ಆರೋಗ್ಯ

ಜೇನಿನಲ್ಲಿದೆ ಯೌವನ ಕಾಪಾಡುವ ಗುಟ್ಟು

Pinterest LinkedIn Tumblr


ಜೇನುತುಪ್ಪ ಆರೋಗ್ಯಕರ ಹಾಗೂ ಸೌಂದರ್ಯವರ್ಧಕ ಗುಣಗಳನ್ನು ಹೊಂದಿದ್ದು, ಇದನ್ನು ಬಳಸಿ ಈ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:

ಜೇನುತುಪ್ಪದ ಆರೋಗ್ಯಕರ ಗುಣಗಳು

1. ಜೇನು ತುಪ್ಪವನ್ನು ಸ್ವಲ್ಪ ಕರಿ ಮೆಣಸಿನ ಪುಡಿಯೊಂದಿಗೆ ಮಿಕ್ಸ್ ಮಾಡಿ ತಿಂದರೆ ಕೆಮ್ಮು ಕಡಿಮೆಯಾಗುವುದು.

2. ತೂಕ ಹೆಚ್ಚಬೇಕೆಂದು ಬಯಸುವವರು ಹಾಲಿನೊಂದಿಗೆ ಜೇನು ತುಪ್ಪ ಹಾಕಿ ಕುಡಿದರೆ ಮೈ ತೂಕ ಹೆಚ್ಚುವುದು.

3. ತೂಕ ಕಮ್ಮಿಯಾಗಬೇಕೆಂದು ಬಯಸುವವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆರಸ, ಜೇನುತುಪ್ಪ ಹಾಕಿ ಕುಡಿಯುವುದರಿಂದ ಬೊಜ್ಜು ಕರಗಿಸಬಹುದು.

4. ವಾಂತಿ ಬಂದಂತೆ ಅನಿಸಿದಾಗ ಸ್ವಲ್ಪ ಶುಂಠಿ ಪುಡಿಗೆ ಜೇನು ತುಪ್ಪ ಮಿಶ್ರಣ ಮಾಡಿ ತಿಂದರೆ ಬಾಯಲ್ಲಿ ನೀರು ಬರುವುದು, ಹೊಟ್ಟೆ ಸಂಕಟ ಕಡಿಮೆಯಾಗುವುದು.

5. ರಕ್ತದೊತ್ತಡ ಸಮಸ್ಯೆಯಿದ್ದರೆ ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೇನುತುಪ್ಪ ಸೇವಿಸುವುದು ಒಳ್ಳೆಯದು.

6. ಚಿಕ್ಕಪುಟ್ಟ ಗಾಯಗಳಾದರೆ ಜೇನುತುಪ್ಪ ಹಚ್ಚಿದರೆ ಬೇಗನೆ ಗುಣಮುಖವಾಗುವುದು.

ಸೌಂದರ್ಯವರ್ಧಕ ಗುಣಗಳು:

* ಜೇನುತುಪ್ಪವನ್ನು ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಹೆಚ್ಚಾಗುವುದು.

* ಕಣ್ಣಿನ ಬಳಿ ಬೀಳುವ ನೆರಿಗೆ ನಮ್ಮ ವಯಸ್ಸನ್ನು ಸೂಚಿಸುತ್ತದೆ. ಕಣ್ಣಿಗೆ ವಾರಕ್ಕೆ ಎರಡು ಬಾರಿ ಜೇನುತುಪ್ಪ ಹಾಕಿ ಮಸಾಜ್‌ ಮಾಡಿದರೆ ಕಣ್ಣಿನ ಹತ್ತಿರ ನೆರಿಗೆ ಬೀಳುವುದನ್ನು ತಡೆಗಟ್ಟಬಹುದು.

Comments are closed.