಿದ್ದಾನೆ. ಆಗಲೇ ಈ ಎರಡು ವರ್ಷದ ಚಿಕ್ಕ ಮಗುವಿನ ತಲೆಯೊಳಗೆ ಈ ಪವರ್ ಸಾಕೆಟ್ ನುಗ್ಗಿರುವುದು!

ಈ ದೃಶ್ಯ ಕಂಡೊಡನೆ ಗಾಬರಿಗೊಂಡ ಪೋಷಕರು ಅವನನ್ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ತಪಾಸಣೆ ನಡೆಸಿದಾಗ X-ರೇ ಅಲ್ಲಿ ಮಗುವಿನ ಮೆದುಳಿಗೇನೇ ಈ ಪವರ್ ಸಾಕೆಟ್ ಪಿನ್ನುಗಳು ನುಗ್ಗಿರುವುದು ಕಂಡುಬಂತು. ಈ X-ರೇ ಚಿತ್ರಗಳು ಜಗತ್ತಿನಾದ್ಯಂತ ಪೋಷಕರನ್ನ ಮತ್ತು ವೈದ್ಯರನ್ನ ಬೆಚ್ಚಿಬೀಳಿಸಿವೆ.

ಮಗುವಿನ ಮೇಲೆ ಆ ಕೂಡಲೇ ವೈದ್ಯರು ಆಪರೇಷನ್ ಮಾಡಿ, ಮೆದುಳಿಗೆ ಮತ್ತಷ್ಟು ಹಾನಿಯಾಗದಂತೆ, ಎಷ್ಟು ಜಾಗರೂಕತೆಯಿಂದ ಸಾಧ್ಯವೋ ಅಷ್ಟು ಜಾಗರೂಕತೆಯಿಂದ ಸಾಕೆಟ್ ಅನ್ನು ಮಗುವಿನ ತಲೆಯಿಂದ ಹೊರತೆಗೆದಿದ್ದಾರೆ. ಸುಮಾರು ಸತತ ಮೂರು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ವೈದ್ಯರು ಹರಸಾಹಸ ಮಾಡಿ ಸಾಕೆಟ್ ಅನ್ನು ಮಗುವಿನ ತಲೆಯಿಂದ ಹೊರತೆಗೆದು, ಮಗುವಿನ ತಲೆಯನ್ನು ಹೊಲಿದಿದ್ದಾರೆ. ಭವಿಷ್ಯದಲ್ಲಿ ಮಗುವಿಗೆ ಏನಾದರೂ ತೊಂದರೆ ಉಂಟಾಗಬಹುದ ಎಂಬ ಪ್ರಶ್ನೆಗೆ ವೈದ್ಯರಲ್ಲಿ ಸದ್ಯಕ್ಕೆ ಉತ್ತರವಿಲ್ಲ. ಆದರೆ, ಮಗು ಚೇತರಿಸಿಕೊಳ್ಳುವನು ಎಂಬ ಆಶಾಭಾವನೆ ಅವರಲ್ಲಿದೆ.

ಈ ಸುದ್ದಿಯು ಮನೆಯಲ್ಲಿ ಮಕ್ಕಳು ಇದ್ದರೆ, ಮನೆಯನ್ನ ಇಟ್ಟುಕೊಳ್ಳುವುದು ಎಷ್ಟು ಕಷ್ಟ ಎಂಬುದನ್ನ ತೋರಿಸುತ್ತದೆ. ಈ ಸುದ್ದಿಯು ಎಲ್ಲಾ ಪೋಷಕರಿಗೂ ಮತ್ತೊಂದು ಎಚ್ಚರಿಕೆಯ ಗಂಟೆಯಾಗಿದೆ.

Comments are closed.