ರಾಷ್ಟ್ರೀಯ

​ವೇಶ್ಯೆಯರ ನೆರವಿನಿಂದ ಬಾಲಕಿಯ ರಕ್ಷಣೆ

Pinterest LinkedIn Tumblr


ಹೊಸದಿಲ್ಲಿ: ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಕಾರಣಕ್ಕೆ ಮನೆ ತೊರೆದ ಬಾಲಕಿಯನ್ನು ಕೋಲ್ಕೊತಾ ಕೆಂಪು ದೀಪ ಪ್ರದೇಶ ಸೋನಾ ಗಚ್ಚಿಯ ವೇಶ್ಯೆಯರ ನೆರವಿನಿಂದ ರಕ್ಷಿಸಲಾಗಿದೆ.

ಬಾಲಕಿ ತಪ್ಪು ವಿಳಾ ಸ ಮತ್ತು ಪೋನ್‌ ನಂಬರ್‌ ಹೇಳಿ ಪೊಲೀಸರ ದಾರಿ ತಪ್ಪಿಸುವ ಪ್ರಯತ್ನ ನಡೆಸಿದ್ದಳು. ಬಾಲಕಿ ಉತ್ತರ ಕೋಲ್ಕೊತಾದ ದಂಕುನಿ ಪ್ರದೇಶದ ನಿವಾಸಿ. ಮಾಧ್ಯಮಿಕ ಪ್ರವೇಶ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದಳು. ಇದರಿಂದಾಗಿ ಮನೆ ಬಿಟ್ಟ ಆಕೆ ಬಸ್ಸು ಮತ್ತು ನಡೆದು ಮೊದಲು ಶ್ಯಾಂ ಬಜಾರ್‌ ಬಳಿಕ ಶೊವಾ ಬಜಾರ್‌ಗೆ ಹೋಗಿದ್ದಳು. ಶೊವಾ ಬಜಾರ್‌ನಲ್ಲಿ ವೇಶ್ಯೆಯೊಬ್ಬರಲ್ಲಿ ಮಾತನಾಡಿ ಆಶ್ರಯ ಕೋರಿ ಅವರ ಮನೆಯಲ್ಲಿದ್ದಳು.

ಅಪ್ರಾಪ್ತ ವಯಸ್ಕರನ್ನು ವೇಶ್ಯಾ ದಂಧೆಯ ಜಾಲದಿಂದ ಬಿಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಯ ಸದಸ್ಯರಿಗೆ ಇಮಾಮ್‌ ಬಕ್ಸ್‌ ಲೇನ್‌ನಲ್ಲಿ ಹೊಸ ಹುಡುಗಿ ಇರುವ ವಿಷಯ ತಿಳಿಯುತ್ತದೆ. ಅವರು ಬಾಲಕಿಯ ರಕ್ಷಣೆಗಾಗಿ ಸ್ಥಳಕ್ಕೆ ಆಗಮಿಸಿದ್ದು, ಅಲ್ಲಿನ ಮನೆಯ ಮಾಲಕಿ ಕೂಡ ಈ ಕಾರ್ಯಾಚರಣೆಗೆ ಸಹಕರಿಸಿದ್ದಾರೆ. ಬಾಲಕಿ ಸರಿಯಾದ ವಿಳಾಸ , ಪೋನ್‌ ನಂಬರ್‌ ಕೊಡದ ಕಾರಣ ಸಂಸ್ಥೆಯು ಪೊಲೀಸರಿಗೆ ವಿಷಯ ತಿಳಿಸಿದೆ.

Comments are closed.